newsfirstkannada.com

ಲಂಗ ದಾವಣಿಯಲ್ಲಿ ಸಖತ್​ ಮಿಂಚಿದ ಚಿನಕುರಳಿ ಗಗನಾ; ಪಕ್ಕಾ ದೃಷ್ಟಿ ಆಗುತ್ತೆ ನಿಮ್ಗೆ ಎಂದ ಅಭಿಮಾನಿ

Share :

Published August 31, 2024 at 1:27pm

Update August 31, 2024 at 2:09pm

    ಡಿಕೆಡಿ ವೇದಿಕೆ ಮೇಲೆ ಕಮಾಲ್​ ಮಾಡುತ್ತಿರೋ ಮಹಾನಟಿ ಗಗನಾ

    ಮುಗ್ಧ ನಟನೆ ಮೂಲಕವೇ ಫ್ಯಾನ್ಸ್​ ಗಳಿಸಿಕೊಂಡಿರುವ ಸ್ಟಾರ್

    ಮುದ್ದಾಗಿ ಕಾಣುತ್ತಿದ್ದೀರಿ, ನಟನೆಗೂ ಸೈ, ಕಾಮಿಡಿಗೂ ಜೈ ಅಂದ ಫ್ಯಾನ್​​

ಕಿರುತೆರೆಯಲ್ಲಿ ಸಂಚಲನ ಸೃಷ್ಟಿಸಿತ್ತು ಮಹಾನಟಿ ರಿಯಾಲಿಟಿ ಶೋ. ನಾಲ್ಕೈದು ತಿಂಗಳಿಂದ ಮಹಾನಟಿ ಶೋ ಬಗ್ಗೆ ಕಿರುತೆರೆಯಲ್ಲಿ ಆಗಾಗ ಹಲವಾರು ಮಾಹಿತಿಗಳು ಕೇಳಿ ಬಂದಿದ್ದವು. ತಮ್ಮ ಅದ್ಭುತ ನಟನೆಯ ಮೂಲಕ ಭವಿಷ್ಯದ ಭರವಸೆಯ ಯುವ ನಟಿಯಾಗಿ ಹೊರ ಹೊಮ್ಮಿದ್ದಾರೆ ಮಹಾನಟಿ ಶೋ ಸ್ಪರ್ಧಿಗಳು.

ಇದನ್ನೂ ಓದಿ: ಅಯ್ಯೋ ಗಗನ.. DKD ವೇದಿಕೆ ಮೇಲೆ ಡ್ಯಾನ್ಸ್​ ಮಾಡಲು ಒದ್ದಾಡಿದ ಮಹಾನಟಿ; ಬಿದ್ದು ಬಿದ್ದು ನಕ್ಕ ಜಡ್ಜಸ್!

ಇದೇ ಶೋ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದಾರೆ ಗಗನಾ. ಚಿತ್ರದುರ್ಗ ಮೂಲದ ಗಗನಾ ಮಹಾನಟಿಯಲ್ಲಿ ಅಷ್ಟೇ ಅಲ್ಲದೇ ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ ಶೋನಲ್ಲೂ ಕಮಾಲ್​ ಮಾಡ್ತಿದ್ದಾರೆ. ಡಿಕೆಡಿಗೆ ಹೋದ ಬಳಿಕ ಮಸ್ತ್ ಡ್ಯಾನ್ಸ್​​ ಮಾಡುತ್ತಿರೋ ಗಗನಾ ಅವರಿಗೆ ವೀಕ್ಷಕರಿಂದ ಮೆಚ್ಚುಗೆಯ ಮಾಹಪೂರ ಹರಿದು ಬರುತ್ತಿವೆ. ತನ್ನ ಸಹಜ ಅಭಿನಯ, ಮುಗ್ಧ ನಟನೆಯ ಮೂಲಕವೇ ಜನಮನ ಗೆದ್ದಿದ್ದ ಮಹಾನಟಿ ಶೋ ಸ್ಪರ್ಧಿ ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ನೇರಳೆ ಬಣ್ಣದ ಗೌನ್​​ನಲ್ಲಿ ಸಖತ್​ ಕ್ಯೂಟ್​ ಆಗಿ ಕಾಣಿಸಿಕೊಂಡಿದ್ದಾರೆ. ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂದ್ದಾರೆ. ಅದರಲ್ಲೂ ನಟ ಗಣೇಶ್​ ಅಭಿನಯದ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಹೇ ಗಗನ ಮಳೆಯ ಹರಿಸಿ ಎಂಬ ಸಾಂಗ್​ಗೆ ಪೋಸ್​​ ಕೊಟ್ಟಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಗಗನಾ ತುಂಬಾ ಚೆನ್ನಾಗಿ ಕಾಣ್ತಾ ಇದ್ದೀಯಾ ದೃಷ್ಟಿ ತೆಗೆಸಿಕೋ ಅಮ್ಮನ ಹತ್ತಿರ, ನಟನೆಗೂ ಸೈ, ಕಾಮಿಡಿಗೂ ಜೈ, ಐ ಲವ್ ಯು ಸೂಪರ್ ಸಿಸ್ಟರ್ ನಾನು ನಿಮ್ಮ ದೊಡ್ಡ ಬಿಗ್​ ಫ್ಯಾನ್ ಅಂತ ಕಾಮೆಂಟ್ ಹಾಕಿದ್ದಾರೆ.

View this post on Instagram

A post shared by Gagana (@gagana_bhari)

ಮಹಾನಟಿ ಶೋ ಮೂಲಕವೇ ಗಗನಾ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಸಿದ್ದೇಗೌಡರ ಅತ್ತೆ ಮಗಳಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಆಗಿರೋ ಡಿಕೆಡಿಗೆ ಎಂಟ್ರಿ ಕೊಟ್ಟಿದ್ದಾರೆ. ಗಗನಾ ಅವರು ಡ್ಯಾನ್ಸ್​ನಲ್ಲಿ ಅಷ್ಟೇನೂ ಅನುಭವ ಇಲ್ಲ. ಪ್ರಾಕ್ಟೀಸ್ ಮಾಡಲು ಮೂಲಕ ಒಂದಿಷ್ಟು ಡ್ಯಾನ್ಸ್​ ಕಲಿತುಕೊಂಡಿದ್ದಾರೆ. ಕಳೆದ ಎಪಿಸೋಡ್​ನಲ್ಲಿ ಎಲ್ಲಾ ಜಡ್ಜ್​ಗಳ ಮನಸ್ಸನ್ನು ಗೆದ್ದು ಡಿಕೆಡಿ ಗೋಲ್ಡನ್ ಬಜಾರ್ ತಮ್ಮದಾಗಿಸಿಕೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲಂಗ ದಾವಣಿಯಲ್ಲಿ ಸಖತ್​ ಮಿಂಚಿದ ಚಿನಕುರಳಿ ಗಗನಾ; ಪಕ್ಕಾ ದೃಷ್ಟಿ ಆಗುತ್ತೆ ನಿಮ್ಗೆ ಎಂದ ಅಭಿಮಾನಿ

https://newsfirstlive.com/wp-content/uploads/2024/08/gagana.jpg

Load More