ಇಬ್ಬರು ವೃದ್ಧರನ್ನು ಕೊಡಲಿಯಿಂದ ಕಡಿದು ಕೊಲೆ.. ಭೂಪನ ಅರೆಸ್ಟ್​ ಮಾಡಲು ಫೀಲ್ಡಿಗೆ ಇಳಿದಿದ್ದ ಪೊಲೀಸರ ಸಂಖ್ಯೆ 150..!

author-image
Bheemappa
Updated On
ಇಬ್ಬರು ವೃದ್ಧರನ್ನು ಕೊಡಲಿಯಿಂದ ಕಡಿದು ಕೊಲೆ.. ಭೂಪನ ಅರೆಸ್ಟ್​ ಮಾಡಲು ಫೀಲ್ಡಿಗೆ ಇಳಿದಿದ್ದ ಪೊಲೀಸರ ಸಂಖ್ಯೆ 150..!
Advertisment
  • ಕಳೆದ 2 ದಿನದಿಂದ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ
  • ಏಕಾಏಕಿ ವೃದ್ಧನ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದ ಯುವಕ
  • ಸಹೋದರನನ್ನು ಹುಡುಕಲು ಹೋದವನ ಮೇಲೂ ಹಲ್ಲೆ ಮಾಡಿ ಹತ್ಯೆ

ಮುಂಬೈ: ಮಾನಸಿಕ ಅಸ್ವಸ್ಥನೊಬ್ಬ ಕೊಡಲಿಯಿಂದ ಇಬ್ಬರು ವೃದ್ಧರನ್ನು ಕಡಿದು ಕೊಲೆ ಮಾಡಿರುವ ಕೃತ್ಯ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಕೂಡನ್ ಗ್ರಾಮದಲ್ಲಿ ನಡೆದಿದೆ.

ಕಳೆದ ಎರಡು ದಿನಗಳಿಂದ ಕೂಡನ್ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಯುವಕನೊಬ್ಬ ಓಡಾಡುತ್ತಿದ್ದನು. ಆದರೆ ಏಕಾಏಕಿ ವಯೋವೃದ್ಧನ ಮೇಲೆ ಎರಗಿದ ಆರೋಪಿಯು ಕೊಡಲಿಯಿಂದ ಹಲ್ಲೆ ನಡೆಸಿ, ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮೃತದೇಹದ ಮುಂದೆ ಕುಳಿತುಕೊಂಡಿದ್ದಾನೆ. ಇದೇ ವೇಳೆ ಮೃತನ ಸಹೋದರ ಆತನನ್ನು ಹುಡುಕುತ್ತಾ ಅದೇ ಸ್ಥಳಕ್ಕೆ ಬಂದಿದ್ದಾನೆ. ಆಗ ಅನುಮಾನಗೊಂಡ ಆರೋಪಿಯು ಮೃತನ ಅಹೋದರನ ಮೇಲೆರಗಿ ಕೊಡಲಿಯಿಂದ ಹೇಗೆಂದರೆ ಹಾಗೇ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಇದನ್ನು ನೋಡಿದ ಗ್ರಾಮಸ್ಥರು ಕೂಗಲು ಪ್ರಾರಂಭಿಸುತ್ತಿದ್ದಂತೆ ಸ್ಥಳದಲ್ಲೇ ಹಂತಕನು ಓಡಿ ಹೋಗಿ ಅವಿತುಕೊಂಡಿದ್ದಾನೆ ಎಂದು ಹೇಳಲಾಗಿದೆ.

ಓಡಿ ಹೋದ ಆರೋಪಿಯು ಕರೆವೊಂದರ ಜವುಗು ಪ್ರದೇಶದಲ್ಲಿ ಅವಿತುಕೊಂಡಿದ್ದ. ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದು ಘಟನಾ ಸ್ಥಳಕ್ಕೆ 150ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ದೌಡಾಯಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಬಚ್ಚಿಟ್ಟುಕೊಂಡಿದ್ದ ಆರೋಪಿಯನ್ನು ಪೊಲೀಸರು ಸೆರೆ ಹಿಡಿದು ಎಳೆದು ತಂದಿದ್ದಾರೆ. ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಬಳಿಕ ಆತ ನಿಜವಾಗಿಯೂ ಮಾನಸಿಕ ಅಸ್ವಸ್ಥನೋ, ಅಲ್ಲವೋ ಅನ್ನೋದನ್ನು ನಿಖರವಾಗಿ ತಿಳಿದು ಬರಲಿದೆ ಎಂದು ಪೊಲೀಸರು ಹೇಳಿದ್ದಾರೆ. ಕೊಲೆಗೆ ನಿಖರವಾಗಿ ತಿಳಿದು ಬಂದಿಲ್ಲ, ಕೊಲೆ ಮಾಡಿದ ಆರೋಪಿ ಯಾರೆಂಬುದು ತನಿಖೆಯಿಂದ ಗೊತ್ತಾಗಲಿದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment