newsfirstkannada.com

×

ಚಾಕು ಮತ್ತು ಆಕ್ಸೆಲ್ ಬ್ಲೇಡ್.. ಮಹಾಲಕ್ಷ್ಮಿ ಪೀಸ್, ಪೀಸ್ ಮಾಡಿದ್ದು ಹೇಗೆ? ಮುಕ್ತಿ ಡೆತ್‌ನೋಟ್‌ ಪತ್ತೆ!

Share :

Published September 26, 2024 at 4:36pm

    ಮನಸಾರೆ ಪ್ರೀತಿಸಿದವಳನ್ನೇ ಪೀಸ್, ಪೀಸ್ ಮಾಡಿದ ಪರಮ ಪಾಪಿ

    ಒಡಿಶಾದಲ್ಲೇ ಬೀಡು ಬಿಟ್ಟಿರುವ ಬೆಂಗಳೂರು ಪೊಲೀಸರ ತಂಡ

    ಮಹಾಲಕ್ಷ್ಮಿ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದ ಮುಕ್ತಿ ರಂಜನ್

ಬೆಂಗಳೂರು: ವೈಯಾಲಿಕಾವಲ್ ಮಹಾಲಕ್ಷ್ಮಿಗೆ ನರಕ ತೋರಿಸಿ ಮುಕ್ತಿ ಕೊಟ್ಟ ಮುಕ್ತಿ ರಂಜನ್ ರಾಯ್ ಯಮಲೋಕಕ್ಕೆ ರೈಟ್ ಹೇಳಿದ್ದಾನೆ. ಇವನು ಮಾಡಿದ ತಪ್ಪಿಗೆ ಎಂಥಾ ಶಿಕ್ಷೆಯಾಗಬೇಕು ಅಂತ ಯೋಚನೆ ಮಾಡೋ ಮೊದಲೇ ಸಾವಿಗೆ ಶರಣಾಗಿದ್ದಾನೆ. ಆದರೆ ಮನಸಾರೆ ಪ್ರೀತಿಸಿದ ಮಹಾಲಕ್ಷ್ಮಿಯನ್ನು ಪೀಸ್, ಪೀಸ್ ಮಾಡಿದ ಇವನ ಕ್ರೈಂ ಡೈರಿ ಮಾತ್ರ ಬೆಚ್ಚಿ ಬೀಳಿಸುವಂತಿದೆ.

ಮಹಾಲಕ್ಷ್ಮಿ ಹ*ತ್ಯೆಯ ನಂತರ ಪರಾರಿಯಾಗಿದ್ದ ಪ್ರಮುಖ ಆರೋಪಿ ಮುಕ್ತಿ ರಂಜನ್ ಒಡಿಶಾದಲ್ಲಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಇವನ ಸುಳಿವು ಬೆನ್ನತ್ತಿ ಒಡಿಶಾಗೆ ಹೋದ ಬೆಂಗಳೂರು ಪೊಲೀಸರು ಇವನ ಜನ್ಮ ಜಾಲಾಡುವ ಕೆಲಸ ಮಾಡುತ್ತಿದ್ದಾರೆ. ಪೊಲೀಸರ ತನಿಖೆಯಲ್ಲಿ ಮಹಾಲಕ್ಷ್ಮಿ ಕೇಸ್‌ನ ರಣಭೀಕರ ಸತ್ಯಗಳು ಬಯಲಾಗುತ್ತಿವೆ.

ಬೆಂಗಳೂರು ಪೊಲೀಸರು ಒಡಿಶಾದಲ್ಲಿ ಮುಕ್ತಿ ರಂಜನ್ ರಾಯ್ ಕುಟುಂಬಸ್ಥರ ವಿಚಾರಣೆ ನಡೆಸಿದ್ದಾರೆ. ಪ್ರಮುಖವಾಗಿ ಮುಕ್ತಿ ರಂಜನ್ ಸಾವನ್ನಪ್ಪಿದ ಜಾಗದಲ್ಲಿ ಬ್ಯಾಗ್, ಲ್ಯಾಪ್‌ಟಾಪ್‌, ಆತನ ಮೊಬೈಲ್ ಹಾಗೂ ಡೆತ್ ನೋಟ್ ಕೂಡ ಪೊಲೀಸರಿಗೆ ಸಿಕ್ಕಿದೆ.

