ಸಿಎಂ ಕಚೇರಿಗೆ ಕರೆಸಿಕೊಂಡು ಸನ್ಮಾನಿಸಿದ ಶಿವರಾಜ್ ಸಿಂಗ್ ಚೌಹಾಣ್
ಆದಿವಾಸಿಗನ ಮೇಲೆ ಮೂತ್ರ ವಿಸರ್ಜಿಸಿದ್ದ BJP ಕಾರ್ಯಕರ್ತನ ವಿಡಿಯೋ
BJP ಕಾರ್ಯಕರ್ತ ಪರ್ವೇಶ್ ಶುಕ್ಲಾನ ನೀಚ ಕೃತ್ಯಕ್ಕೆ ಸಿಎಂ ಕ್ಷಮೆಯಾಚನೆ
ಭೋಪಾಲ್: ಕಳೆದ ಎರಡು ದಿನದಿಂದ ಒಂದೇ ಒಂದು ವಿಡಿಯೋ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಮಧ್ಯಪ್ರದೇಶದ ಸಿದ್ಧಿ ಜಿಲ್ಲೆಯಲ್ಲಿ ನಡೆದಿದ್ದ ಈ ಅಮಾನವೀಯ ಕೃತ್ಯಕ್ಕೆ ನಾಗರಿಕರ ನರನಾಡಿಗಳಲ್ಲಿ ರಕ್ತ ಕುದಿಯುತಿತ್ತು. ಆದಿವಾಸಿ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ವಿಡಿಯೋ ವೈರಲ್ ಆಗ್ತಿದ್ದಂತೆ ಮಧ್ಯಪ್ರದೇಶ ಸರ್ಕಾರ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿತ್ತು. ಅಂದು ಮೂತ್ರ ವಿಸರ್ಜನೆಯ ಘೋರ ಅವಮಾನಕ್ಕೆ ತುತ್ತಾದ ಸಂತ್ರಸ್ತ ವ್ಯಕ್ತಿಗೆ ಇಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕರೆದು ಕಾಲು ತೊಳೆದು ಸನ್ಮಾನಿಸಿದ್ದಾರೆ.
ಆದಿವಾಸಿ ವ್ಯಕ್ತಿಯ ಮೇಲೆ ಬಿಜೆಪಿ ಕಾರ್ಯಕರ್ತ ಪರ್ವೇಶ್ ಶುಕ್ಲಾ ಮೂತ್ರ ವಿಸರ್ಜನೆ ಮಾಡಿದ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಕ್ಷಮೆಯಾಚಿಸಿದ್ದಾರೆ. ಇಂದು ಸಂತ್ರಸ್ತ ವ್ಯಕ್ತಿಯ ಕಾಲು ತೊಳೆದು ವಿಶೇಷ ಗೌರವಗಳೊಂದಿಗೆ ಸನ್ಮಾನವನ್ನು ಮಾಡಿದ್ದಾರೆ. #NewsFirstKannada #Newsfirstlive… pic.twitter.com/BIYOMkrfh2
— NewsFirst Kannada (@NewsFirstKan) July 6, 2023
ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಬುಡಕಟ್ಟು ಜನಾಂಗದ ವ್ಯಕ್ತಿಯ ಮೇಲೆ ಬಿಜೆಪಿ ಕಾರ್ಯಕರ್ತ ಪರ್ವೇಶ್ ಶುಕ್ಲಾ ಎನ್ನುವವರು ಮೂತ್ರ ವಿಸರ್ಜನೆ ಮಾಡಿದ್ದರು. ಆದಿವಾಸಿಗನ ಮೇಲೆ ಮೂತ್ರ ವಿಸರ್ಜನೆಯ ವಿಡಿಯೋ ದೇಶಾದ್ಯಂತ ವೈರಲ್ ಆಗಿತ್ತು. ಈ ವಿಡಿಯೋ ಸಂಚಲನ ಸೃಷ್ಟಿಸುತ್ತಿದ್ದಂತೆ ಪೊಲೀಸರು ಆರೋಪಿ ಪರ್ವೇಶ್ ಶುಕ್ಲಾರನ್ನು ಬಂಧಿಸಿದ್ದಾರೆ. ಈ ಘಟನೆಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದಂತೆ ನಿನ್ನೆಯಷ್ಟೇ ಸಿದ್ಧಿ ಜಿಲ್ಲೆಯ ಜಿಲ್ಲಾಧಿಕಾರಿ ಪರ್ವೇಶ್ ಶುಕ್ಲಾ ಅವರ ಮನೆಯನ್ನು ಧ್ವಂಸಗೊಳಿಸುವಂತೆ ಆದೇಶಿಸಿದ್ದರು. ಇಷ್ಟಾದ್ರೂ ನೀಚ ಕೃತ್ಯಕ್ಕೆ ವ್ಯಕ್ತವಾದ ಆಕ್ರೋಶ ಕಡಿಮೆ ಆಗಲಿಲ್ಲ. ಈ ಘಟನೆಯ ತೀವ್ರತೆ ಅರಿತುಕೊಂಡಿರುವ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಅಂದು ಅವಮಾನಕ್ಕೆ ಒಳಗಾದ ಸಂತ್ರಸ್ತನಿಗೆ ಸನ್ಮಾನ ಮಾಡಿದ್ದಾರೆ.
