ಛೀ.. ಥೂ.. ಪರಮ ನೀಚ.. ಅನಿಷ್ಟ.. ದುರಹಂಕಾರಿಯ ಕೃತ್ಯ
ಮನುಷ್ಯರಾದ ಯಾರೂ ಈ ದೃಶ್ಯವನ್ನ ನೋಡಲು ಸಾಧ್ಯವಿಲ್ಲ
ಕಠಿಣ ಕ್ರಮಕ್ಕೆ ಆದೇಶಿಸಿದ CM ಶಿವರಾಜ್ ಸಿಂಗ್ ಚೌಹಾಣ್
ಭೋಪಾಲ್: ಛೀ.. ಥೂ.. ಪರಮ ನೀಚ.. ಅನಿಷ್ಟ.. ದುರಹಂಕಾರಿ.. ಅದೊಂದು ವಿಡಿಯೋ ನೋಡಿ ಇಡೀ ದೇಶದ ಜನ ಇವತ್ತು ಅತ್ಯಂತ ಕೆಟ್ಟ ಶಬ್ಧಗಳಲ್ಲಿ ಬೈದಿದ್ದಾರೆ. ಯಾಕಂದ್ರೆ ಮನುಷ್ಯರಾದವರು ಯಾರೂ ಕೂಡ ಆ ಅಮಾನವೀಯ ದೃಶ್ಯವನ್ನ ನೋಡಲು ಸಾಧ್ಯವಿಲ್ಲ. ಮಧ್ಯಪ್ರದೇಶದಲ್ಲಿ ಆದಿವಾಸಿಗನ ಮೇಲೆ ಮೂತ್ರ ವಿಸರ್ಜನೆ ಮಾಡಿದವನಿಗೆ ಅಲ್ಲಿನ ಸರ್ಕಾರ ಬುದ್ಧಿ ಕಲಿಸಲು ಮುಂದಾಗಿದೆ. ದೇಶಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾದ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.
ಮಧ್ಯಪ್ರದೇಶದ ಸಿದ್ದಿ ಜಿಲ್ಲೆಯಲ್ಲಿ ನಡೆದಿದ್ದ ಈ ಘಟನೆ ದೇಶಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಆದಿವಾಸಿಗನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಬಿಜೆಪಿ ಕಾರ್ಯಕರ್ತನ ವರ್ತನೆಗೆ ನಾಗರಿಕರು ಬೆಚ್ಚಿ ಬಿದ್ದಿದ್ದರು. ಮೂತ್ರ ವಿಸರ್ಜನೆಯ ವಿಡಿಯೋ ವೈರಲ್ ಆಗ್ತಿದ್ದಂತೆ ಮಧ್ಯಪ್ರದೇಶ ಸರ್ಕಾರ ಅಲರ್ಟ್ ಆಗಿದೆ. ನಿನ್ನೆ ರಾತ್ರಿಯೇ ಆರೋಪಿ ಪರ್ವೇಶ್ ಶುಕ್ಲಾರನ್ನು ಪೊಲೀಸರು ಬಂಧಿಸಿದ್ದರು.
ಬಿಜೆಪಿ ಕಾರ್ಯಕರ್ತನೊಬ್ಬ ಇಂತಹ ದುಸ್ಸಾಹಸಕ್ಕೆ ಕೈ ಹಾಕಿದ್ದು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರಕ್ಕೂ ಇರಿಸು ಮುರಿಸು ತಂದಿತ್ತು. ವಿಡಿಯೋ ವೈರಲ್ ಆದ ಬಳಿಕ ಪ್ರತಿಕ್ರಿಯಿಸಿದ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಆರೋಪಿ ಪರ್ವೇಶ್ ಶುಕ್ಲಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಈತನಿಗೆ ಸಿಗುವ ಶಿಕ್ಷೆ ಇತರರಿಗೆ ಪಾಠವಾಗಬೇಕು ಎಂದಿದ್ದರು. ಈ ಎಲ್ಲಾ ಬೆಳವಣಿಗೆಯ ಬಳಿಕ ಮೂತ್ರ ಮಾಡಿದ್ದ ಆರೋಪಿಯ ಮನೆ ಧ್ವಂಸ ಮಾಡಲು ಜಿಲ್ಲಾಡಳಿತ ಆದೇಶ ನೀಡಿದೆ. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕೇಸ್ ದಾಖಲಿಸಿದ್ದು, ಆರೋಪಿಗೆ ಸಂಬಂಧಪಟ್ಟ ಮನೆಯನ್ನು ಬುಲ್ಡೋಜರ್‌ನಿಂದ ಧ್ವಂಸಗೊಳಿಸಲಾಗಿದೆ.
ಇದನ್ನೂ ಓದಿ: ಥೂ ಅನಿಷ್ಟ.. ಆದಿವಾಸಿ ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ ಮಾಡಿದ ದುರಹಂಕಾರಿ..!
ಪರ್ವೇಶ್ ಶುಕ್ಲಾ ನಿವಾಸಕ್ಕೆ ತೆರಳಿದ ಸಿದ್ಧಿ ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳು ಆರೋಪಿಯು ಅನಧಿಕೃತ ಜಾಗದಲ್ಲಿ ಮನೆ ನಿರ್ಮಿಸಿದ್ದಾನೆ ಎಂದು ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಮಧ್ಯಪ್ರದೇಶ ಸರ್ಕಾರ ನೀಚನಿಗೆ ಬುದ್ಧಿ ಕಲಿಸಲು ಬುಲ್ಡೋಜರ್ ಅಸ್ತ್ರ ಬಳಸಿರೋದು ಮತ್ತೊಂದು ಚರ್ಚೆಗೆ ಗುರಿಯಾಗಿದೆ. ಜೆಸಿಬಿಯಿಂದ ಮನೆ ಧ್ವಂಸಗೊಳಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿರೋ ಪರ್ವೇಶ್ ಶುಕ್ಲಾ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದೆ. ಆರೋಪಿ ಮನೆ ಧ್ವಂಸಗೊಳಿಸಿರೋ ಸರ್ಕಾರ ಇಷ್ಟಕ್ಕೆ ಸುಮ್ಮನಾಗುತ್ತಾ ಅಥವಾ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಆದಿವಾಸಿಗನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಆರೋಪಿಯ ಮನೆ ಧ್ವಂಸ ಮಾಡಲು ಮಧ್ಯಪ್ರದೇಶ ಸರ್ಕಾರ ಆದೇಶ ನೀಡಿದೆ. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕೇಸ್ ದಾಖಲಿಸಿದ್ದು, ಆರೋಪಿಗೆ ಸಂಬಂಧಪಟ್ಟ ಮನೆಯನ್ನು ಬುಲ್ಡೋಜರ್‌ನಿಂದ ಧ್ವಂಸಗೊಳಿಸಲಾಗಿದೆ. #NewsFirstKannada #Newsfirstlive #KannadaNews #MadhyaPradesh #Urinateontribal pic.twitter.com/QrkFak3s7L
— NewsFirst Kannada (@NewsFirstKan) July 5, 2023