Advertisment

ಮಹಾರಾಷ್ಟ್ರದಲ್ಲಿ ಬಿರುಸಿನ ಮತದಾನ.. ಸಚಿನ್ ತೆಂಡೂಲ್ಕರ್​, ಅಕ್ಷಯ್ ಕುಮಾರ್ ಸೇರಿ ವೋಟ್ ಮಾಡಿದ ಸೆಲೆಬ್ರೆಟಿಗಳು ಯಾರು?

author-image
Gopal Kulkarni
Updated On
ಮಹಾರಾಷ್ಟ್ರದಲ್ಲಿ ಬಿರುಸಿನ ಮತದಾನ.. ಸಚಿನ್ ತೆಂಡೂಲ್ಕರ್​, ಅಕ್ಷಯ್ ಕುಮಾರ್ ಸೇರಿ ವೋಟ್ ಮಾಡಿದ ಸೆಲೆಬ್ರೆಟಿಗಳು ಯಾರು?
Advertisment
  • ಮಹಾರಾಷ್ಟ್ರದಲ್ಲಿ 288 ಕ್ಷೇತ್ರಗಳಲ್ಲಿ ಚುರುಕುಗೊಂಡ ಮತದಾನದ ಪ್ರಕ್ರಿಯೆ
  • ಮತಗಟ್ಟೆಯಲ್ಲಿ ಕಂಡ ಸಚಿನ್, ಅಕ್ಷಯ್​, ಉರ್ಮಿಳಾ, ಸೋನು ಸೂದ್​
  • ಎಲ್ಲರೂ ತಪ್ಪದೇ ಮತದಾನ ಮಾಡುವಂತೆ ಸೆಲೆಬ್ರೆಟಿಗಳಿಂದ ಮನವಿ

ಈ ವರ್ಷದ ಕೊನೆಯ ಚುನಾವಣೆಗೆ ಸಾಕ್ಷಿಯಾಗುತ್ತಿದೆ ಮಹಾರಾಷ್ಟ್ರ. ಮಹಾರಾಷ್ಟ್ರದ 288 ವಿಧಾಸಭಾ ಕ್ಷೇತ್ರಗಳಿಗೆ ಇಂದು ಮತದಾನ ಶುರುವಾಗಿದೆ. ಎಲ್ಲ ಕಡೆಯೂ ಸುರಕ್ಷಿತವಾಗಿ ಜನರು ಮತದಾನ ಮಾಡುತ್ತಿದ್ದಾರೆ. ಇಲ್ಲಿಯವರೆಗೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ. ಮಹಾರಾಷ್ಟ್ರ ಅಂದ್ರೆ ಅದು ಸೆಲೆಬ್ರೆಟಿಗಳ ತವರು. ದೊಡ್ಡ ದೊಡ್ಡ ಕ್ರಿಕೆಟ್​ ತಾರೆಯರಿಂದ ಹಿಡಿದು, ದೇಶದ ಅತ್ಯಂತ ಶ್ರೀಮಂತ ಕುಟುಂಬಗಳಿಂದ ಹಿಡಿದು, ದೊಡ್ಡ ದೊಡ್ಡ ಬಾಲಿವುಡ್ ಸ್ಟಾರ್​ಗಳನ್ನು ತನ್ನ ಒಡಲಲ್ಲಿ ಸಾಕುತ್ತಿರುವ ರಾಜ್ಯ.

Advertisment

ಇದನ್ನೂ ಓದಿ:ಹೋಟೆಲ್​ನಲ್ಲಿ ಹಣ ಹಂಚುವಾಗ ಸಿಕ್ಕಿಬಿದ್ದ BJP ನಾಯಕರು.. ಪ್ರತಿಪಕ್ಷಗಳ ಆರೋಪ ಏನು?

ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಗೆ ಹಲವು ಸೆಲೆಬ್ರೆಟಿಗಳು ಈಗಾಗಲೇ ಮತದಾನ ಮಾಡುವ ಮೂಲಕ ರಾಜ್ಯದ ಜನತೆಗೆ ತಮ್ಮ ಹಕ್ಕನ್ನು ಚಲಾಯಿಸುವಂತೆ ಮನವಿ ಮಾಡಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ದಿ ಲೆಜೆಂಡ್ ಸಚಿನ್ ತೆಂಡೂಲ್ಕರ್​, ಅವರ ಪತ್ನಿ ಅಂಜಲಿ ಹಾಗೂ ಅವರ ಪುತ್ರಿ ಸಾರಾ ಇಂದು ತಮ್ಮ ಬೂತ್​ನಲ್ಲಿ ಮತದಾನ ಮಾಡಿ ಬಂದಿದ್ದಾರೆ.

publive-image

ಮೂವರು ಕೂಡ ತಾವು ಮತ ಹಾಕಿರುವ ಬಗ್ಗೆ ಬೆರಳಿಗೆ ಹಾಕಿರುವ ಶಾಯಿಯ ಗುರುತನ್ನು ಮಾಧ್ಯಮಗಳಿಗೆ ತೋರಿಸಿದರು. ಇದೇ ವೇಳೆ ಮಾತನಾಡಿದ ಮಾಸ್ಟರ್ ಬ್ಲಾಸ್ಟರ್ ಸಚಿನ್, ಮತದಾನ ನಮ್ಮೆಲ್ಲರ ಹಕ್ಕು ನಾವು ಅದನ್ನು ತಪ್ಪದೇ ಪಾಲಿಸಬೇಕು. ಎಲ್ಲರೂ ಮನೆಯಿಂದ ಹೊರಗೆ ಬಂದು ಮತದಾನ ಮಾಡಬೇಕು, ಹಾಗೆ ಮಾಡುತ್ತಾರೆ ಎಂದು ನಾನು ನಂಬಿದ್ದೇನೆ ಎಂದು ಹೇಳಿದ್ದಾರೆ.

