newsfirstkannada.com

WATCH: ಟಾಪ್ ಕಿತ್ತು ಹೋದರೂ ನಿಲ್ಲದ ಸರ್ಕಾರಿ ಬಸ್‌.. ಡಕೋಟಾ ಎಕ್ಸ್‌ಪ್ರೆಸ್‌ಗೆ ಡಿಸೈನ್, ಡಿಸೈನ್ ಹೆಸರಿಟ್ಟ ನೆಟ್ಟಿಗರು!

Share :

27-07-2023

    ಈ ಬಗ್ಗೆ ಸಾರಿಗೆ ಇಲಾಖೆಗೆ ಮಾಹಿತಿ ಇದೆಯಾ..?

    ರಸ್ತೆಗಳಲ್ಲಿ ಸಖತ್ ಸ್ಪೀಡ್ ಆಗಿ ಚಾಲನೆಯಲ್ಲಿರುತ್ತೆ

    ಬಸ್​ ಟಾಪ್ ಕಿತ್ತು ಹೋದ್ರು ಕೇಳುವವರು ಯಾರಿಲ್ಲ

ಮುಂಬೈ: ಸರ್ಕಾರಿ ಬಸ್ಸಿನ ಟಾಪ್ ಕಿತ್ತು ಹೋದರು ಅದನ್ನು ಹಾಗೇ ರಸ್ತೆಗಳಲ್ಲಿ ಚಾಲನೆ ಮಾಡುತ್ತಿರುವ ವಿಡಿಯೋ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಇದು ಮಹಾರಾಷ್ಟ್ರದ ರಸ್ತೆ ಸಾರಿಗೆ ನಿಗಮದ ಬಸ್ ಎಂದು ಹೇಳಲಾಗುತ್ತಿದೆ.

ಮಹಾರಾಷ್ಟ್ರದ ರಸ್ತೆ ಸಾರಿಗೆ ನಿಗಮದ ಬಸ್‌ನ ಮೇಲ್ಛಾವಣಿ ಕಿತ್ತು ಹೋದರು ಪ್ರಮುಖ ರಸ್ತೆಗಳಲ್ಲಿ ಪ್ರಯಾಣಿಕರನ್ನು ಕೂರಿಸಿಕೊಂಡು ಸಾರಿಗೆ ಬಸ್ ಮೂಲಕ ಹಾಗೇ ಸಂಚಾರ ಮಾಡಲಾಗುತ್ತಿದೆ. ಈ ರೀತಿ ವೇಗದ ಸಂಚಾರದಿಂದ ಅನಾಹುತ ಸಂಭವಿಸಿದರೆ ಸಾರಿಗೆ ಇಲಾಖೆ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ. ಮುಂದಿನ ವಾಹನದಲ್ಲಿ ಹೋಗುತ್ತಿದ್ದವರು ಈ ವಿಡಿಯೋವನ್ನು ಮಾಡಿ ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಟಾಪ್ ಕಿತ್ತು ಹೋದ ಬಸ್‌ನ ಈ ವಿಡಿಯೋಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು ಚಾಲನೆ ಮಾಡುತ್ತಿದೆ. ಅಲ್ಲದೇ ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಈಗಾಗಲೇ ಉಡಾವಣೆ ಮಾಡಲಾಗಿದೆ. ಆದರೂ ಇಂತಹ ಪರಿಸ್ಥಿತಿ ಬಂದಿರುವುದು ಅವಮಾನಕರ ಎನ್ನುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ಟಾಪ್ ಕಿತ್ತು ಹೋದರೂ ನಿಲ್ಲದ ಸರ್ಕಾರಿ ಬಸ್‌.. ಡಕೋಟಾ ಎಕ್ಸ್‌ಪ್ರೆಸ್‌ಗೆ ಡಿಸೈನ್, ಡಿಸೈನ್ ಹೆಸರಿಟ್ಟ ನೆಟ್ಟಿಗರು!

https://newsfirstlive.com/wp-content/uploads/2023/07/MH_BUS_TOP.jpg

Load More