newsfirstkannada.com

ನಟ ಮಹೇಶ್​ ಬಾಬು ಮಗಳ ಕಾರ್ಯಕ್ಕೆ ಭೇಷ್​​ ಎಂದ ಫ್ಯಾನ್ಸ್​​; ಇಲ್ಲಿದೆ ಟಾಪ್​ ಸಿನಿಮಾ ಸುದ್ದಿಗಳು!

Share :

20-07-2023

  ಅಭಿಮಾನಿಯೊಬ್ಬರ ವರ್ತನೆಗೆ ಗಾಬರಿಯಾದ ನಟ ವಿಜಯ್ ದೇವರಕೊಂಡ!

  ಸಿನಿಮಾದಿಂದ ಬ್ರೇಕ್ ತೆಗೆದುಕೊಂಡ ನಟಿ ಸದ್ಗುರು ಇಶಾ ಫೌಂಡೇಶನ್​​ನಲ್ಲಿ ಪ್ರತ್ಯಕ್ಷ

  ಅಮೆರಿಕಾದಲ್ಲಿ ಪ್ರಭಾಸ್​ ನಟನೆಯ 'ಪ್ರಾಜೆಕ್ಟ್​ಕೆ' ಫಸ್ಟ್​ ಟೀಸರ್, ಟೈಟಲ್ ಲಾಂಚ್

ರಂಗೇರಿದ ‘ಪ್ರಾಜೆಕ್ಟ್​ಕೆ’ ಸಂಭ್ರಮ

ಪ್ರಭಾಸ್​ ನಟನೆಯ ‘ಪ್ರಾಜೆಕ್ಟ್​ಕೆ’ ಚಿತ್ರದ ಫಸ್ಟ್​ ಟೀಸರ್ ಮತ್ತು ಟೈಟಲ್ ಲಾಂಚ್ ಕಾರ್ಯಕ್ರಮ ಇಂದು ಅಮೆರಿಕಾದಲ್ಲಿ ನಡೆಯುತ್ತಿದೆ. ಈ ಹಿನ್ನೆಲೆ ಬಹಳ ಅದ್ಧೂರಿಯಾಗಿ ಇವೆಂಟ್ ಆಯೋಜಿಸಿದ್ದು ಪ್ರಭಾಸ್, ರಾಣಾ ದಗ್ಗುಬಾಟಿ, ಕಮಲ್ ಹಾಸನ್ ಈಗಾಗಲೇ ಅಮೆರಿಕಾ ತೆರಳಿದ್ದಾರೆ. ಇದೀಗ ‘ಪ್ರಾಜೆಕ್ಟ್​ಕೆ’ ಚಿತ್ರಕ್ಕೆ ಯುಎಸ್​ ಅಭಿಮಾನಿಗಳು ಸಾಥ್ ಕೊಟ್ಟಿದ್ದು, ಕಾರ್​ ಱಲಿ ಮಾಡಿದ್ದಾರೆ. ಈ ವಿಡಿಯೋಗಳು ಈಗ ವೈರಲ್ ಆಗಿದೆ.

‘ಸಿತಾರ’ ಕೆಲಸಕ್ಕೆ ಭೇಷ್ ಎನ್ನಬೇಕು

ಮಹೇಶ್ ಬಾಬು ಮಗಳು ಸಿತಾರಾ ತಮ್ಮ ಚೊಚ್ಚಲ ಸಂಭಾವನೆಯನ್ನ ಚಾರಿಟಿಗೆ ಕೊಟ್ಟು ಗಮನ ಸೆಳೆದಿದ್ದರು. ಇದೀಗ ಬಡ ಮಕ್ಕಳಿಗೆ ಸೈಕಲ್ ಉಡುಗೊರೆ ನೀಡುವುದರ ಮೂಲಕ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದಾರೆ. ಬಡಮಕ್ಕಳ ಜೊತೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ ಸಿತಾರಾ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಈ ವೇಳೆ ಕೆಲವು ಮಕ್ಕಳಿಗೆ ಸೈಕಲ್ ಉಡುಗೊರೆ ನೀಡಿ ನೆರವಾದರು. ಸಿತಾರಾ ಅವರ ಈ ಕಾರ್ಯಕ್ಕೆ ಸಿನಿ ಇಂಡಸ್ಟ್ರಿ ಭೇಷ್ ಎಂದಿದೆ.

ಗಾಬರಿಯಾದ ವಿಜಯ್ ದೇವರಕೊಂಡ

ಅಭಿಮಾನಿಯೊಬ್ಬರ ವರ್ತನೆಗೆ ವಿಜಯ್ ದೇವರಕೊಂಡ ಗಾಬರಿಯಾದ ಘಟನೆ ನಡೆದಿದೆ. ಆನಂದ್ ದೇವರಕೊಂಡ ನಟಿಸಿರುವ ‘ಬೇಬಿ’ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ವಿಜಯ್ ದೇವರಕೊಂಡ ವೇದಿಕೆ ಮೇಲೆ ಮಾತಾಡುವಾಗ ಅಭಿಮಾನಿಯೊಬ್ಬ ನುಗ್ಗಿ ಬರ್ತಾನೆ. ಇದನ್ನ ನೋಡಿದ ದೇವರಕೊಂಡ ಗಾಬರಿಯಾಗಿ ಹಿಂದೆ ಹಿಂದೆ ಓಡಿ ಹೋಗ್ತಾರೆ. ಆಮೇಲೆ ಅಭಿಮಾನಿಯನ್ನ ಕರೆದು ಮಾತಾಡಿಸು ಕಳುಹಿಸಲಾಯಿತು.

ರಿಲ್ಯಾಕ್ಸ್​ ಮೂಡ್​ನಲ್ಲಿ ಸಮಂತಾ

ಸಿನಿಮಾದಿಂದ ಸದ್ಯ ಬ್ರೇಕ್ ತೆಗೆದುಕೊಂಡಿರುವ ನಟಿ ಸಮಂತಾ ಸದ್ಗುರು ಇಶಾ ಫೌಂಡೇಶನ್‌ಗೆ ಭೇಟಿ ನೀಡಿದ್ದಾರೆ. ಇತ್ತೀಚೆಗಷ್ಟೇ ಸಿಟಾಡೆಲ್ ಹಾಗೂ ಖುಷಿ ಸಿನಿಮಾಗಳ ಶೂಟಿಂಗ್ ಕಂಪ್ಲೀಟ್ ಮಾಡಿರುವ ಸಮಂತಾ ತಮಿಳುನಾಡಿಗೆ ಬೈ ರೋಡ್​ ಟ್ರಿಪ್ ಹೋಗಿದ್ದರು. ಸದ್ಯ ಇಶಾ ಫೌಂಡೇಶನ್​ನಲ್ಲಿ ಕಾಲಕಳೆಯುತ್ತಿದ್ದು, ಧ್ಯಾನ, ಮಂತ್ರದ ಮೊರೆ ಹೋಗಿದ್ದಾರೆ. ಈ ಫೋಟೋಗಳನ್ನ ಸ್ವತಃ ಸಮಂತಾ ಅವರೇ ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ನಟ ಮಹೇಶ್​ ಬಾಬು ಮಗಳ ಕಾರ್ಯಕ್ಕೆ ಭೇಷ್​​ ಎಂದ ಫ್ಯಾನ್ಸ್​​; ಇಲ್ಲಿದೆ ಟಾಪ್​ ಸಿನಿಮಾ ಸುದ್ದಿಗಳು!

https://newsfirstlive.com/wp-content/uploads/2023/07/vijay-2-1.jpg

Load More