ಮುಗ್ಧ ನಟನೆ ಮೂಲಕವೇ ಫ್ಯಾನ್ಸ್ಗಳನ್ನು ಗಳಿಸಿಕೊಂಡ ಸ್ಟಾರ್
ಗಗನ ಡ್ಯಾನ್ಸ್ ಬಗ್ಗೆ ಹಾಡಿ ಹೊಗಳಿದ ಹ್ಯಾಟ್ರಿಕ್ ಹೀರೋ ಶಿವಣ್ಣ
ಡಿಕೆಡಿಗೆ ಬಂದು ನಿನ್ನ ಕರೆದುಕೊಂಡು ಹೋಗ್ತೀನಿ ಅಂತ ಹೇಳಿದ್ದೇಕೆ?
ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗೆ ಈಗಾಗಲೇ ಶುರುವಾಗಿದೆ. ಪ್ರತಿ ಸೀಸನ್ನಲ್ಲೂ ಜನರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತಾ ಬಂದಿದೆ. ಈ ಬಾರಿಯ ಸ್ಪೆಷಾಲಿಟಿ ಏನೆಂದರೆ, ಡ್ಯಾನ್ಸರ್ ಮತ್ತು ಸೆಲೆಬ್ರಿಟಿಗಳ ಕಾಂಬಿನೇಷನ್‌ನಲ್ಲಿ ಡಿಕೆಡಿ ಮೂಡಿಬರುತ್ತಿದೆ. ಕಳೆದ ವಾರವಷ್ಟೇ ಶುರುವಾದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗೆ ವೀಕ್ಷಕರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಇದನ್ನೂ ಓದಿ: ಅಯ್ಯೋ ಗಗನ.. DKD ವೇದಿಕೆ ಮೇಲೆ ಡ್ಯಾನ್ಸ್ ಮಾಡಲು ಒದ್ದಾಡಿದ ಮಹಾನಟಿ; ಬಿದ್ದು ಬಿದ್ದು ನಕ್ಕ ಜಡ್ಜಸ್!
ಇನ್ನು, ಡಿಕೆಡಿ ಸ್ಪರ್ಧಿಗಳು ವಾರದಿಂದ ವಾರಕ್ಕೆ ಭರ್ಜರಿ ಡ್ಯಾನ್ಸ್ ಮಾಡುತ್ತಿದ್ದಾರೆ. ಅದರಲ್ಲೂ ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಮಹಾನಟಿ ಸ್ಪರ್ಧಿಯಾಗಿದ್ದ ಗಗನ ದಿನ ಕಳೆದಂತೆ ಸಖತ್ ಆಗಿ ಡ್ಯಾನ್ಸ್ ಮಾಡುತ್ತಿದ್ದಾರೆ. ಕಳೆದ ವಾರ ಡಿಕೆಡಿ ವೇದಿಕೆ ಮೇಲೆ ಮಹಾನಟಿ ರಿಯಾಲಿಟಿ ಶೋ ಗಗನ ಡ್ಯಾನ್ಸ್ ಮಾಡಲು ಹೋಗಿ ಫಜೀತಿಗೆ ಸಿಕ್ಕಿಹಾಕಿಕೊಂಡಿದ್ದರು. ವೇದಿಕೆ ಮೇಲೆ ಉಜ್ವಲ್ ಜೊತೆಗೆ ಪಲ್ಟಿ ಹೊಡೆಯುವಾಗ ಬ್ಯಾಲೆನ್ಸ್ ತಪ್ಪಿ ಬಿದ್ದುಬಿಟ್ಟಿದ್ದರು.
