ಮಳೆಗಾಲದಲ್ಲೇ ಪೋಷಕರಿಗೆ ಕಾಡುತ್ತಿದೆ ಮತ್ತೊಂದು ಸಮಸ್ಯೆ..!
ವರುಣನ ಆರ್ಭಟದ ಮಧ್ಯೆಯೂ ಮಕ್ಕಳಿಗೆ ಮದ್ರಾಸ್ ಐ ಕಂಟಕ
ಮಕ್ಕಳ ಬಗ್ಗೆ ಪೋಷಕರು ಎಚ್ಚರ ವಹಿಸಲೇಬೇಕಾದ ಅನಿವಾರ್ಯ
ಬೆಂಗಳೂರು: ಕಳೆದೊಂದು ತಿಂಗಳಿನಿಂದ ಎಡಬಿಡದೆ ಸುರಿಯುತ್ತಿರೋ ಮಳೆಗೆ ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ. ಜೋರು ಮಳೆ ಮಧ್ಯೆ ರಾಜ್ಯದಲ್ಲಿ ಮದ್ರಾಸ್ ಐ ಸಮಸ್ಯೆಯೂ ಹೆಚ್ಚುತ್ತಿದೆ. ಇತ್ತೀಚೆಗೆ ಹಲವು ಮಕ್ಕಳಲ್ಲಿ ಮದ್ರಾಸ್ ಐ ಸಮಸ್ಯೆ ಕಾಣಿಸಿಕೊಂಡಿದ್ದು, ಪೋಷಕರು ಎಚ್ಚರ ವಹಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು, ರಾಜ್ಯಾದ್ಯಂತ ಮಳೆಯ ಅಬ್ಬರದ ಮಧ್ಯೆಯೂ ಎಲ್ಲಿ ಕೇಳಿದರೂ ಒಂದೇ ಸುದ್ದಿ. ಅದು ಮದ್ರಾಸ್ ಐ ಸಮಸ್ಯೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರೋ ಕಾರಣ ಈ ಮದ್ರಾಸ್ ಐ ಕಾಣಿಕೊಂಡಿದೆ. ಇದನ್ನು ಪಿಂಕ್ ಐ ಎಂದು ಕರೆಯಲಾಗುತ್ತದೆ.
ಸಿಲಿಕಾನ್ ಸಿಟಿ ಬೆಂಗಳೂರು ಮಾತ್ರ ರಾಜ್ಯದ ವಿವಿಧ ಭಾಗಗಳಲ್ಲಿ ಮಕ್ಕಳಲ್ಲಿ ಮದ್ರಾಸ್ ಐ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಇದರ ಪರಿಣಾಮ ಪೋಷಕರು ಬಹಳ ಆತಂಕಕ್ಕೆ ಒಳಗಾಗಿದ್ದಾರೆ.
ಏನಿದು ಮದ್ರಾಸ್ ಐ?
ಮಳೆಗಾಲದಲ್ಲಿ ಮದ್ರಾಸ್ ಐ ಕಾಣಿಸಿಕೊಳ್ಳುತ್ತದೆ. ಮಕ್ಕಳ ಕಣ್ಣುಗಳು ಗುಲಾಬಿ ಬಣ್ಣಕ್ಕೆ ತಿರುಗುವುದೇ ಮದ್ರಾಸ್ ಐ. ಇದಕ್ಕೆ ಕಂಜಂಕ್ಟಿವಿಟಿಸ್ ಎಂದೂ ಕರೆಯುತ್ತೇವೆ. ಅದರಲ್ಲೂ ಮಳೆಗಾಲದಲ್ಲೇ ಹೆಚ್ಚು ಕಾಣಿಸಿಕೊಳ್ಳಲು ಕಾರಣ ಬ್ಯಾಕ್ಟೀರಿಯಾ. ಮದ್ರಾಸ್ ಐ ಸಮಸ್ಯೆ ಕಾಣಿಸಿಕೊಂಡಾಗ ಕಣ್ಣುಗಳು ಕೆಂಪಾಗುತ್ತವೆ. ಕಣ್ಣುಗಳು ಊದಿಕೊಳ್ಳುವುದು, ನೀರು ಸೋರುವುದು, ತುರಿಕೆ ಉಂಟಾಗುವುದು; ಹೀಗೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಲಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