newsfirstkannada.com

67 ವರ್ಷದ ವೃದ್ಧನ ಪೋಸ್ಟ್ ಆಫೀಸ್​​ ಅಕೌಂಟ್​​ಗೆ 1,00,000 ಲಾಟರಿ; ಲಕ್ಷ ಹಣ ನೋಡ್ತಿದ್ದಂತೆ..

Share :

23-10-2023

    ಮಹಾರಾಷ್ಟ್ರದ ಲತೂರ್​ನಲ್ಲಿ ವಿಶೇಷ ಪ್ರಕರಣ

    ಶ್ರೀಕಾಂತ್ ಜಗನ್ನಾಥ್​ ರಾವ್ ಖಾತೆಗೆ 1.1 ಲಕ್ಷ ಜಮೆ

    ಹಣ ನೋಡಿದ ವೃದ್ಧ ಏನ್ಮಾಡಿದರು ಗೊತ್ತಾ..?

ಪ್ರಾಮಾಣಿಕತೆ ಎಲ್ಲರಲ್ಲೂ ಇರಲ್ಲ. ಅದನ್ನು ರೂಢಿಸಿಕೊಳ್ಳುವುದು ಕೂಡ ಸುಲಭದ ವಿಚಾರವೂ ಅಲ್ಲ. ಮಹಾರಾಷ್ಟ್ರದ ಲತೂರ್​ನ 67 ವರ್ಷದ ವೃದ್ಧರೊಬ್ಬರು ಪ್ರಾಮಾಣಿಕತೆ ವಿಚಾರದಲ್ಲಿ ಸುದ್ದಿಯಾಗಿದ್ದಾರೆ.

ವಿಷಯ ಏನಪ್ಪ ಅಂದರೆ ಪಿಡಬ್ಲೂಡಿ ಅಧಿಕಾರಿಯಾಗಿದ್ದ ಇವರು, ನಿವೃತ್ತಿ ಪಡೆದು ಮನೆಯಲ್ಲಿದ್ದರು. ಪಿಂಚಣಿಯಲ್ಲಿ ಉಳಿತಾಯವಾಗುತ್ತಿದ್ದ ಹಣವನ್ನು ಇಡಲು ಪೋಸ್ಟ್ ಆಫೀಸ್​ನಲ್ಲಿ ಅಕೌಂಟ್ ಓಪನ್ ಮಾಡಿದ್ದರು. ಹೀಗೆ ಐದು ವರ್ಷಗಳ ಕಾಲ ಹಣ ಉಳಿತಾಯ ಮಾಡಿದ್ದ ಇವರು, ಮೊನ್ನೆಮೊನ್ನೆಯಷ್ಟೇ ದುಡ್ಡನ್ನು ಡ್ರಾ ಮಾಡಲು ಹೋಗಿದ್ದರು.

ಐದು ವರ್ಷಗಳ ಅವಧಿಯಲ್ಲಿ ಅವರು ಬರೋಬ್ಬರಿ 1,63,777 ರೂಪಾಯಿ ಹಣವನ್ನು ಉಳಿಸಿದ್ದರು. ಆದರೆ ಇವರ ಖಾತೆಗೆ 2,64,777 ಹಣ ಜಮಾ ಆಗಿತ್ತು. 1.01 ಲಕ್ಷ ಹೆಚ್ಚುವರಿಯಾಗಿ ಕ್ರೆಡಿಟ್ ಆಗಿರೋದು ಗೊತ್ತಾಗುತ್ತಿದ್ದಂತೆಯೇ, ಅವರು ಪಿಂಚಣಿ ಹಣ ಎಂದು ಇಟ್ಟುಕೊಳ್ಳಲಿಲ್ಲ. ಬದಲಾಗಿ ಪೋಸ್ಟಲ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಪ್ರಾಮಾಣಿಕವಾಗಿ ಹಿಂದಿರುಗಿಸಿದ್ದಾರೆ. ಅಂದ್ಹಾಗೆ ಅವರ ಹೆಸರು ಶ್ರೀಕಾಂತ್ ಜಗನ್ನಾಥ್​ ರಾವ್ ಜೊಶಿ ಎಂದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

67 ವರ್ಷದ ವೃದ್ಧನ ಪೋಸ್ಟ್ ಆಫೀಸ್​​ ಅಕೌಂಟ್​​ಗೆ 1,00,000 ಲಾಟರಿ; ಲಕ್ಷ ಹಣ ನೋಡ್ತಿದ್ದಂತೆ..

https://newsfirstlive.com/wp-content/uploads/2023/10/POST-OFFICE.jpg

Load More