Advertisment


">November 20, 2024

ಇನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂತ ತಮ್ಮ ಮತವನ್ನು ಚಲಾಯಿಸಿದರು. ಬೆರಳಿನ ಶಾಯಿ ಗುರುತನ್ನು ತೋರಿಸಿದ ಅಕ್ಷಯ್ ಕುಮಾರ್, ಮತದಾನ ಪ್ರಕ್ರಿಯೆ ನಡೆಯುವಲ್ಲಿ ವ್ಯವಸ್ಥೆಯನ್ನು ತುಂಬಾ ಚೆನ್ನಾಗಿ ಮಾಡಲಾಗಿದೆ. ದಯವಿಟ್ಟು ಎಲ್ಲರೂ ಬಂದು ಮತ ಚಲಾಯಿಸಿ ಅದು ತುಂಬಾ ಮುಖ್ಯವಾದದ್ದು ಎಂದಿದ್ದಾರೆ.

Advertisment


">November 20, 2024

ನಟ ಕಾರ್ತಿಕ್ ಆರ್ಯನ್ ಕೂಡ ತಮ್ಮ ವೋಟ್ ಚಲಾಯಿಸಿ ನಾನು ಹೆಮ್ಮೆಯ ಮತದಾರ ಎಂಬ ಬರಹವಿರುವ ಬೋರ್ಡ್​ ಕಡೆ ಕೈ ತೋರಿ ಮತದಾನ ಮಾಡಲು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಇತ್ತ ಟಿನಾ ದತ್ತಾ ಕೂಡ ತಮ್ಮ ಮತವನ್ನು ಚಲಾಯಿಸಿದ್ದಾರೆ.

publive-image

ಇದನ್ನೂ ಓದಿ: ಮಹಾ’, ಜಾರ್ಖಂಡ್ ವಿಧಾನಸಭಾ ಚುನಾವಣೆ; ಇಂದು ಮತದಾನ.. ಒಟ್ಟು ಎಷ್ಟು ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ?
ಇನ್​ಸ್ಟಾದಲ್ಲಿ ಮತ ಚಲಾಯಿಸಿದ ಫೋಟೋವನ್ನು ಪೋಸ್ಟ್ ಮಾಡಿರುವ ಟೀನಾ ದತ್ತ, ನಾನು ತುಂಬಾ ಬ್ಯುಸಿ ಎನ್ನುವ ಮಾತನ್ನು ಬಿಟ್ಟು ಆದಷ್ಟು ಬೇಗ ಬಂದು ನೀವು ಮತದಾನ ಮಾಡಿ ಯಾಕಂದ್ರೆ ಪ್ರತಿಯೊಂದು ಮತವೂ ಕೂಡ ಪ್ರಮುಖ ಎಂದು ಹೇಳಿದ್ದಾರೆ.

ಮತ್ತೊಬ್ಬ ಬಾಲಿವುಡ್​ ನಟಿ ಉರ್ಮಿಳಾ ಮಾರ್ತೊಂಡೇಕರ್​ ಕೂಡ ತಮ್ಮ ಮತವನ್ನು ಚಲಾಯಿಸಿದ್ದು. ದಯವಿಟ್ಟು ವೋಟ್ ಮಾಡಿ,ನಿಮ್ಮ ಸಲುವಾಗಿ, ನಿಮ್ಮ ಮಕ್ಕಳ ಸಲುವಾಗಿ ಹಾಗೂ ನಿಮ್ಮ ಸಮಾಜದ ಸಲುವಾಗಿ ಎಂದು ಹೇಳಿದ್ದಾರೆ

Advertisment


">November 20, 2024

.ಇನ್ನು ಮತ್ತೊಬ್ಬ ಬಾಲಿವುಡ್​ ನಟ ಸೋನು ಸೂದ್ ಕೂಡ ತಮ್ಮ ಮತವನ್ನು ಚಲಾಯಿಸಿದ್ದು. ಇದನ್ನು ರಜೆ ದಿನವೆಂದು ಮಜಾಗಾಗಿ ಬಳಸಬೇಡಿ ದಯವಿಟ್ಟು ಮತಗಟ್ಟೆಗೆ ಹೋಗಿ ಮತ ಚಲಾಯಿಸಿ ಎಂದು ಹೇಳಿದ್ದಾರೆ.

Advertisment


">November 20, 2024

ಇಂದು ಬೆಳಗ್ಗೆ 7 ಗಂಟೆಯಿಂದ ಮಹಾರಾಷ್ಟ್ಟದಲ್ಲಿ ಒಟ್ಟು 288 ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಸಂಜೆ 6 ಗಂಟೆಯವರೆಗೆ ಮತದಾನ ಮಾಡಲು ಅವಕಾಶವಿದ್ದು ಈ ಬಾರಿ ಒಟ್ಟು 4136 ನಾಯಕರು ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಅದರಲ್ಲಿ ಪಕ್ಷೇತರರಾಗಿ ನಿಂತವರ ಸಂಖ್ಯೆ 2086ರಷ್ಟಿದೆ. ಇವರೆಲ್ಲರ ಹಣೆಬರಹವನ್ನು ಇಂದು ಮಹಾರಾಷ್ಟ್ರದ ಪ್ರಜೆಗಳು ನಿರ್ಧರಿಸಲಿದ್ದಾರೆ.

Advertisment
Advertisment
Advertisment