newsfirstkannada.com

ಶಿಷ್ಯ ಹಾರ್ದಿಕ್​ ಪಾಂಡ್ಯ ಎದುರು ನಡೆದಿಲ್ಲ ಮಾಹಿ ಮಾಯೆ! ಇಂದು ಚೆಪಾಕ್​ನಲ್ಲಿ ಧೋನಿಗೆ ಪಕ್ಕಾ ಅಗ್ನಿ ಪರೀಕ್ಷೆ

Share :

23-05-2023

  ಚೆಪಾಕ್​ ಅಂಗಳದಲ್ಲಿಂದು ಗುರು-ಶಿಷ್ಯರ ಸಮರ.!

  ನಾಯಕತ್ವಕ್ಕೆ ಧೋನಿಯೇ ಮಾಸ್ಟರ್​​.!

  ಸೈಲೆಂಟಾಗೇ ಸ್ಕೆಚ್​ ಹಾಕ್ತಾರೆ ಹಾರ್ದಿಕ್​.!

ಐಪಿಎಲ್​ ಸೀಸನ್​ 16ರ ನಿರ್ಣಾಯಕ ಫೈಟ್​​ಗಳಿಗೆ ಕೌಂಟ್​​ಡೌನ್​ ಸ್ಟಾರ್ಟ್​ ಆಗಿದೆ. ಕೆಲವೇ ಗಂಟೆಗಳಲ್ಲಿ ಗುರು-ಶಿಷ್ಯರು, ಆಪ್ತ ಗೆಳೆಯರು ಎಂದೆಲ್ಲಾ ಅನಿಕೊಂಡವರು ಎದುರುಬದುರಾಗಿ ಕಾದಾಡಲಿದ್ದಾರೆ. ಚಾಣಾಕ್ಷ ಧೋನಿ VS ಯಂಗ್​ & ಎನರ್ಜಿಟಿಕ್​​ ಹಾರ್ದಿಕ್​ ನಡುವಿನ ಹಣಾಹಣಿಯನ್ನ ನೋಡಲು ಫ್ಯಾನ್ಸ್​ ಕಾದು ಕುಳಿತಿದ್ದಾರೆ.

ಐಪಿಎಲ್​ ಸೀಸನ್​ 16ರ ಲೀಗ್​ ಫೈಟ್​ಗಳು ಅಂತ್ಯಕಂಡಿವೆ. 6 ತಂಡಗಳು ಹೊರ ಬಿದ್ದಿದ್ದು, 4 ತಂಡಗಳು ಟ್ರೋಫಿ ಗೆಲ್ಲೋ ರೇಸ್​​ಗೆ ಬಿದ್ದಿದೆ. ಈ 4 ತಂಡಗಳ ಹಣೆಬರಹ ಉಳಿದ 4 ಪಂದ್ಯಗಳಲ್ಲಿ ನಿರ್ಧಾರವಾಗಲಿದೆ. ಹೀಗಾಗಿ ಇವತ್ತಿನ ಮಹತ್ವದ ಕ್ವಾಲಿಫೈಯರ್​ 1 ಫೈಟ್​​ನತ್ತ ಸದ್ಯ ಎಲ್ಲರ ಚಿತ್ತ ನೆಟ್ಟಿದೆ.

ಚೆಪಾಕ್ಅಂಗಳದಲ್ಲಿಂದು ಗುರುಶಿಷ್ಯರ ಸಮರ.!

ಚೆನ್ನೈನ ಚೆಪಾಕ್​ ಮೈದಾನ ಮಹತ್ವದ ಪಂದ್ಯಕ್ಕೆ ಸಜ್ಜಾಗಿದೆ. ಇಂದು ನಡೆಯಲಿರೋ ಸೀಸನ್​ 16ರ ಮೊದಲ ಕ್ವಾಲಿಫೈಯರ್ ಫೈಟ್​ನಲ್ಲಿ ಚೆನ್ನೈ  ಸೂಪರ್​ ಕಿಂಗ್ಸ್​ – ಗುಜರಾತ್​ ಟೈಟನ್ಸ್​ ಮುಖಾಮುಖಿಯಾಗ್ತಿವೆ. ಮೊದಲ ತಂಡವಾಗಿ ಫೈನಲ್​ ಪ್ರವೇಶಕ್ಕೆ ಹಾಲಿ ಚಾಂಪಿಯನ್​ ಗುಜರಾತ್​ ಹಾಗೂ ಮಾಜಿ ಚಾಂಪಿಯನ್​ ಚೆನ್ನೈ ಪಣ ತೊಟ್ಟಿವೆ. ಗುರು ಎಮ್​.ಎಸ್​ ಧೋನಿ – ಶಿಷ್ಯ ಹಾರ್ದಿಕ್​​ ಪಾಂಡ್ಯ ಮುಖಾಮುಖಿ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ.

ನಾಯಕತ್ವಕ್ಕೆ ಧೋನಿಯೇ ಮಾಸ್ಟರ್​​.!

