newsfirstkannada.com

ಇಂದು ಮಹಾಘಟಬಂದನ್​​ ಸಭೆ; 26 ಪಕ್ಷಗಳ 49 ನಾಯಕರು ಭಾಗಿ; ಕಾರ್ಯಕ್ರಮದ ವಿವರ ಹೀಗಿದೆ

Share :

Published July 18, 2023 at 7:57am

    ಬೆಳಗ್ಗೆ ಬೆಂಗಳೂರಿನಲ್ಲಿ ವಿಪಕ್ಷಗಳ ಮಹತ್ವದ ಸಭೆ

    ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ನವಕೂಟ ಪ್ಲಾನ್

    543 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ

ಪ್ರಧಾನಿ ಮೋದಿ ಸ್ಪೀಡ್​ಗೆ ಬ್ರೇಕ್ ಹಾಕೋಕೆ ವಿಪಕ್ಷಗಳು ರಣತಂತ್ರ ಹೆಣೆಯುತ್ತಿವೆ. ಲೋಕಾ ಸಮರದಲ್ಲಿ ಗೆದ್ದು ಬೀಗಲು ಸಮರಾಭ್ಯಾಸ ಶುರುಮಾಡಿವೆ. ಇಂದು ಬೆಂಗಳೂರಲ್ಲಿ ಅಸಲಿ ಮಹಾಘಟಬಂಧನ್ ಸಭೆ ನಡೆಯಲಿದೆ. ಇತ್ತ ವಿಪಕ್ಷಗಳಿಗೆ ಕೌಂಟರ್ ಕೊಡಲು ತನ್ನ ಮಿತ್ರ ಪಡೆಯನ್ನ ಹೆಚ್ಚಿಸಿಕೊಳ್ಳೋಕೆ ಬಿಜೆಪಿ ಮುಂದಾಗಿದೆ.

ಶಕ್ತಿ ಪ್ರದರ್ಶನ, ನಮೋ ಸೇನೆ ವಿರುದ್ಧ ವಿಪಕ್ಷಗಳು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ದೇಶದ ಅಷ್ಟ ದಿಕ್ಕುಗಳಿಂದ ಘಟಾನುಘಟಿ ನಾಯಕರು ಬೆಂಗಳೂರಿಗೆ ದಂಡೆತ್ತಿ ಬಂದಿದ್ದಾರೆ. ಬಿಜೆಪಿಯನ್ನ ಕಟ್ಟಿಹಾಕೋಕೆ ಒಂದೇ ವೇದಿಕೆಯಲ್ಲಿ ಸೇರುತ್ತಿದ್ದಾರೆ. ಶತಾಯಗತಾಯ ಈ ಬಾರಿ ಲೋಕಾ ಸಮರದಲ್ಲಿ ಗೆದ್ದು ಬೀಗೋಕೆ ಹುಟ್ಟು ಹಾಕ್ತಿವೆ.

ಮಹಾಘಟಬಂಧನ್ ಸಭೆ

ಇವತ್ತು ಬೆಂಗಳೂರಿನ ತಾಜ್​​ವೆಸ್ಟ್ಎಂಡ್ ಹೋಟೆಲ್​ನಲ್ಲಿ ಅಸಲಿ ಮಹಾಘಟಬಂಧನ್ ಸಭೆ ನಡೆಯಲಿದೆ. ಈ ಸಭೆಗೆ 26 ಪಕ್ಷಗಳ 49 ನಾಯಕರು ಭಾಗಿ ಆಗಲಿದ್ದಾರೆ ಅಂತ ಗೊತ್ತಾಗಿದೆ. ಕಾಂಗ್ರೆಸ್ ಸಿಎಂಗಳು ಹೊರತು ಪಡಿಸಿ ವಿವಿಧ ರಾಜ್ಯಗಳ 6 ಜನ ಸಿಎಂಗಳು ಈ ಸಭೆಯಲ್ಲಿ ಭಾಗಿ ಆಗ್ತಿದ್ದಾರೆ.

