ಮಲ್ಪೆಯಲ್ಲಿ ನೀರು ಪಾಲಾದ ಇಬ್ಬರು ಹುಡುಗಿಯರು
ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಇಬ್ಬರು
ಸಮುದ್ರದ ಭಾರೀ ಅಲೆಗಳ ಹೊಡೆತಕ್ಕೆ ಓರ್ವ ಹುಡುಗಿ ಸಾವು
ಉಡುಪಿ: ಮಡಿಕೇರಿಯಲ್ಲಿ ನಾಪತ್ತೆಯಾಗಿದ್ದ ಇಬ್ಬರು ಹುಡುಗಿಯರು ಮಲ್ಪೆಯಲ್ಲಿ ನೀರು ಪಾಲಾದ ಘಟನೆ ಬೆಳಕಿಗೆ ಬಂದಿದೆ. ಮಾನ್ಯ ಮತ್ತು ಯಶಸ್ವಿನಿ ಎಂಬ ಹುಡುಗಿಯರು ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದರು.
ನಿನ್ನೆ ತಡರಾತ್ರಿ ಮಾನ್ಯ ಮತ್ತು ಯಶಸ್ವಿನಿ ಮಲ್ಪೆ ಸಮುದ್ರದಲ್ಲಿ ನೀರು ಪಾಲಾಗಿದ್ದರು. ಆಪತ್ಬಾಂಧವ ಈಶ್ವರ್ ಮಲ್ಪೆ ಕಾರ್ಯಾಚರಣೆ ನಡೆಸಿ ಓರ್ವ ಹುಡುಗಿಯನ್ನು ರಕ್ಷಣೆ ಮಾಡಿದ್ದಾರೆ. ಆದರೆ ಸಮುದ್ರದ ಭಾರೀ ಅಲೆಗಳ ಹೊಡೆತಕ್ಕೆ ಮಾನ್ಯ ಮೃತಪಟ್ಟಿದ್ದಾಳೆ.
ಬದುಕಿ ಬಂದ ಯಶಸ್ವಿನಿ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇಬ್ಬರು ಹುಡುಗಿಯರು ಕಾಣೆಯಾಗಿದ್ದ ಬಗ್ಗೆ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