/newsfirstlive-kannada/media/post_attachments/wp-content/uploads/2024/11/MAHARASHTEA-CM.jpg)
ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟ ದಾಖಲೆಯ ಜಯ ಗಳಿಸಿದ್ರೂ ಸರ್ಕಾರ ರಚನೆಗೆ ಮಾತ್ರ ಇನ್ನೂ ಹರಸಹಾಸ ಪಡುತ್ತಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಮಹಾಯುತಿ ಮೈತ್ರಿಕೂಟದ ಮೂರು ಪಕ್ಷಗಳು ಪಟ್ಟು ಹಿಡಿದಿದ್ದವು. ಹೀಗಾಗಿ ಮಹಾರಾಷ್ಟ್ರದ ಸಿಎಂ ಸ್ಥಾನ ಯಾರಾ ಪಾಲಾಗುತ್ತೆ ಎಂಬ ಮಿಲಿಯನ್​ ಡಾಲರ್​ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಮಹಾಯುತಿ ಮಿತ್ರಕೂಟದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದಿರುವ ಬಿಜೆಪಿಗೆ ಸಿಎಂ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಅಜಿತ್​ ಪವರ್​ ಮಹತ್ವದ ಸುಳಿವು ನಿಡಿದ್ದಾರೆ.
/newsfirstlive-kannada/media/post_attachments/wp-content/uploads/2023/07/Ajith-Pawar-Maharashtra.jpg)
ಬಿಜೆಪಿಗೆ ಸಿಎಂ ಸೀಟ್​, ಮಿತ್ರಕೂಟಕ್ಕೆ ಎರಡು ಡಿಸಿಎಂ ಸ್ಥಾನ
ಮಹಾರಾಷ್ಟ್ರ ಮುಂದಿನ ಸಿಎಂ ಬಿಜೆಪಿ ಪಕ್ಷದವರೇ ಆಗಿರಲಿದ್ದಾರೆ ಎಂದು ಹೇಳುವ ಮೂಲಕ ಎಲ್ಲಾ ಕುತೂಹಲಗಳಿಗೆ ಅಜಿತ್​ ಪವರ್​ ತೆರೆ ಎಳೆದಿದ್ದಾರೆ. ಇನ್ನು ಮೈತ್ರಿಕೂಟದ ಇಬ್ಬರು ನಾಯಕರಿಗೆ ಉಪ ಮುಖ್ಯಮಂತ್ರಿ ಸ್ಥಾನ ದೊರೆಯಲಿದೆ ಎಂದು ಹೇಳಿದ್ದು, ಅಧಿಕಾರ ಹಂಚಿಕೆ ಬಹುತೇಕ ಅಂತಿಮವಾಗಿದೆ ಎನ್ನುವ ಸೂಚನೆ ನೀಡಿದ್ದಾರೆ. ಆದ್ರೆ ಬಿಜೆಪಿಗೆ ಸಿಎಂ ಸ್ಥಾನ ಫಿಕ್ಸ್​ ಆದ್ರೂ, ದೇವೇಂದ್ರ ಫಡ್ನವೀಸ್​ ಸಿಎಂ ಆಗ್ತಾರಾ ಇಲ್ಲ. ಹೊಸಬರಿಗೆ ಮಣೆ ಹಾಕ್ತಾರಾ ಎಂಬ ಕುತೂಹಲ ಮೂಡಿದೆ. ಆದ್ರೆ ಮೂಲಗಳ ಪ್ರಕಾರ, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರಿಗೆ ಸಿಎಂ ಪಟ್ಟ ಒಲಿಯುವ ಸಾಧ್ಯತೆ ಇದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.
ಇದನ್ನೂ ಓದಿ:ಹೆಂಡತಿಗೆ ಚಿನ್ನ ಕೊಡಿಸಿದ ಗಂಡನಿಗೆ ಜಾಕ್‌ಪಾಟ್.. ಸಿಂಗಾಪುರದಲ್ಲಿ ರಾತ್ರೋರಾತ್ರಿ ಶ್ರೀಮಂತನಾದ ಭಾರತೀಯ!
