newsfirstkannada.com

×

ಮಹಾಲಕ್ಷ್ಮಿ ಸಾಯಿಸಿದ್ದು ಯಾಕೆ? ಪೀಸ್, ಪೀಸ್ ಮಾಡಿದ್ದು ಹೇಗೆ? ಮುಕ್ತಿ ಡೆತ್‌ನೋಟ್‌ನಲ್ಲಿ ಪ್ರತಿಯೊಂದು ಡಿಟೇಲ್ಸ್‌!

Share :

Published September 27, 2024 at 6:37pm

    ಮುಕ್ತಿ ರಂಜನ್ ಡೆತ್​ನೋಟ್​ನಲ್ಲಿ ಮಹಾಲಕ್ಷ್ಮಿ ಹ*ತ್ಯೆ ರಹಸ್ಯ ಬಯಲು

    ಮನೆಯಲ್ಲಿ ಕುಸಿದು ಬಿದ್ದವಳ ಉಸಿರುಗಟ್ಟಿಸಿ ಜೀವ ತೆಗೆದಿದ್ದ ಹಂತಕ!

    ಮಹಾಲಕ್ಷ್ಮಿ ಕೊಲೆ ಆರೋಪಿ ಆತ್ಮ*ಹತ್ಯೆ.. ಚಾರ್ಜ್​ಶೀಟ್​ ಕತೆಯೇನು?

ಕಳೆದ ಸೆಪ್ಟೆಂಬರ್ 21. ಇನ್ನೇನು ಸೂರ್ಯ ಮುಳುಗುವ ಹೊತ್ತಾಗಿತ್ತು. ಸಂಜೆ ಹೊತ್ತಲ್ಲಿ ವೈಯಾಲಿಕಾವಲ್​ನಲ್ಲಿ ಮಹಾಲಕ್ಷ್ಮಿ ಮರ್ಡ*ರ್​ ಸುದ್ದಿ ಇಡೀ ಬೆಂಗಳೂರನ್ನೇ ಅಕ್ಷರಶಃ ಬೆಚ್ಚಿ ಬೀಳಿಸಿತ್ತು. ಆರಂಭದಲ್ಲಿ ಮಹಾಲಕ್ಷ್ಮಿ ದೇಹ 19 ಪೀಸ್.. 20 ಪೀಸ್​.. 30 ಪೀಸ್​.. ಆಗಿತ್ತು ಅಂತ ಹೇಳಲಾಗಿತ್ತು. ಕೊನೆಗೆ ಮಹಾಲಕ್ಷ್ಮಿಯ ದೇಹವನ್ನ 59 ತುಂಡು ತುಂಡಾಗಿ ಕತ್ತರಿಸಲಾಗಿತ್ತು ಅನ್ನೋ ಮಾಹಿತಿ ಸಿಕ್ಕಿತ್ತು. ಮಹಾಲಕ್ಷ್ಮಿ ಪ್ರಿಯಕರ ಮುಕ್ತಿಯೇ ಮಹಾಲಕ್ಷ್ಮಿಗೆ ಮುಕ್ತಿ ಕೊಟ್ಟಿದ್ದ ಅನ್ನೋ ಕರಾಳ ಸತ್ಯ ರಿವೀಲ್ ಆಗಿತ್ತು. ಇಷ್ಟೆಲ್ಲ ಆದ್ಮೆಲೆ ಪಾಪಿ ಮುಕ್ತಿ ದೂರದ ಒಡಿಶಾಗೆ ಹೋಗಿ ನೇಣಿ*ಗೆ ಕೊರಳೊಡ್ಡಿದ್ದಾನೆ.

ಇದನ್ನೂ ಓದಿ: ಚಾಕು ಮತ್ತು ಆಕ್ಸೆಲ್ ಬ್ಲೇಡ್.. ಮಹಾಲಕ್ಷ್ಮಿ ಪೀಸ್, ಪೀಸ್ ಮಾಡಿದ್ದು ಹೇಗೆ? ಮುಕ್ತಿ ಡೆತ್‌ನೋಟ್‌ ಪತ್ತೆ! 