ಇದನ್ನೂ ನೋಡಿದ ಅಭಿಮಾನಿಗಳು ಗಾಬರಿಯಾಗಿದ್ದರು. ಜೊತೆಗೆ ಗಗನ ಪೋಷಕರು ಕೂಡ ಸ್ವಲ್ಪ ಗಾಬರಿಯಾಗಿದ್ದರಂತೆ. ಹೌದು, ನಿನ್ನೆ ನಡೆದ ಎಪಿಸೋಡ್ನಲ್ಲಿ ಈ ಬಗ್ಗೆ ಮಾತಾಡಿದ ಗಗನ ಕೆಲವರು ನನ್ನ ಡ್ಯಾನ್ಸ್ ನೋಡಿ ಖುಷಿಯಾಗಿದ್ದರು. ಇನ್ನೂ ಕೆಲವರು ಅದನ್ನು ಕಾಮಿಡಿ ರೀತಿಯಲ್ಲಿ ಮಜಾ ಮಾಡಿದ್ರೂ. ಗಗನ ಏನೇ ಮಾಡಿದ್ರು ಮುದ್ದಾಗಿ ಇರುತ್ತದೆ ಅಂದ್ರು, ಡ್ಯಾನ್ಸ್ ಬರೋರು ಸ್ವಲ್ಪ ಬೈದರು, ಆದ್ರೆ, ನಮ್ಮ ಅಪ್ಪ ತುಂಬಾ ಟೆನ್ಶನ್ ಆಗಿ ಕಾಲ್ ಮಾಡಿದ್ದಾರೆ. ನೋಡಮ್ಮ ನಾನು ನಿನಗೆ ಹೇಳಿದ್ದೇ ಡ್ಯಾನ್ಸ್ ಎಲ್ಲ ಮಾಡೋದು ಬೇಡ ಅಂತ. ನೀನು ನನ್ನ ಮಾತು ಕೇಳಲಿಲ್ಲ. ಕೆಳಗಡೆ ಬಿದ್ದು ಏನಾದ್ರೂ ಪೆಟ್ಟು ಮಾಡಿಕೊಂಡ್ರೆ ಹೇಗೆ ಅಂತ ಹೇಳಿದ್ರು, ಅಲ್ಲಿಗೆ ಬಂದು ನಿನ್ನ ಕರೆದುಕೊಂಡು ಹೋಗ್ತೀನಿ. ಎಲಿಮಿನೇಷನ್ ಯಾವಾಗ ಕೇಳು ಅಂತ ಹೇಳಿದ್ದಾರೆ. ಆಗ ನಾನು ಅವರನ್ನು ಸಮಾಧಾನ ಮಾಡಿದ್ದೇನೆ ಅಂತ ಹೇಳಿದ್ರು.
View this post on Instagram
ಇನ್ನೂ, ಗಗನ ತನ್ನ ಸಹಜ ಅಭಿನಯ, ಮುಗ್ಧ ನಟನೆಯ ಮೂಲಕವೇ ಜನಮನ ಗೆದ್ದಿದ್ದರು. ಆ ಮೂಲಕವೇ ಗಗನಾ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಸಿದ್ದೇಗೌಡರ ಅತ್ತೆ ಮಗಳಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಆಗಿರೋ ಡಿಕೆಡಿಗೆ ಎಂಟ್ರಿ ಕೊಟ್ಟಿದ್ದಾರೆ. ಗಗನ ಅವರು ಡ್ಯಾನ್ಸ್ನಲ್ಲಿ ಅಷ್ಟೇನೂ ಅನುಭವ ಇಲ್ಲ. ಆದರೆ ಪ್ರಾಕ್ಟೀಸ್ ಮಾಡಲು ಮೂಲಕ ಒಂದಿಷ್ಟು ಡ್ಯಾನ್ಸ್ ಕಲಿತುಕೊಂಡಿದ್ದಾರೆ. ಸದ್ಯ ನಿನ್ನೆಯ ಎಪಿಸೋಡ್ನಲ್ಲಿ ಎಲ್ಲಾ ಜಡ್ಜ್ಗಳ ಮನಸ್ಸನ್ನು ಗೆದ್ದು ಡಿಕೆಡಿ ಗೋಲ್ಡನ್ ಬಜಾರ್ ತಮ್ಮದಾಗಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