ಡಿಸೆಂಬರ್ 5, ಸಂಜೆ 5ಗಂಟೆಗೆ ಮಹಾ ಸಿಎಂ ಪ್ರಮಾಣವಚನ
ಮಹಾರಾಷ್ಟ್ರದಲ್ಲಿ ಬಿಜೆಪಿ ಇನ್ನೂ ತನ್ನ ಚುನಾಯಿತ ಶಾಸಕರ ಸಭೆಯನ್ನು ಕರೆದಿಲ್ಲ ಅಥವಾ ಪಕ್ಷದ ಶಾಸಕಾಂಗ ಪಕ್ಷದ ನಾಯಕನ್ನು ಆಯ್ಕೆ ಮಾಡಿಲ್ಲ. ಆದ್ರೆ ಸರ್ಕಾರ ರಚನೆ ಕಸರತ್ತು ಬಹುತೇಕ ಅಂತಿಮಹಂತಕ್ಕೆ ಬಂದಿದೆ. ಇನ್ನೆರಡು ದಿನಗಳಲ್ಲಿ ಸಿಎಂ ಹೆಸರು ಘೋಷಣೆ ಮಾಡುವ ಸಾಧ್ಯತೆ ಇದೆ. ಆದರೆ ಈಗಾಗಲೇ ಡಿಸೆಂಬರ್ 5ರಂದು ಸಂಜೆ 5 ಗಂಟೆಗೆ ಹೊಸ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮುಂಬೈನ ಆಜಾದ್ ಮೈದಾನದಲ್ಲಿ ನಡೆಯಲಿದೆ ಎಂದು ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ ಬವಾಂಕುಲೆ ಮಾಹಿತಿ ನೀಡಿದ್ದಾರೆ.
/newsfirstlive-kannada/media/post_attachments/wp-content/uploads/2024/11/EKNATH-SHINDE.jpg)
ಏಕನಾಥ್ ಶಿಂಧೆಯವರ ಆರೋಗ್ಯದಲ್ಲಿ ದಿಢೀರ್ ಏರುಪೇರು
ಇನ್ನು ದೆಹಲಿಯಿಂದ ವಾಪಸ್ ಆದ ಬಳಿಕ ವಿಶ್ರಾಂತಿಗಾಗಿ ಸ್ವಗ್ರಾಮಕ್ಕೆ ತೆರಳಿದ್ದ ಅಂಗಾಮಿ ಸಿಎಂ ಏಕನಾಥ್ ಶಿಂಧೆಯವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಉಂಟಾಗಿದೆ. ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡ ಕಾರಣ, ಕೂಡಲೇ ಅವರನ್ನು ಸತಾರಾ ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ಎರಡು ಮೂರು ದಿನ ವಿಶ್ರಾಂತಿಗೆ ವೈದ್ಯರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ:ಬಾಂಗ್ಲಾ ಹಿಂದೂಗಳ ಮೇಲಿನ ದಾಳಿಗೆ RSS ಖಂಡನೆ.. ಪ್ರಧಾನಿ ಮೋದಿ ಸರ್ಕಾರಕ್ಕೆ ಆಗ್ರಹ; ಹೇಳಿದ್ದೇನು?
ಒಂದೆಡೆ ಬಿಜೆಪಿ ಮತ್ತು ಎನ್​ಸಿಪಿ ಅಜಿತ್​ ಪವರ್​ ಬಣ ಸರ್ಕಾರ ರಚನೆಯ ಸಿದ್ಧತೆಯಲ್ಲಿ ಬ್ಯುಸಿಯಾಗಿದ್ರೆ. ಇತ್ತ ಹಂಗಾಮಿ ಸಿಎಂ ಆರೋಗ್ಯದಲ್ಲಿ ಏರುಪೇರಾಗಿದ್ದು, ಮಹಾಯುತಿ ಕೂಟದಲ್ಲಿ ಆತಂಕ ಮೂಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us