/newsfirstlive-kannada/media/post_attachments/wp-content/uploads/2024/11/MAHARASHTRA-ELECTION-EXITE-POLLS-2.jpg)
ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್ಸ್​ಗಳು ಹಾವು ಏಣಿ ಆಟ ನಡೆಯೋದು ಪಕ್ಕಾ ಎನ್ನಲಾಗುತ್ತಿದೆ. ಒಂದೊಂದು ಎಕ್ಸಿಟ್ ಪೋಲ್ ಒಂದು ಹೇಳುತ್ತಿವೆ. ಈಗ ಬಂದಿರುವ ಎರಡು ಸಮೀಕ್ಷೆಗಳ ಪ್ರಕಾರ ಒಂದು ಎನ್​ಡಿಎಗೆ ಬಹುಮತ ಬರುತ್ತದೆ ಎಂದು ಹೇಳುತ್ತಿದ್ದರೆ. ಮತ್ತೊಂದು ಸಮೀಕ್ಷೆ ಅಡ್ಡಗೋಡೆಯ ಮೇಲೆ ದೀಪ ಇಟ್ಟಿದೆ.
/newsfirstlive-kannada/media/post_attachments/wp-content/uploads/2024/11/MAHARASHTRA-ELECTION-EXITE-POLLS.jpg)
IANS MATRIZE ಸಮೀಕ್ಷ ನಡೆಸಿರುವ ಪ್ರಕಾರ ಬಿಜೆಪಿ+ 150 ರಿಂದ 170 ಸ್ಥಾನ ಗಳಿಸಲಿದೆ ಎಂದು ಹೇಳಲಾಗುತ್ತಿದೆ. ಅಂದ್ರೆ ಮ್ಯಾಜಿಕ್​ ನಂಬರ್ 145 ನ್ನು ಎನ್​ಡಿಎ ಮೈತ್ರಿಕೂಟ ಸರಳವಾಗಿ ದಾಟಲಿದೆ ಎಂದು ಹೇಳಲಾಗಿದೆ. ಇನ್ನು ಮಹಾವಿಕಾಸ್ ಅಘಡಿ 110 ರಿಂದ 130 ಸ್ಥಾನ ಪಡೆಯಲಿದೆ ಎಂದು ಈ ಸಮೀಕ್ಷೆಯಲ್ಲಿ ಹೇಳಲಾಗಿದ್ದರೆ, ಇತರರು 8 ರಿಂದ 10 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯನ್ನು ವ್ಯಕ್ತಪಡಿಸಿದೆ.
ಇದನ್ನೂ ಓದಿ:ಮಹಾರಾಷ್ಟ್ರ ಚುನಾವಣೆ: ಮತಗಟ್ಟೆ ಬಳಿಯೇ ಕುಸಿದು ಬಿದ್ದ ಅಭ್ಯರ್ಥಿ ದುರಂತ ಅಂತ್ಯ!
/newsfirstlive-kannada/media/post_attachments/wp-content/uploads/2024/11/MAHARASHTRA-ELECTION-EXITE-POLLS-1.jpg)
ಇನ್ನೂ ಪಿ ಮಾರ್ಕ್​ ಮಾಡಿದ ಸಮೀಕ್ಷೆ ಅಡ್ಡಗೋಡೆಯ ಮೇಲೆ ದೀಪವಿಟ್ಟಿದೆ. ಈ ಒಂದು ಸಮೀಕ್ಷೆಯ ಪ್ರಕಾರ ಎರಡು ಮೈತ್ರಿಗಳಿಗೂ ಬಹುಮತ ಬರುವ ಚಾನ್ಸ್​ ಇದೆ ಎಂದು ಹೇಳಲಾಗಿದೆ ಎನ್​ಡಿಎ 137 ರಿಂದ 157 ಸ್ಥಾನಗಳನ್ನು ಗೆಲ್ಲುವ ಭರವಸೆಯನ್ನು ತೋರಿಸಿದರೆ. ಮಹಾ ವಿಕಾಸ್ ಅಘಡಿ 126 ರಿಂದ 146 ಸ್ಥಾನಗಳನ್ನು ಗೆಲ್ಲುವ ಊಹೆಯನ್ನು ಮಾಡಿದೆ. ಇತರರು 2 ರಿಂದ 8 ಸ್ಥಾನ ಪಡೆಯುವ ನಿರೀಕ್ಷೆಯನ್ನು ವ್ಯಕ್ತಪಡಿಸಿದದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us