ರಾಷ್ಟ್ರೀಯ ಹೆದ್ದಾರಿ 68ರಲ್ಲಿ ಲಾರಿಗೆ ಭಯಾನಕವಾಗಿ ಡಿಕ್ಕಿ ಹೊಡೆದ ಕಾರು
ಒಂದೇ ಕುಟುಂಬದ 6 ಮಂದಿ ಕಾರು ಅಪಘಾತದಲ್ಲಿ ದಾರುಣವಾಗಿ ಸಾವು
ಘಟನೆಯಲ್ಲಿ ಮೃತರ ಪೈಕಿ 3 ವಯಸ್ಕರಾದರೆ, ಇನ್ನು ಉಳಿದವ್ರು ಮಕ್ಕಳು
ಜೈಪುರ: ಟ್ರೇಲರ್ ಲಾರಿಗೆ ಅತಿ ವೇಗವಾಗಿ ಬಂದ ಕಾರೊಂದು ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಒಂದೇ ಕುಟುಂಬದ 6 ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆಯು ರಾಜಸ್ತಾನದ ಬರ್ಮಾರ್ ಜಿಲ್ಲೆಯ ಸುರ್ತೆ ಕೀ ಬೇರಿ ಬಳಿಯ ರಾಷ್ಟ್ರೀಯ ಹೆದ್ದಾರಿ 68ರಲ್ಲಿ ನಡೆದಿದೆ.
ಧನರಾಜ್ (45), ಗಾಯತ್ರಿ (26), ಮೂವರು ಮಕ್ಕಳು ಸ್ವರಾಂಜಲಿ (5), ಪ್ರಶಾಂತ್ (5), ಭಾಗ್ಯ ಲಕ್ಷ್ಮಿ (1) ಹಾಗೂ ಸೋನ್ವಾರೋ (40) ಸೇರಿ ಒಟ್ಟು ಘಟನೆಯಲ್ಲಿ 6 ಜನ ಮೃತಪಟ್ಟಿದ್ದಾರೆ. ಮೃತರೆಲ್ಲರು ಮಹಾರಾಷ್ಟ್ರದ ಭಾಲ್ಗಾಂವ್ ಮೂಲದವರಾಗಿದ್ದಾರೆ. ದೀಪಾವಳಿ ಹಿನ್ನೆಲೆಯಲ್ಲಿ ರಜೆ ಇದ್ದ ಕಾರಣ ಪ್ರವಾಸಕ್ಕೆಂದು ರಾಜಸ್ತಾನಕ್ಕೆ ಬಂದಿದ್ದರು ಎಂದು ಹೇಳಲಾಗಿದೆ.
ರಾಷ್ಟ್ರೀಯ ಹೆದ್ದಾರಿ 68ರಲ್ಲಿ ಅತಿ ವೇಗವಾಗಿ ಕಾರು ತೆರಳುತ್ತಿತ್ತು. ಈ ವೇಳೆ ಎದುರಿಗೆ ಬಂದ ಟ್ರೇಲರ್ ಲಾರಿಗೆ ಕಾರು ರಭಸವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಆರು ಜನರು ಮೃತಪಟ್ಟಿದ್ದಾರೆ. ಇನ್ನು ಲಾರಿಗೆ, ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕಾರೆಲ್ಲ ಫುಲ್ ಜಖಂ ಆಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಧೋರಿಮಾನ ಠಾಣಾ ಪೊಲೀಸರು ಮೃತದೇಹಗಳನ್ನು ಪೋಸ್ಟ್ ಮಾರ್ಟಮ್ಗೆ ಕಳುಹಿಸಿ, ಬಳಿಕ ಘಟನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