ಮುಕ್ತಿ ರಂಜನ್ ಡೆತ್​ನೋಟ್​ನಲ್ಲಿ ಮಹಾಲಕ್ಷ್ಮಿ ಹ*ತ್ಯೆ ರಹಸ್ಯ!
ಪರಮ ಪಾಪಿ ಮುಕ್ತಿ ರಂಜನ್​ ಮಹಾಲಕ್ಷ್ಮಿ ಜೀವ ಬಲಿ ಪಡೆದು ಬಳಿಕ ಆಕೆ ದೇಹವನ್ನು ಬರೋಬ್ಬರಿ 59 ತುಂಡು ಮಾಡಿದ್ದ. ಆದ್ರೆ ಮುಕ್ತಿ ರಂಜನ್ ಮಹಾಲಕ್ಷ್ಮಿಯನ್ನ ಕೊಂದಿದ್ಯಾಕೆ ಅಂತ ನೋಡಿದ್ರೆ ಅಲ್ಲೊಂದು ಮದುವೆ ಕಥೆ ತೆರೆದುಕೊಳ್ಳುತ್ತೆ.

ಮದುವೆಗೆ ಬೇಡ ಲೀವಿಂಗ್ ಟುಗೆದರ್ ಸಾಕು ಎಂದಿದ್ದಕ್ಕೆ ಗಲಾಟೆ!
ಅಸಲಿ ವಿಚಾರ ಏನಂದ್ರೆ ಹತ್ಯೆಯಾಗಿರುವ ಮಹಾಲಕ್ಷ್ಮಿ, ಮುಕ್ತಿರಂಜನ್ ಕೆಲಸ ಮಾಡ್ತಿದ್ದ ಜಾಗದಲ್ಲೇ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡ್ತಿದ್ದಳು. ಒಂದ್ಕಡೆ ಮಹಾಲಕ್ಷ್ಮಿ ಗಂಡನಿಂದ ದೂರಾಗಿ ಒಂಟಿಯಾಗಿದ್ದಳು. ಒಂಟಿಯಾಗಿದ್ದ ಮಹಾಲಕ್ಷ್ಮಿಗೆ ಈ ಮುಕ್ತಿ ರಂಜನ್ ಜಂಟಿಯಾಗಿದ್ದ. ಸೋ ಇಬ್ಬರು ಲಿವಿಂಗ್ ಟುಗೆದರ್​ ರಿಲೇಷನ್​ಶಿಪ್​​ನಲ್ಲಿದ್ದರು.

ಇದನ್ನೂ ಓದಿ: ಮಹಾಲಕ್ಷ್ಮಿಯನ್ನು ಕ್ರೂರವಾಗಿ ಕೊಲ್ಲೋದಕ್ಕೆ ಇದೇ ಮುಖ್ಯ ಕಾರಣ.. ಕೊನೆಗೂ ಆ ರಹಸ್ಯ ಬಯಲು! 

ಸೆಪ್ಟೆಂಬರ್ ಎರಡನೇ ತಾರೀಖು ಮಹಾಲಕ್ಷ್ಮಿ ಮನಸ್ಸಲ್ಲಿ ಅದೇನು ಆಲೋಚನೆ ಬಂದಿತ್ತೋ ಗೊತ್ತಿಲ್ಲ. ಅವತ್ತು ಮುಕ್ತಿ ರಂಜನ್ ಜೊತೆ ಮದುವೆ ವಿಚಾರವಾಗಿ ಮಾತಾಡಿದ್ದಾಳೆ. ಇಷ್ಟು ದಿನ ಓಡಾಡಿದ್ದು ಸಾಕು ಗಂಡ ಹೆಂಡತಿಯಾಗೋಣ ಸಂಸಾರ ಮಾಡೋಣ ಅಂದಿದ್ದಾಳೆ. ಆದ್ರೆ ಈ ಮುಕ್ತಿಗೆ ಮದುವೆ ಬೇಡವಾಗಿತ್ತು. ಹೀಗೆ ಲಿವಿಂಗ್ ಟುಗೆದರ್​ನಲ್ಲೇ ಇರೋಣ ಅಂದಿದ್ದ. ಇದೇ ವಿಚಾರಕ್ಕೆ ಜಗಳ ಆಗಿ ಆ ಜಗಳ ವಿಕೋಪಕ್ಕೆ ಹೋಗಿ ಕೊನೆಗೆ ಮುಕ್ತಿರಂಜನ್ ಮಹಾಲಕ್ಷಿಗೆ ಮುಕ್ತಿ ಕೊಟ್ಟಿದ್ದ.

