newsfirstkannada.com

ಹೆಂಡತಿ ಮನೆಯಲ್ಲಿ ದಿನ ಜಗಳ ಮಾಡುತ್ತಾಳೆಂದು ಮೊಬೈಲ್​ ಟವರ್​ ಏರಿದ ವ್ಯಕ್ತಿ.. ಮುಂದೇನಾಯಿತು?

Share :

10-09-2023

    ಇಷ್ಟಕ್ಕೂ ಆ ವ್ಯಕ್ತಿಯು ಟವರ್ ಏರಿ ಸಾಯಲು ಮುಂದಾಗಿದ್ದೇಕೆ?

    ಮೊಬೈಲ್ ಟವರ್​ ಏರಿದ ವ್ಯಕ್ತಿಯನ್ನ ಕೆಳಗಿಳಿಸಲು ಹರಸಾಹಸ

    ಕೌಟುಂಬಿಕ ಕಲಹಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆಗೆ ಮುಂದಾದನಾ?

ಭೋಪಾಲ್: ಮನೆಯಲ್ಲಿ ಹೆಂಡತಿ ಪದೇ ಪದೇ ಜಗಳ ಮಾಡುತ್ತಿರುತ್ತಾಳೆ ಎಂದು ವ್ಯಕ್ತಿಯೊಬ್ಬರು ಮೊಬೈಲ್​ ಟವರ್ ಅನ್ನು ಏರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ.

ಸೋನು ಎನ್ನುವ ವ್ಯಕ್ತಿಯು ಹೆಂಡತಿಯ ಕಾಟ ತಾಳಲಾರದೇ ಟವರ್ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮನೆಯಲ್ಲಿ ನಿತ್ಯ ಯಾವುದಾದರೂ ವಿಷಯಕ್ಕೆ ಪತ್ನಿಯು ತನ್ನ ಜೊತೆ ಜಗಳ ಮಾಡುತ್ತಿರುತ್ತಾಳೆ. ಹೀಗಾಗಿ ಆಕೆಯಿಂದ ತಪ್ಪಿಸಿಕೊಳ್ಳಲು ಇದೊಂದೆ ಮಾರ್ಗ ಎಂದು ನಿರ್ಧರಿಸಿ ಸೋನು ಆತ್ಮಹತ್ಯೆ ಮಾಡಿಕೊಳ್ಳಲು ಟವರ್ ಏರಿದ್ದನು ಎನ್ನಲಾಗಿದೆ.

ಇದನ್ನು ಓದಿ: VIDEO- ರಾಷ್ಟ್ರಪತಿ ಔತಣ ಕೂಟ.. ಸೀರೆಯುಟ್ಟು ಮಿಂಚಿದ ವಿಶ್ವದ ಗಣ್ಯ ಮಹಿಳೆಯರು, ಯಾಱರು?

ಯುವಕ ಟವರ್ ಏರುತ್ತಿದ್ದಿದ್ದನ್ನು ನೋಡಿದ ಸ್ಥಳೀಯರು ಗುಂಪಾಗಿ ಅದರ ಕೆಳಗೆ ಸೇರಿದ್ದಾರೆ. ಕೆಳಗಿಳಿ ಎಂದು ಎಷ್ಟು ಬಾರಿ ಕೇಳಿದರು ಇಳಿದಿಲ್ಲ. ಹೀಗಾಗಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬರೋಬ್ಬರಿ ಅರ್ಧಗಂಟೆ ನಂತರ ಆತನನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿಯಾ ಎಂದು ಕೇಳಿದ್ದಕ್ಕೆ ತನ್ನ ಹೆಂಡತಿಯ ಜಗಳ ಬಗ್ಗೆ ಹೇಳಿದ್ದಾನೆ. ಸದ್ಯ ಈತನ ಹುಚ್ಚಾಟದ ವಿಡಿಯೋ ಸೊಷಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಂಡತಿ ಮನೆಯಲ್ಲಿ ದಿನ ಜಗಳ ಮಾಡುತ್ತಾಳೆಂದು ಮೊಬೈಲ್​ ಟವರ್​ ಏರಿದ ವ್ಯಕ್ತಿ.. ಮುಂದೇನಾಯಿತು?

https://newsfirstlive.com/wp-content/uploads/2023/09/MP_MEN.jpg

Load More