newsfirstkannada.com

×

ಪ್ರೇಮಿಗಳನ್ನು ಗುಂಡಿಕ್ಕಿ ಕೊಂದು ಮೊಸಳೆಗಳಿಗೆ ಎಸೆದ ಹೆತ್ತವರು; ಈ ಮರ್ಯಾದಾ ಹತ್ಯೆ ಬಯಲಾಗಿದ್ದೇ ರೋಚಕ

Share :

Published June 19, 2023 at 4:26pm

    18 ವರ್ಷದ ಶಿವಾನಿ ತೋಮರ್, 21 ವರ್ಷದ ರಾಧೆಶ್ಯಾಂ ತೋಮರ್ ಪ್ರೀತಿ

    ಪ್ರೇಮಿಗಳು ಏಕಾಂತದಲ್ಲಿದ್ದಾಗ ಕೋಪಗೊಂಡ ಹೆತ್ತವರಿಂದಲೇ ಗುಂಡೇಟು

    ಮೊಸಳೆ ಬಾಯಿಗೆ ಶವ ಹಾಕಿ 2 ವಾರಗಳ ಕಾಲ ಎಲ್ಲರ ಬಾಯಿ ಮುಚ್ಚಿಸಿದ್ದರು

ಭೋಪಾಲ್: ಪ್ರೀತಿಸಿದ ಯುವತಿಯನ್ನ ಪೀಸ್‌, ಪೀಸ್ ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟಿದ್ದಾಯ್ತು. ಲಿವ್ ಇನ್ ಟುಗೇದರ್‌ ಇದ್ದ ಸಂಗಾತಿಯನ್ನ ಕುಕ್ಕರ್‌ಗೆ ಹಾಕಿ ಬೇಯಿಸಿದ್ದೂ ಆಯ್ತು. ಇದೀಗ ಮತ್ತೊಂದು ಭಯಾನಕ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಪ್ರೀತಿ ಮಾಡಬೇಡಿ ಎಂದು ಬುದ್ಧಿ ಹೇಳಿದ ಹೆತ್ತವರೇ ಕೊನೆಗೆ ಪ್ರೇಮಿಗಳನ್ನು ಗುಂಡಿಕ್ಕಿ ಕೊಂದು ಮೊಸಳೆಗಳ ಬಾಯಿಗೆ ಹಾಕಿದ್ದಾರೆ.

ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಈ ಭೀಕರ ಮರ್ಯಾದಾ ಹತ್ಯೆ ನಡೆದಿದೆ. ವಿರೋಧದ ನಡುವೆಯೂ ಪ್ರೀತಿಸಿದ ತಪ್ಪಿಗೆ ಪೋಷಕರು ಪ್ರೇಮಿಗಳನ್ನು ಗುಂಡಿಕ್ಕಿ ಕೊಂದಿದ್ದಾರೆ. ಅಷ್ಟೇ ಅಲ್ಲ ಪ್ರೇಮಿಗಳ ಶವವನ್ನು ಮೊಸಳೆಯಿರುವ ಚಂಬಲ್ ನದಿಗೆ ಎಸೆದು ಬಂದಿದ್ದಾರೆ. ಇಬ್ಬರ ಶವಕ್ಕೂ ಭಾರವಾದ ಕಲ್ಲುಗಳನ್ನು ಕಟ್ಟಿದ್ದರಿಂದ ಯುವಪ್ರೇಮಿಗಳ ಮೃತದೇಹ ಮೊಸಳೆಗಳ ಪಾಲಾಗಿದೆ.

ಹೆತ್ತವರ ವಿರೋಧಕ್ಕೆ ಜಗ್ಗದ ಪ್ರೇಮಿಗಳು
18 ವರ್ಷದ ಶಿವಾನಿ ತೋಮರ್, 21 ವರ್ಷದ ರಾಧೆಶ್ಯಾಂ ತೋಮರ್ ಮೊರೆನಾ ಜಿಲ್ಲೆಯ ಅಕ್ಕ ಪಕ್ಕದ ಗ್ರಾಮದಲ್ಲಿದ್ದವರು. ಇವರಿಬ್ಬರು ಒಂದೇ ಜಾತಿಯವರಾಗಿದ್ದರೂ ಇವರ ಪ್ರೀತಿ ವಿಷಯ ಕುಟುಂಬಸ್ಥರಿಗೆ ಇಷ್ಟವಿರಲಿಲ್ಲ. ಶಿವಾನಿ ತೋಮರ್ ಮನೆಯವರ ಮಾತು ಕೇಳದೆ ಪ್ರೀತಿ ಮುಂದುವರಿಸಿದ್ದೆ ಈ ಭಯಾನಕ ಮರ್ಯಾದಾ ಹತ್ಯೆಗೆ ಕಾರಣ ಎನ್ನಲಾಗಿದೆ.

