newsfirstkannada.com

42ನೇ ವಸಂತಕ್ಕೆ ಕಾಲಿಟ್ಟ ಧೋನಿ.. MSD ಬರ್ತ್​ಡೇಗೆ 77 ಅಡಿಯ ಕಟೌಟ್ ನಿರ್ಮಾಣ

Share :

07-07-2023

    ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ ಮಹೇಂದ್ರ ಸಿಂಗ್​ ಧೋನಿ

    ಮಾಹಿಗಾಗಿ 77 ಅಡಿಯ ಕಟೌಟ್ ಸ್ಥಾಪಿಸಿರುವ ಅಭಿಮಾನಿಗಳು

    42ನೇ ವಸಂತಕ್ಕೆ ಕಾಲಿಟ್ಟ ಮಾಜಿ​​ ಕ್ಯಾಪ್ಟನ್​​ ಮಹೇಂದ್ರ ಸಿಂಗ್​ ಧೋನಿ

ಇಂದು ಟೀಮ್ ಇಂಡಿಯಾ ಮಾಜಿ ನಾಯಕ ಧೋನಿ ಬರ್ತ್​​ಡೇ. ಮಾಹಿ 42ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ವಿಶ್ವ ಕಂಡ ಅತ್ಯದ್ಭುತ ನಾಯಕನ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಫ್ಯಾನ್ಸ್ ತೊಡಗಿದ್ದಾರೆ.

ಭಾರತ ಮಾತ್ರವಲ್ಲ, ವಿದೇಶಿ ಕ್ರಿಕೆಟ್​ ಪ್ರೇಮಿಗಳಿಗೂ ಧೋನಿ ಅಂದ್ರೆ ಅಚ್ಚುಮೆಚ್ಚು. ಅವರ ಸಿಂಪಲ್​ಸಿಟಿಗೆ ಫಿದಾ ಆಗದವರು ಯಾರು ಇಲ್ಲ. ಅದರಲ್ಲೂ ಚೆನ್ನೈ , ಆಂಧ್ರದಲ್ಲಿ ಧೋನಿಗೆ ಹೆಚ್ಚಿನ ಅಭಿಮಾನಗಳು ಇದ್ದಾರೆ. ಅದರಂತೆಯೇ ಇಂದು ಮಾಹಿ ಹುಟ್ಟುಹಬ್ಬದ ಪ್ರಯುಕ್ತ ತೆಲುಗು ರಾಜ್ಯಗಳ ಫ್ಯಾನ್ಸ್ ಧೋನಿ ಮೇಲಿನ ಅಭಿಮಾನವನ್ನ ಭಾರೀ ಗಾತ್ರದ ಕಟೌಟ್ ಮೂಲಕ ವ್ಯಕ್ತಪಡಿಸಿದ್ದಾರೆ.

77 ಅಡಿಯ ಕಟೌಟ್

ಹೌದು. ಆಂಧ್ರಪ್ರದೇಶದ ನಂದಿಗಾಮದಲ್ಲಿ 77 ಅಡಿಯ ಕಟೌಟ್ ಸ್ಥಾಪಿಸಿರುವ ಅಭಿಮಾನಿಗಳು, ಹೈದರಾಬಾದ್ ಆರ್‌‌ಟಿಸಿ ಎಕ್ಸ್ ರೋಡ್ ಬಳಿ 52 ಅಡಿ ಬೃಹತ್ ಕಟೌಟ್ ಸ್ಥಾಪಿಸಿದ್ದಾರೆ. ಸದ್ಯ ಈ ಕಟೌಟ್​​ ಜಳಪಿಸುತ್ತಿದ್ದು, ಮಾಹಿ ಮೇಲಿನ ಪ್ರೀತಿಯನ್ನು ಹೆಚ್ಚುವಂತೆ ಮಾಡಿದೆ.

ಇನ್ನು ಮಹೇಂದ್ರ ಸಿಂಗ್​ ಧೋನಿ ಬರ್ತ್​​ಡೇಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಳೆಯೇ ಸುರಿಯುತ್ತಿದೆ. ಅನೇಕರು ಮಾಹಿ ಫೋಟೋ ಹಂಚಿಕೊಳ್ಳುತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

42ನೇ ವಸಂತಕ್ಕೆ ಕಾಲಿಟ್ಟ ಧೋನಿ.. MSD ಬರ್ತ್​ಡೇಗೆ 77 ಅಡಿಯ ಕಟೌಟ್ ನಿರ್ಮಾಣ

https://newsfirstlive.com/wp-content/uploads/2023/07/Dhoni-1.jpg

Load More