9 ತಿಂಗಳ ಪರಿಚಯ 5 ತಿಂಗಳ ಪ್ರೀತಿ ಕೊ*ಲೆಯಲ್ಲಿ ಅಂತ್ಯ!
ಮುಕ್ತಿ ರಂಜನ್​ಗೂ ಮತ್ತು ಮಹಾಲಕ್ಷ್ಮಿಗೂ ಕಳೆದ ಒಂಬತ್ತು ತಿಂಗಳಿನಿಂದ ಪರಿಚಯ ಇತ್ತು. ಆರಂಭದಲ್ಲಿ ಫ್ರೆಂಡ್ಸ್​ ಆಗಿದ್ದವರು ಐದು ತಿಂಗಳ ಹಿಂದೆ ಪ್ರೀತಿ ಮಾಡೋದಕ್ಕೆ ಶುರು ಮಾಡಿದ್ರು. ಆಗ್ಲೇ ನೋಡಿ ಪ್ರಾಬ್ಲಂ ಶುರುವಾಗಿದ್ದು. ಈ ಮುಕ್ತಿ ರಂಜನ್ ಮಹಾಲಕ್ಷ್ಮಿಯ ಪ್ರೇಮದ ಬಲೆಯಲ್ಲಿ ಬಿದ್ಮೆಲೆ ಮಹಾಲಕ್ಷ್ಮಿಗೆ ಪೊಸೆಸಿವ್​ನೆಸ್​ ಶುರುವಾಗಿತ್ತು. ಹೀಗಾಗಿ ಮುಕ್ತಿ ರಂಜನ್ ಬೇರೆ ಯುವತಿ ಜೊತೆ ಮಾತಾಡಿದ್ರೆ ಮಹಾಲಕ್ಷ್ಮಿ ಕೋಪ ನೆತ್ತಿಗೇರಿತ್ತಂತೆ. ಈ ವಿಚಾರಕ್ಕಾಗಿ ಎಲ್ಲರ ಮುಂದೆಯೇ ಜಗಳ ಮಾಡ್ತಿದ್ದಳಂತೆ. ಹೀಗಾದ್ರೆ ಸರಿಯಾಗಲ್ಲ ಅಂತ ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳೋಕೆ ಮುಕ್ತಿರಂಜನ್ ಸೆಪ್ಟೆಂಬರ್ ಎರಡರಂದು ಮಹೂರ್ತ ಫಿಕ್ಸ್ ಮಾಡಿದ್ದ.

ಸೆಪ್ಟೆಂಬರ್ ಎರಡು. ಮದುವೆ ವಿಚಾರವಾಗಿ ಮಾತಾಡಬೇಕು ಅಂತ ಮಹಾಲಕ್ಷ್ಮಿಯೂ ಕೆಲಸಕ್ಕೆ ರಜೆ ಹಾಕಿದ್ದಳು. ಮುಕ್ತಿರಂಜನ್​ ಕೂಡ ರಜೆ ಹಾಕಿದ್ದ. ಅದ್ರಂತೆ ಮುಕ್ತಿರಂಜನ್ ವೈಯಾಲಿಕಾವಲ್‌ನಲ್ಲಿದ್ದ ಮಹಾಲಕ್ಷ್ಮಿ ಮನೆಗೆ ಬಂದಿದ್ದ. ಮುಂದೆ ಮದುವೆ ವಿಚಾರವಾಗಿ ಮಾತು ಶುರುವಾಗಿತ್ತು. ಮಹಾಲಕ್ಷ್ಮಿ ಮುಕ್ತಿಯನ್ನ ಮದುವೆಯಾಗು ಅಂತ ಕೇಳಿದ್ದಾಳೆ. ಆದ್ರೆ ಮಹಾಲಕ್ಷ್ಮಿಗೆ ಮದುವೆಯಾಗಿ ಒಂದು ಮಗು ಇರೋದ್ರಿಂದ ಮದುವೆ ಎಲ್ಲ ಬೇಡ ಲಿವಿಂಗ್​ನಲ್ಲೇ ಇರೋಣ ಅಂತ ಮುಕ್ತಿ ಹೇಳಿದ್ದಾನೆ. ಈ ವಿಚಾರ ಮಹಾಲಕ್ಷ್ಮಿ ಕೋಪಕ್ಕೆ ಕಾರಣವಾಗಿ ಮುಕ್ತಿರಂಜನ್ ಮೇಲೆ ಹಲ್ಲೆ ಮಾಡಿದ್ದಳಂತೆ. ನಾನಿಷ್ಟು ಸುಂದರವಾಗಿದ್ದೀನಿ.. ನನಗಿಂತ ಚೆನ್ನಾಗಿರೋಳ ಬೇಕಾ ಅಂತ ಜಗಳ ವಿಕೋಪಕ್ಕೆ ಹೋಗಿದೆ. ಈ ಟೈಮ್​ನಲ್ಲಿ ಮುಕ್ತಿರಂಜನ್​ ಮಹಾಲಕ್ಷ್ಮಿ ಕಪಾಳಕ್ಕೆ ಒಂದು ಏಟು ಕೊಟ್ಟಿದ್ದಾನೆ.