ಏಕಾಂತದಲ್ಲಿದ್ದಾಗ ಸಿಕ್ಕಿಬಿದ್ದ ಪ್ರೇಮಿಗಳಿಗೆ ಗುಂಡೇಟು
ಯುವ ಜೋಡಿಯ ಪ್ರೀತಿಗೆ ಅಡ್ಡಿಯಾದ ಪೋಷಕರು ಶಿವಾನಿ, ರಾಧೆಶ್ಯಾಂ ಏಕಾಂತದಲ್ಲಿದ್ದಾಗ ರೆಡ್ ಹ್ಯಾಂಡ್‌ ಆಗಿ ಹಿಡಿದಿದ್ದಾರೆ. ಇವರಿಬ್ಬರು ಒಟ್ಟಿಗೆ ಇರೋದನ್ನ ನೋಡಿದಾಗ ಗುಂಡು ಹಾರಿಸಿ ಬರ್ಬರವಾಗಿ ಕೊಂದಿದ್ದಾರೆ. ಬಳಿಕ ಇಬ್ಬರ ಶವಕ್ಕೆ ಭಾರವಾದ ಕಲ್ಲುಗಳನ್ನು ಕಟ್ಟಿ, ಮೊಸಳೆಗಳಿರುವ ನದಿಗೆ ಎಸೆದು ಬಂದಿದ್ದಾರೆ.

2 ವಾರಗಳ ಬಳಿಕ ಬೆಳಕಿಗೆ ಬಂದ ಪ್ರಕರಣ
ಶಿವಾನಿ, ರಾಧೆಶ್ಯಾಂ ಕಾಣೆಯಾದ 2 ವಾರಗಳ ಬಳಿಕ ಮರ್ಯಾದಾ ಹತ್ಯೆಯ ಪ್ರಕರಣ ಬೆಳಕಿಗೆ ಬಂದಿದೆ. ಯುವಕ ರಾಧೆಶ್ಯಾಂ ಕುಟುಂಬಸ್ಥರು ಶಿವಾನಿ ಪೋಷಕರ ವಿರುದ್ಧ ಅನುಮಾನಸ್ಪದ ದೂರು ನೀಡಿದ್ದರು. ಆಗ ಪೊಲೀಸರು ಶಿವಾನಿ ತೋಮರ್ ಕುಟುಂಬಸ್ಥರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಪೊಲೀಸರ ವಿಚಾರಣೆಯಲ್ಲಿ ಶಿವಾನಿ ತೋಮರ್ ಕುಟುಂಬಸ್ಥರು ಕೊಲೆ ಮಾಡಿದ ಇಂಚು, ಇಂಚು ಮಾಹಿತಿಯನ್ನು ಬಾಯ್ಬಿಟ್ಟಿದ್ದಾರೆ. ಯುವ ಜೋಡಿಯ ಕೊಲೆ ಪ್ರಕರಣದಲ್ಲಿ ಯುವತಿಯ ಪೋಷಕರು ಸೇರಿದಂತೆ ಕೆಲ ಸಂಬಂಧಿಕರು ಶಾಮೀಲಾಗಿದ್ದಾರೆ ಎನ್ನಲಾಗಿದೆ.

ಚಂಬಲ್ ಕಣಿವೆ ನದಿಯಲ್ಲಿ 2000ಕ್ಕೂ ಹೆಚ್ಚು ಮೊಸಳೆಗಳಿವೆ. ಮೊಸಳೆಗಳ ಓಡಾಟ ಹೆಚ್ಚಾಗಿರುವ ಜಾಗದಲ್ಲೇ ಶವಗಳನ್ನು ಎಸೆದು ಬಂದಿದ್ದಾರೆ. ಶವಗಳನ್ನು ಮೊಸಳೆಗಳು ತಿಂದ್ರೆ ಸಾಕ್ಷಿಗಳೇ ಸಿಗಲ್ಲ ಎಂದು ಈ ಕೃತ್ಯ ಎಸಗಿರುವುದಾಗಿ ಆರೋಪಿಗಳು ಪೊಲೀಸರ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಪ್ರೇಮಿಗಳನ್ನು ಗುಂಡಿಕ್ಕಿ ಕೊಂದು ಮೊಸಳೆಗಳಿಗೆ ಎಸೆದ ಹೆತ್ತವರು; ಈ ಮರ್ಯಾದಾ ಹತ್ಯೆ ಬಯಲಾಗಿದ್ದೇ ರೋಚಕ

https://newsfirstlive.com/wp-content/uploads/2023/06/Madhya-Pradesh-Murder.jpg

Load More