newsfirstkannada.com

ಶೇಮ್‌ ಫುಲ್‌! ಡ್ರೀಮ್ ಗರ್ಲ್‌ ಹೇಮಾ ಮಾಲಿನಿ ನೃತ್ಯದ ಬಗ್ಗೆ ನಾಲಿಗೆ ಹರಿಬಿಟ್ಟ ಬಿಜೆಪಿ ನಾಯಕ; ವಿಡಿಯೋ ವೈರಲ್‌

Share :

26-10-2023

  ಬಿಜೆಪಿ ನಾಯಕಿ, ಡ್ರೀಮ್ ಗರ್ಲ್‌ ಹೇಮಾ ಮಾಲಿನಿ ಬಗ್ಗೆ ವಿವಾದಾತ್ಮಕ ಹೇಳಿಕೆ

  ಮಧ್ಯಪ್ರದೇಶ ಗೃಹ ಸಚಿವ, ಬಿಜೆಪಿ ಹಿರಿಯ ನಾಯಕನಿಂದ ಯಡವಟ್ಟು

  ಬಾಲಿವುಡ್ ನಟಿ ಹೇಮಾ ಮಾಲಿನಿ ಡ್ಯಾನ್ಸ್ ಬಗ್ಗೆ ಕಾಮೆಂಟ್ ಮಾಡಿದ ವಿಡಿಯೋ

ಭೋಪಾಲ್‌: 2024ರ ಲೋಕಸಭಾ ಚುನಾವಣೆಗೆ ಮುನ್ನ ನಡೆಯುತ್ತಿರೋ 5 ರಾಜ್ಯಗಳ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದೆ. ಮತದಾನದ ದಿನ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರ ಮಾತಿನ ವರಸೆ ಜೋರಾಗಿದೆ. ಮಧ್ಯಪ್ರದೇಶದ ಗೃಹ ಸಚಿವ, ಬಿಜೆಪಿ ಹಿರಿಯ ನಾಯಕ ಮಾತಿನ ಭರಾಟೆ ಮಧ್ಯೆ ಬಾಲಿವುಡ್ ನಟಿ ಹೇಮಾ ಮಾಲಿನಿ ನೃತ್ಯದ ಬಗ್ಗೆ ಮಾತನಾಡಿ ಫಜೀತಿಗೆ ಸಿಲುಕಿದ್ದಾರೆ. ಗೃಹ ಸಚಿವ ನರೋತ್ತಮ ಮಿಶ್ರಾ ಅವರು ನೀಡಿರೋ ವಿವಾದಾತ್ಮಕ ಹೇಳಿಕೆ ಫುಲ್‌ ವೈರಲ್ ಆಗಿದೆ.

ತಮ್ಮ ಸ್ವಕ್ಷೇತ್ರ ಡಾಟಿಯಾ ಬಹಿರಂಗ ಕಾರ್ಯಕ್ರಮದಲ್ಲಿ ಮಾತನಾಡಿರುವ ಬಿಜೆಪಿ ನಾಯಕ ನರೋತ್ತಮ ಮಿಶ್ರಾ ಅವರು, ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಹೇಗಿದೆ ಅಂದ್ರೆ ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾತ್ರ ಇಲ್ಲಿ ಆಯೋಜಿಸುವುದಲ್ಲ. ಬಾಲಿವುಡ್ ನಟಿ ಹೇಮಾ ಮಾಲಿನಿ ಕೂಡ ಡ್ಯಾನ್ಸ್ ಮಾಡಬಹುದು ಎಂದಿದ್ದಾರೆ.

ಬಿಜೆಪಿ ನಾಯಕಿ, ಡ್ರೀಮ್ ಗರ್ಲ್‌ ಖ್ಯಾತಿಯ ಹೇಮಾ ಮಾಲಿನಿ ಬಗ್ಗೆ ಬಿಜೆಪಿ ನಾಯಕರೇ ಈ ರೀತಿ ಹೇಳಿಕೆ ನೀಡಿರೋದು ವಿವಾದಕ್ಕೆ ಗುರಿಯಾಗಿದೆ. ಮಧ್ಯಪ್ರದೇಶದ ಗೃಹ ಸಚಿವರು ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು ಎಂದು ಜೆಡಿಯು ಪಕ್ಷ ಕಿಡಿಕಾರಿದೆ.

ಇನ್ನು, ಬಿಜೆಪಿ ನಾಯಕರೇ ಅವರದೇ ಪಕ್ಷದ ಸಂಸದೆಯ ಬಗ್ಗೆ ಹೀಗೆ ಹಗುರವಾಗಿ ಮಾತನಾಡಿದ್ದಾರೆ. ಇನ್ನೂ ಬಿಜೆಪಿ ಆಡಳಿತದಲ್ಲಿ ಸಾಮಾನ್ಯ ಮಹಿಳೆಯರ ಗತಿ ಏನು? ಬಿಜೆಪಿ ನಾಯಕರ ನಿಜವಾದ ಸ್ವರೂಪ ಇದೆ ಎಂದು ನರೋತ್ತಮ ಮಿಶ್ರಾ ಅವರ ವಿಡಿಯೋಗಳನ್ನು ಶೇರ್ ಮಾಡಿ ಪ್ರತಿಪಕ್ಷದ ನಾಯಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಮಧ್ಯಪ್ರದೇಶ ವಿಧಾನಸಭೆಗೆ ಇದೇ ನವೆಂಬರ್ 17ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶೇಮ್‌ ಫುಲ್‌! ಡ್ರೀಮ್ ಗರ್ಲ್‌ ಹೇಮಾ ಮಾಲಿನಿ ನೃತ್ಯದ ಬಗ್ಗೆ ನಾಲಿಗೆ ಹರಿಬಿಟ್ಟ ಬಿಜೆಪಿ ನಾಯಕ; ವಿಡಿಯೋ ವೈರಲ್‌

https://newsfirstlive.com/wp-content/uploads/2023/10/Hema-malini-1.jpg

Load More