ಸಿಎಂ ಶಿವರಾಜ್‌ಸಿಂಗ್ ಚೌಹಾಣ್ ಅವರು ಇಂದು ಭೋಪಾಲ್‌ನ ತಮ್ಮ ನಿವಾಸಕ್ಕೆ ಆದಿವಾಸಿ ಜನಾಂಗದ ದಶಮತ್ ರಾವತ್ ಅವರನ್ನು ಆಹ್ವಾನಿಸಿದ್ದರು. ಸಂತ್ರಸ್ತ ವ್ಯಕ್ತಿ ಆಗಮಿಸುತ್ತಿದ್ದಂತೆ ಖುದ್ದು ಬರಮಾಡಿಕೊಂಡ ಸಿಎಂ ಶಿವರಾಜ್‌ಸಿಂಗ್ ಚೌಹಾಣ್ ಆತ್ಮೀಯವಾಗಿ ಯೋಗಕ್ಷೇಮ ವಿಚಾರಿಸಿದರು. ಆ ವಿಡಿಯೋ ನೋಡಿ ನನಗೆ ತುಂಬಾ ನೋವಾಯಿತು. ಈ ರಾಜ್ಯದ ಜನರು ನನಗೆ ದೇವರಿದ್ದಂತೆ. ನಿಮ್ಮಲ್ಲಿ ನಾನು ಕ್ಷಮೆ ಕೇಳುತ್ತೇನೆ ಎಂದ ಶಿವರಾಜ್ ಸಿಂಗ್ ಚೌಹಾಣ್, ದಶಮತ್ ರಾವತ್‌ಗೆ ಕ್ಷಮೆ ಕೋರಿದರು.
ಇದನ್ನೂ ಓದಿ: WATCH: ಆದಿವಾಸಿಗನ ಮೇಲೆ ಮೂತ್ರ ವಿಸರ್ಜನೆ ಮಾಡಿದವನಿಗೆ ಬುದ್ಧಿ ಕಲಿಸಿದ ಸರ್ಕಾರ; ಆ ನೀಚನ ಕಥೆ ಏನಾಯ್ತು?
ಆದಿವಾಸಿ ವ್ಯಕ್ತಿಯ ಕಾಲು ತೊಳೆದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಶಾಲು ಹೊದಿಸಿ ವಿಶೇಷ ಗೌರವ ಕೊಟ್ಟು ಸನ್ಮಾನಿಸಿದರು. ಕೆಲ ಹೊತ್ತು ಸಂತ್ರಸ್ತನ ಜೊತೆ ಮಾತುಕತೆ ನಡೆಸಿದ ಬಳಿಕ ಗೌರವಾರ್ಥವಾಗಿ ಗಿಡ ನೆಡುವ ಮೂಲಕ ಸೌಹಾರ್ದತೆಯ ಸಂದೇಶ ಸಾರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
यह वीडियो मैं आपके साथ इसलिए साझा कर रहा हूँ कि सब समझ लें कि मध्यप्रदेश में शिवराज सिंह चौहान है, तो जनता भगवान है।
किसी के साथ भी अत्याचार बर्दाश्त नहीं किया जायेगा। राज्य के हर नागरिक का सम्मान मेरा सम्मान है। pic.twitter.com/vCuniVJyP0
— Shivraj Singh Chouhan (@ChouhanShivraj) July 6, 2023
एक ही चेतना सब में है
वृक्ष बिना किसी भेदभाव के सबको प्राणवायु देते हैं
हम भी वृक्ष जैसे बनें
दशमत जी के साथ पौधारोपण किया pic.twitter.com/qNVTFrqUjq— Shivraj Singh Chouhan (@ChouhanShivraj) July 6, 2023