ಮುಕ್ತಿ ರಂಜನ್ ಡೆತ್‌ ನೋಟ್ ವಶಕ್ಕೆ ಪಡೆದಿರುವ ವೈಯಾಲಿಕಾವಲ್ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮಹಾಲಕ್ಷ್ಮಿ ಜೊತೆಗೆ ಮುಕ್ತಿ ರಂಜನ್ ಜಗಳ ಮಾಡಿದ್ದಳಂತೆ. ಕಪಾಳಕ್ಕೆ ಹೊಡೆದಿದ್ದಕ್ಕೆ ಮಹಾಲಕ್ಷ್ಮಿಯ ಕೊ*ಲೆ ಮಾಡಿರೋದಾಗಿ ಡೆತ್​ನೋಟ್​ ಮುಕ್ತಿ ಬರೆದಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: ಮಹಾಲಕ್ಷ್ಮಿಯನ್ನು ಕ್ರೂರವಾಗಿ ಕೊಲ್ಲೋದಕ್ಕೆ ಇದೇ ಮುಖ್ಯ ಕಾರಣ.. ಕೊನೆಗೂ ಆ ರಹಸ್ಯ ಬಯಲು! 

ಡೆತ್‌ ನೋಟ್‌ನಲ್ಲಿ ಮುಕ್ತಿ, ಮಹಾಲಕ್ಷ್ಮಿ ಜೊತೆಗಿನ ಆತ್ಮೀಯ‌ ಸಲುಗೆ ಬಗ್ಗೆಯೂ ಉಲ್ಲೇಖ ಮಾಡಿದ್ದಾನೆ. ಮಹಾಲಕ್ಷ್ಮಿ ಕಪಾಳಕ್ಕೆ ಹೊಡೆದ ಬಳಿಕ ಕತ್ತು ಹಿಸುಕಿ ಚಾಕುವಿನಿಂದ ಇರಿದು ಕೊಂದಿದ್ದೇನೆ. ಆಕ್ಸೆಲ್ ಬ್ಲೇಡ್​ನಿಂದ ಮೃತ ದೇಹವನ್ನ ತುಂಡರಿಸಿ ಫ್ರಿಡ್ಜ್‌ನಲ್ಲಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಮಹಾಲಕ್ಷ್ಮಿ ಸಾವಿನ ಬಳಿಕ ಮುಕ್ತಿ ರಂಜನ್ ರಾಯ್ ಕೊ*ಲೆಯ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಬಂಧಿಸಲು ಯತ್ನಿಸುತ್ತಿದ್ದಾರೆ ಅನ್ನೋ ವಿಚಾರ ತಿಳಿಯುತ್ತಿದ್ದಂತೆ ನಿರ್ಜನ ಪ್ರದೇಶದಲ್ಲಿ ಸಾವಿಗೆ ಶರಣಾಗಿದ್ದಾನೆ. ಒಡಿಶಾಗೆ ತೆರಳಿರುವ ಬೆಂಗಳೂರು ಪೊಲೀಸರು ಮೃತನ ಫಿಂಗರ್ ಪ್ರಿಂಟ್ ಪಡೆಯಲಿದ್ದಾರೆ.

ಇದನ್ನೂ ಓದಿ: ಮಹಾಲಕ್ಷ್ಮಿ ಕೊ*ಲೆಗಾರ ಶವವಾಗಿ ಪತ್ತೆ.. ಪೀಸ್, ಪೀಸ್‌ ಮಾಡಿದ ‘ಮುಕ್ತಿ’ ಮಾಡಿದ್ದೇನು? ಪಾಪಿ ಅಂತ್ಯ ಹೇಗಾಯ್ತು? 

ಮಹಾಲಕ್ಷ್ಮಿ ಕೇಸ್‌ನಲ್ಲಿ ಮುಕ್ತಿ ರಂಜನ್ ರಾಯ್ ಬಳಸಿರುವ ವೆಪನ್‌ಗಳು ಪ್ರಮುಖ ಸಾಕ್ಷ್ಯವಾಗಲಿದೆ. ಮಹಾಲಕ್ಷ್ಮಿ ದೇಹವನ್ನು ಕತ್ತರಿಸಲು ಚಾಕು ಹಾಗೂ ಆಕ್ಸೆಲ್ ಬ್ಲೇಡ್ ಬಳಸಿದ್ದು ಅವುಗಳನ್ನು ಎಲ್ಲಿ ಬಿಸಾಡಿದ್ದಾನೆ ಅನ್ನೋ ಮಾಹಿತಿ ಇನ್ನೂ ಸಿಕ್ಕಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಾಕು ಮತ್ತು ಆಕ್ಸೆಲ್ ಬ್ಲೇಡ್.. ಮಹಾಲಕ್ಷ್ಮಿ ಪೀಸ್, ಪೀಸ್ ಮಾಡಿದ್ದು ಹೇಗೆ? ಮುಕ್ತಿ ಡೆತ್‌ನೋಟ್‌ ಪತ್ತೆ!

https://newsfirstlive.com/wp-content/uploads/2024/09/mahalaxmi3.jpg

Load More