ಕುಸಿದು ಬಿದ್ದವಳ ಉಸಿರುಗಟ್ಟಿಸಿ ಜೀವ ತೆಗೆದಿದ್ದ ಹಂತಕ!
ಮುಕ್ತಿ ರಂಜನ್ ಕಪಾಳಕ್ಕೆ ಹೊಡೆಯುತ್ತಿದ್ದಂತೆ ಮಹಾಲಕ್ಷ್ಮಿ ಕುಸಿದು ಬಿದ್ದಿದ್ದಳು. ಮುಂದೆ ಏನ್ ಮಾಡ್ಬೇಕು ಅಂತ ದಿಕ್ಕು ತೋಚದೇ ಆಕೆ ಉಸಿರುಗಟ್ಟಿಸಿ ಮಹಾಲಕ್ಷ್ಮಿ ಪ್ರಾಣ ತೆಗೆದಿದ್ದ. ಇದಾದ ಮೇಲೆ ಕೊಲೆ ನಡೆದ ದಿನ ಮುಕ್ತಿ ವಾಪಸ್​ ಮನೆಗೆ ಹೋಗಿದ್ದ. ಮರುದಿನ ಮತ್ತೆ ಮಹಾಲಕ್ಷ್ಮಿ ಮನೆಗೆ ಬಂದ ಕಟುಕು ಮಾಡಿದ್ದು ಭೀಕರ ರಣ ಭೀಕರ.

ಇದನ್ನೂ ಓದಿ: ಮಹಾಲಕ್ಷ್ಮಿಯನ್ನ ಪೀಸ್, ಪೀಸ್ ಮಾಡಿದ್ಯಾಕೆ? ಸೈಕೋ ಕಿಲ್ಲರ್ ಎಲ್ಲಿ ಅಡಗಿದ್ದ? ಇಂಚಿಂಚು ಮಾಹಿತಿ ಬಹಿರಂಗ! 