ವಿಪಕ್ಷಗಳ ಕೂಟದ ನಾಯಕರ ಮಹತ್ವದ ಸಭೆ

ಬೆಳಗ್ಗೆ ಬೆಂಗಳೂರಿನ ತಾಜ್​ವೆಸ್ಟ್ಎಂಡ್ ಹೋಟೆಲ್​ನಲ್ಲಿ ವಿಪಕ್ಷಗಳ ಕೂಟದ ನಾಯಕರ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಎನ್‌ಡಿಎಯೇತರ ಪಕ್ಷದ ನಾಯಕರು ಭಾಗವಹಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಸ್ತಾವಿಕ ಭಾಷಣ ಮಾಡಲಿದ್ದಾರೆ. 11.10ಕ್ಕೆ ಸಭೆಯಲ್ಲಿ ಆರು ಪ್ರಮುಖ ವಿಷಯಗಳಾದ ದ್ವೇಷ, ಜನವಿರೋಧಿ ರಾಜಕಾರಣ, ವಿಭಜನೆ, ಆರ್ಥಿಕ ಅಸಮಾನತೆ ಮತ್ತು ಲೂಟಿ ಬಗ್ಗೆ ಚರ್ಚೆಯಾಗಲಿದೆ. ಸಭೆಯ ಅಜೆಂಡಾಗಳ ಬಗ್ಗೆ ಸುದೀರ್ಘ ಮಾತುಕತೆ ನಡೆಯಲಿದೆ. ಮಧ್ಯಾಹ್ನ ಒಂದು ಗಂಟೆಗೆ ಊಟದ ವಿರಾಮ ಇರಲಿದ್ದು, ಬಳಿಕ ಸಭೆ ಮುಂದುವರಿಯಲಿದೆ. ಮಧ್ಯಾಹ್ನ 2.30ಕ್ಕೆ ಉಪಸಮಿತಿಗಳ ರಚನೆ ಮಾಡಿ, ಮೈತ್ರಿಕೂಟದ ಕಾರ್ಯದರ್ಶಿ ಆಯ್ಕೆ ಮಾಡಲಾಗುತ್ತೆ. ಸಂಜೆ 3 ಗಂಟೆಗೆ ಮೈತ್ರಿಕೂಟದ ಸಭೆ ಮುಕ್ತಾಯವಾಗಲಿದ್ದು. ಸಂಜೆ 4 ಗಂಟೆಗೆ ಮೈತ್ರಿಕೂಟದ ಪ್ರಮುಖ ನಾಯಕರಿಂದ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ವೇಳೆಮೈತ್ರಿಕೂಟದ ಸಭೆಯ ನಿರ್ಣಯಗಳ ಬಗ್ಗೆ ನಾಯಕರು ಘೋಷಿಸಲಿದ್ದಾರೆ.

 ಟಾರ್ಗೆಟ್ 400 ಸೀಟ್!

ಸಂಖ್ಯಾಬಲ ಹೆಚ್ಚಿಸಿಕೊಳ್ಳೋದೇ ನವಕೂಟದ ಪ್ಲಾನ್ ಆಗಿದೆ. ಈ ಸಭೆಯಲ್ಲಿ ದೇಶದ 543 ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆ ಮತ್ತು ಈ ಪೈಕಿ 400 ಕ್ಷೇತ್ರಗಳಲ್ಲಿ ಒಮ್ಮತ ಅಭ್ಯರ್ಥಿಗಳನ್ನ ಕಣಕ್ಕಿಳಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಇದೇ ಸಭೆಯಲ್ಲಿ ಈ ಹೊಸ ಒಕ್ಕೂಟದ ಸಂಚಾಲಕರ ನೇಮಕ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ. ಅಲ್ಲದೆ, ಸಭೆಯಲ್ಲಿ ಮೈತ್ರಿಕೂಟಕ್ಕೆ ಅಧಿಕೃತ ಹೊಸ ಹೆಸರು ಘೋಷಿಸಬಹುದು ಅನ್ನೋ ಮಾಹಿತಿ ಸಿಕ್ಕಿದೆ.

ಈ ಸಭೆಗೆ ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾ ಗಾಂಧಿ ಆಗಮಿಸ್ತಿದ್ದು ಹೆಚ್ಚು ಮಹತ್ವ ಪಡೆದಿದೆ. ಕಳೆದ ಪಾಟ್ನಾ ಸಭೆಯಿಂದ ಸೋನಿಯಾ ಗಾಂಧಿ ದೂರವಿದ್ರು. ಆದ್ರೆ, ಈ ಹೊಸ ಕೂಟಕ್ಕೆ ಸೋನಿಯಾ ಗಾಂಧಿ ಭಾಗಿಯಾಗಲಿದ್ದಾರೆ. ಅದೇನೆ ಇರಲಿ ವಿಪಕ್ಷಗಳ ಈ ಶಕ್ತಿ ಪ್ರದರ್ಶನ ಅದೆಷ್ಟರ ಮಟ್ಟಿಗೆ ವರ್ಕ್ಔಟ್ ಆಗುತ್ತೆ ಅನ್ನೋದೆ ಸದ್ಯದ ಕುತೂಹಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ಮಹಾಘಟಬಂದನ್​​ ಸಭೆ; 26 ಪಕ್ಷಗಳ 49 ನಾಯಕರು ಭಾಗಿ; ಕಾರ್ಯಕ್ರಮದ ವಿವರ ಹೀಗಿದೆ

https://newsfirstlive.com/wp-content/uploads/2023/07/Rahul-Gandhi-1.jpg

Load More