newsfirstkannada.com

ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ಹಾವಿಗೆ ಪುನರ್ಜನ್ಮ.. ಕಾನ್ಸ್‌ಟೇಬಲ್‌ ಟ್ರೀಟ್ಮೆಂಟ್‌ಗೆ ಎಲ್ರೂ ಫಿದಾ; ವಿಡಿಯೋ ನೋಡಿ

Share :

26-10-2023

  ಪ್ರಜ್ಞೆ ಕಳೆದುಕೊಂಡ ಹಾವಿಗೆ CPR ಟ್ರೀಟ್ಮೆಂಟ್‌ ಕೊಟ್ಟ ಕಾನ್ಸ್‌ಟೇಬಲ್

  ರಾಸಾಯನಿಕ ವಿಷಪೂರಿತ ನೀರು ಕುಡಿದು ಸಾಯೋ ಸ್ಥಿತಿಯಲ್ಲಿದ್ದ ಹಾವು

  ಹಾವು ಬದುಕೋ ಸಾಧ್ಯತೆಯನ್ನು ಗಮನಿಸಿದ ಕಾನ್ಸ್‌ಟೇಬಲ್‌ರಿಂದ ಚಿಕಿತ್ಸೆ

ನರ್ಮದಾಪುರಂ: ಯಾರೇ ಆಗಲಿ ಕಷ್ಟದಲ್ಲಿದ್ದಾಗ ಸಹಾಯ ಮಾಡೋದು ಮಾನವ ಧರ್ಮ. ಒಂದು ಜೀವ ಉಳಿಸೋದು ಅದಕ್ಕಿಂತಲೂ ಮಿಗಿಲು. ಮಧ್ಯಪ್ರದೇಶ ನರ್ಮದಾಪುರಂನ ಕಾನ್ಸ್‌ಟೇಬಲ್‌ ಅತುಲ್ ಶರ್ಮಾ ಸಾಯುತ್ತಿದ್ದ ಹಾವಿಗೆ ಪುನರ್ಜನ್ಮ ಕೊಟ್ಟು ಸೋಷಿಯಲ್ ಮೀಡಿಯಾದಲ್ಲಿ ಹೀರೋ ಆಗಿದ್ದಾರೆ. ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ಹಾವಿಗೆ ಈ ಪೊಲೀಸಪ್ಪ ನೀಡಿದ್ದ CPR ಟ್ರೀಟ್ಮೆಂಟ್‌ ಬಗ್ಗೆಯೂ ಬಹಳಷ್ಟು ಚರ್ಚೆಯಾಗುತ್ತಿದೆ. ಅರೆ, ಏನಾಯ್ತು? ಕಾನ್ಸ್‌ಟೇಬಲ್ ಕೊಟ್ಟ ಟ್ರೀಟ್ಮೆಂಟ್‌ನಿಂದ ಹಾವು ಬದುಕಿದ್ದು ಹೇಗೆ ಅನ್ನೋ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ ನೋಡಿ.

ನರ್ಮದಾಪುರಂನಲ್ಲಿ ರಾಸಾಯನಿಕ ವಿಷಪೂರಿತ ನೀರು ಕುಡಿದು ಹಾವೊಂದು ಪ್ರಜ್ಞೆ ಕಳೆದುಕೊಂಡಿತ್ತು. ಈ ಹಾವಿನ ಸ್ಥಿತಿಯನ್ನು ನೋಡಿದ ಕಾನ್ಸ್‌ಟೇಬಲ್ ಅತುಲ್ ಶರ್ಮಾ ಅವರು ಕೂಡಲೇ ಕೈಯಲ್ಲಿ ಎತ್ತಿಕೊಂಡು ನೋಡಿದ್ದಾರೆ. ಹಾವು ಬದುಕೋ ಸಾಧ್ಯತೆಯನ್ನು ಗಮನಿಸಿದ ಕಾನ್ಸ್‌ಟೇಬಲ್, ಕೂಡಲೇ ಹಾವಿನ ಬಾಯಿಗೆ ಬಾಯಿ ಹಾಕಿ ಉಸಿರು ತುಂಬಿದ್ದಾರೆ.

ಅತುಲ್ ಶರ್ಮಾ ಅವರ ಪ್ರಯತ್ನಕ್ಕೆ ಕೆಲವೇ ಕ್ಷಣದಲ್ಲಿ ಯಶಸ್ಸು ಸಿಕ್ಕಿದೆ. ನಿಧಾನಕ್ಕೆ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ಹಾವು ಮೆಲ್ಲಗೆ ಉಸಿರಾಡಲು ಆರಂಭಿಸಿದೆ. ಸಾಯೋ ಸ್ಥಿತಿಯಲ್ಲಿದ್ದ ಹಾವು ಬಾಯಿ ತೆಗೆದಿದ್ದನ್ನು ನೋಡಿದ ಕಾನ್ಸ್‌ಟೇಬಲ್ ಸಂತಸ ವ್ಯಕ್ತಪಡಿಸಿದ್ದಾರೆ. ಹಾವಿಗೆ ಪುರ್ನಜನ್ಮ ನೀಡಿದ ಈ ಕಾನ್ಸ್‌ಟೇಬಲ್ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಕಾನ್ಸ್‌ಟೇಬಲ್ ಹಾವಿಗೆ ಪುನರ್ಜನ್ಮ ನೀಡಿದ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಾನ್ಸ್‌ಟೇಬಲ್ ಅತುಲ್ ಶರ್ಮಾ ಹಾವನ್ನು ಬದುಕಿಸಿರೋ ಟ್ರೀಟ್ಮೆಂಟ್ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿದೆ. ಈ ಚಿಕಿತ್ಸೆಯ ಮಾದರಿಯನ್ನು CPR ಎಂದರೆ ಕಾರ್ಡಿಯೋಪಲ್ಮನರಿ ಪುನರುಜ್ಜೀವನ ಎನ್ನಲಾಗುತ್ತದೆ. ಇದು ತುರ್ತು ಜೀವ ಉಳಿಸುವ ವಿಧಾನವಾಗಿದೆ. ಯಾರ ಉಸಿರಾಟ ಅಥವಾ ಹೃದಯ ಬಡಿತ ನಿಲ್ಲಿಸಿದಾಗ ಈ ವಿಧಾನವನ್ನು ಬಳಸಲಾಗುತ್ತದೆ. ವಿದ್ಯುತ್ ಆಘಾತ, ಹೃದಯಾಘಾತ ಅಥವಾ ನೀರಿನಲ್ಲಿ ಮುಳುಗಿದ ತುರ್ತುಸ್ಥಿತಿಯಲ್ಲಿ ಇದನ್ನು ವೈದ್ಯರು ಬಳಸಲು ಸಲಹೆ ನೀಡುತ್ತಾರೆ. ಇದರಿಂದ ಹೃದಯ ಹಾಗೂ ಶ್ವಾಸಕೋಶದ ಪ್ರಕ್ರಿಯೆ ಪುನಾರಂಭಿಸಲು ಸಾಧ್ಯವಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ಹಾವಿಗೆ ಪುನರ್ಜನ್ಮ.. ಕಾನ್ಸ್‌ಟೇಬಲ್‌ ಟ್ರೀಟ್ಮೆಂಟ್‌ಗೆ ಎಲ್ರೂ ಫಿದಾ; ವಿಡಿಯೋ ನೋಡಿ

https://newsfirstlive.com/wp-content/uploads/2023/10/Police-Snake-Life.jpg

Load More