ಹಂತಕ ಕೋಪದ ಕೈಗೆ ಬುದ್ಧಿ ಕೊಟ್ಟು ಮುಕ್ತಿ ಮಹಾಲಕ್ಷ್ಮಿ ಜೀವ ತೆಗೆದಿದ್ದ. ಆದ್ರೆ ಮುಂದೆ ಈ ವಿಚಾರ ಹೊರಗೆ ಬಂದ್ರೆ ಏನ್​ ಆಗುತ್ತೋ ಏನೋ ಅನ್ನೋ ಆತಂಕ ಕಾಡಿತ್ತು. ಅದಕ್ಕೆ ಮುಕ್ತಿ ಮಹಾಲಕ್ಷ್ಮಿ ದೇಹ ಕತ್ತರಿಸುವ ನಿರ್ಧಾರ ಮಾಡಿದ್ದ. ಹಾಗಾಗಿ ಸೆಪ್ಟೆಂಬರ್ 3ನೇ ತಾರೀಕು ಮತ್ತೆ ಮಹಾಲಕ್ಷಿ ಮನೆಗೆ ವಾಪಸ್ ಬಂದಿದ್ದ. ಚಾಕು ಮತ್ತು ಆಕ್ಸೆಲ್ ಬ್ಲೇಡ್ ಬಳಸಿ ಮಹಾಲಕ್ಷ್ಮಿ ದೇಹವನ್ನು ಕತ್ತರಿಸಿ ಬರೋಬ್ಬರಿ 59 ತುಂಡು ಮಾಡಿದ್ದ. ಈ ರಹಸ್ಯವನ್ನ ಡೆತ್​ ಡೈರಿಯಲ್ಲಿ ಮುಕ್ತಿ ಬರೆದಿದ್ದಾನೆ. ಇದಷ್ಟೇ ಅಲ್ಲ ಕೊಲೆಯ ಬಳಿಕ ಆಕೆ ಮೃತದೇಹದ ಫೋಟೋ ಮತ್ತು ವಿಡಿಯೋ ಮಾಡ್ಕೊಂಡಿರುವ ಬಗ್ಗೆಯೂ ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದಾನೆ.

ಕೊಲೆ ಆರೋಪಿ ಆತ್ಮ*ಹತ್ಯೆ.. ಚಾರ್ಜ್​ಶೀಟ್​ ಕತೆಯೇನು?
ಮಹಾಲಕ್ಷ್ಮಿ ಮರ್ಡರ್​​​ ಕೇಸ್​​​ನಲ್ಲಿ ಕೊಲೆ ಆರೋಪಿಯೇ ಸಾವಿಗೆ ಶರಣಾಗಿದ್ದು, ಪೊಲೀಸರಿಗೆ ಚಾರ್ಜ್​ಶೀಟ್ ಸಲ್ಲಿಸೋದೆ ಈಗ ಸವಾಲಾಗಿದೆ. ಹಾಗಾಗಿ ನ್ಯಾಯಾಲಯಕ್ಕೆ ಅಬೈಟೆಡ್ ಚಾರ್ಜ್​ಶೀಟ್​ ಸಲ್ಲಿಸೋದಕ್ಕೆ ಪೊಲೀಸರು ಸಿದ್ದತೆ ನಡೆಸಿದ್ದಾರೆ.

ಮುಕ್ತಿರಂಜನ್ ಬ್ಲಡ್​, ಮೊಬೈಲ್​, ಫಿಂಗರ್ ಫ್ರಿಂಟ್ ಸಂಗ್ರಹ!
ಈ ಪ್ರಕರಣದಲ್ಲಿ ಆರೋಪಿ ಪಾತ್ರ ಸಾಬೀತಾಗಿದ್ರು ಈಗ ಆರೋಪಿಯೇ ಬದುಕಿಲ್ಲ. ಹೀಗಾಗಿ ಅಬೈಟೇಡ್​ ಚಾರ್ಜ್​ಶೀಟ್ ಸಲ್ಲಿಕೆ ಮಾಡೋ ಮೊದಲು, ನ್ಯಾಯಾಲಯದ ಅನುಮತಿ ಪಡೆದು ಆತನ ಮೊಬೈಲ್, ಫಿಂಗರ್ ಪ್ರಿಂಟ್, ಬ್ಲಡ್ ಸ್ಯಾಂಪಲ್ ಕೂಡ ಸಂಗ್ರಹ ಮಾಡಲಾಗಿದೆ. ಮೃತ ರಂಜನ್ ಫಿಂಗರ್ ಪ್ರಿಂಟ್, ಬ್ಲಡ್ ಸ್ಯಾಂಪಲ್ ಪ್ರಮುಖ ಸಾಕ್ಷ್ಯ ಆಗಲಿದೆ. ತನಿಖಾ ತಂಡ ಮನೆಯಲ್ಲಿ ಸಿಕ್ಕಿರುವ ಬ್ಲಡ್ ಸ್ಯಾಂಪಲ್, ಫಿಂಗರ್ ಪ್ರಿಂಟ್ ಸ್ಯಾಂಪಲ್ ಜೊತೆ ಇದನ್ನು ಹೋಲಿಕೆ ಮಾಡಲಿದ್ದಾರೆ. ಅಲ್ಲದೇ ಕೃತ್ಯದ ಸ್ಥಳದಲ್ಲಿ ಪತ್ತೆಯಾದ ರಕ್ತದ ಮಾದರಿಯನ್ನು ಲುಮಿನಾರ್ ಟೆಸ್ಟ್​​ಗೆ ಕಳಿಸಲಾಗಿದೆ.

ಇದನ್ನೂ ಓದಿ: Bengaluru fridge horror: ಮಹಾಲಕ್ಷ್ಮಿ ಸಾಯಿಸಿದ ಬಳಿಕ ಮುಕ್ತಿ 3 ಪ್ಲಾನ್‌ ಏನು? ಫೇಲ್ ಆಗಿದ್ದು ಹೇಗೆ? 

ಆರೋಪಿ ಕೃತ್ಯದ ನಂತರ ಮೃತದೇಹ ತುಂಡರಿಸಿ ಪರಾರಿಯಾಗುವಾಗ ಯಾರಾದ್ರೂ ಸಹಕರಿಸಿದ್ರೆ, ಅವರನ್ನ ಅರೆಸ್ಟ್ ಮಾಡುವ ಸಾಧ್ಯತೆಯಿದೆ. ಇನ್ನೂ ಕೊಲೆ ಬಗ್ಗೆ ಮುಕ್ತಿರಂಜನ್ ಸಹೋದರನಿಗೆ ಮಾಹಿತಿ ನೀಡಿದ್ದು, ಪ್ರಕರಣ ಸಂಬಂಧ ಆರೋಪಿ ಸಹೋದರನ 164 ಹೇಳಿಕೆ ದಾಖಲಿಸಲು ಸಿದ್ದತೆ ನಡೆಸಲಾಗ್ತಿದೆ.

ಮಹಾಲಕ್ಷ್ಮಿ ಹತ್ಯೆ ಕೇಸ್​ ಬಗ್ಗೆ ಮಾತನಾಡಿರುವ ಪೊಲೀಸ್ ಆಯುಕ್ತ ದಯಾನಂದ್​, ಪ್ರಕರಣದ ಕೂಲಂಕುಶ ತನಿಖೆ ನಡೆದಿದ್ದು, ಹತ್ಯೆ ಕಾರಣ ವೈಯಕ್ತಿಕವಾಗಿದ್ದು, ಮದುವೆ ವಿಚಾರಕ್ಕೆ ಕೊಲೆ ನಡೆದಿರೋದು ತನಿಖೆಯಲ್ಲಿ ಗೊತ್ತಾಗಿದೆ ಅಂತ ಹೇಳಿದ್ದಾರೆ.

ಸಣ್ಣ ಮಾತುಕತೆಯಲ್ಲಿ ಬಗೆಹರಿಯಬೇಕಿದ್ದ ಸಮಸ್ಯೆಯನ್ನ ಮುಕ್ತಿ ಮತ್ತು ಮಹಾಲಕ್ಷ್ಮಿ ದೊಡ್ಡದು ಮಾಡ್ಕೊಂಡಿದ್ರು, ಕೊನೆಗೆ ಒಬ್ಬಳು ಕೊ*ಲೆಯಾದ್ರೆ.. ಕೊಲೆ ಮಾಡಿದವನು ಸೂಸೈ*ಡ್ ಮಾಡ್ಕೊಂಡಿದ್ದಾನೆ. ಆದ್ರೆ ಕೊಲೆಯ ಭೀಕರತೆ ಕಂಡು ಬೆಂಗಳೂರು ಬೆಚ್ಚಿ ಬಿದ್ದಿರೋದಂತು ಸುಳಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹಾಲಕ್ಷ್ಮಿ ಸಾಯಿಸಿದ್ದು ಯಾಕೆ? ಪೀಸ್, ಪೀಸ್ ಮಾಡಿದ್ದು ಹೇಗೆ? ಮುಕ್ತಿ ಡೆತ್‌ನೋಟ್‌ನಲ್ಲಿ ಪ್ರತಿಯೊಂದು ಡಿಟೇಲ್ಸ್‌!

https://newsfirstlive.com/wp-content/uploads/2024/09/mahalaxmi5.jpg

Load More