ನಾಯಕತ್ವ ವಿಚಾರಕ್ಕೆ ಬಂದ್ರೆ ಧೋನಿ ಮಾಸ್ಟರ್​​. ಇದ್ರಲ್ಲಿ ನೋ ಡೌಟ್​.ಈ ಸೀಸನ್​ನಲ್ಲಿ ತಂಡವನ್ನ ಮುನ್ನಡೆಸಿದ ರೀತಿಗೆ ಎಂತವರೂ ಕೂಡ ಮಾಹಿಗೆ ಸಲಾಂ ಅನ್ನಲೇಬೇಕು. ಐಪಿಎಲ್​ ಇತಿಹಾಸದಲ್ಲಿ ಆಡಿರೋ 14 ಸೀಸನ್​ಗಳಲ್ಲಿ 12 ಬಾರಿ ಪ್ಲೇ ಆಫ್​ ಪ್ರವೇಶ. ಇದ್ರಲ್ಲಿ 9 ಬಾರಿ ಫೈನಲ್​ ಪ್ರವೇಶಿಸಿ, 4 ಬಾರಿ ಚಾಂಪಿಯನ್​ ಆಗಿರೋದೆ ಧೋನಿಯ ನಾಯಕತ್ವದ ಖದರ್​ ಏನು ಅನ್ನೊದನ್ನ ತೋರಿಸಿದೆ.

ಸೈಲೆಂಟಾಗೇ ಸ್ಕೆಚ್​ ಹಾಕ್ತಾರೆ ಹಾರ್ದಿಕ್​.!

ಧೋನಿ ಕ್ಯಾಪ್ಟನ್ಸಿ ಮಾಸ್ಟರ್​​ ಮೈಂಡ್​​ ಅನ್ನೋದ್ರಲ್ಲಿ ನೋ ಡೌಟ್​..! ಹಾಗಂತ, ಹಾರ್ದಿಕ್​ ಪಾಂಡ್ಯ ನಾಯಕತ್ವವನ್ನೂ ಸೈಡ್​ಲೈನ್​ ಮಾಡುವಂತೇ ಇಲ್ಲ. ಸೈಲೆಂಟ್​ ಆಗೇ ಸ್ಕೆಚ್​​ ಹಾಕಿ ಎದುರಾಳಿಗಳನ್ನ ಮಣಿಸೋ ತಾಕತ್ತು ಹಾರ್ದಿಕ್​ಗಿದೆ. ಚೊಚ್ಚಲ ಸೀಸನ್​ನಲ್ಲೇ ತಂಡವನ್ನ ಚಾಂಪಿಯನ್​ ಪಟ್ಟಕ್ಕೇರಿಸಿದ್ದು, ಈ ಸೀಸನ್​ನಲ್ಲಿ ಮೊದಲ ತಂಡವಾಗಿ ಪ್ಲೇ ಆಫ್​​ಗೆ ಕ್ವಾಲಿಫೈ ಆಗಿರೋದೆ ಇದಕ್ಕೆ ಬೆಸ್ಟ್​ ಎಕ್ಸಾಂಪಲ್​.!

ಶಿಷ್ಯನ ಎದುರು ನಡೆಯದ ಮಾಹಿ ಮಾಯೆ.!

ಹೌದು. ಮಾಸ್ಟರ್​​ ಮೈಂಡ್​​ ಮಾಹಿ ಎಂತೆಂಥಾ ದಿಗ್ಗಜ ನಾಯಕರುಗಳಿಗೆ ಚಳ್ಳೆಹಣ್ಣು ತಿನ್ನಿಸಿದ್ದಾರೆ. ಎದುರಾಳಿಗಳ ಗೇಮ್​​ಪ್ಲಾನ್​, ಸ್ಟ್ರಾರ್ಟಜಿಗಳನ್ನ ತಲೆಕೆಳಗು ಮಾಡಿ ಕಕ್ಕಾಬಿಕ್ಕಿಯಾಗುವಂತೆ ಮಾಡಿದ್ದಾರೆ. ಆದ್ರೆ, ಹಾರ್ದಿಕ್​ ಪಾಂಡ್ಯ ಮುಂದೆ ಮಾತ್ರ ಮಂಕಾಗಿದ್ದಾರೆ. ಕಳೆದ ಸೀಸನ್​ನಲ್ಲಿ 2 ಬಾರಿ ಸಿಎಸ್​​ಕೆ – ಗುಜರಾತ್​​ ಮುಖಾಮುಖಿಯಾಗಿದ್ವು. ಆ 2 ಪಂದ್ಯದಲ್ಲೂ ಸಿಎಸ್​ಕೆ ಸೋಲುಂಡಿದೆ. ಈ ಸೀಸನ್​ನ ಮೊದಲ ಮುಖಾಮುಖಿಯಲ್ಲೂ ಚೆನ್ನೈಗೆ ಗುಜರಾತ್​ ಸೋಲಿನ ರುಚಿ ತೋರಿಸಿದೆ.

ಚೆಪಾಕ್​ನಲ್ಲಿ ಧೋನಿಗೆ ಅಗ್ನಿ ಪರೀಕ್ಷೆ.!

ಚೆನ್ನೈ ಸೂಪರ್​​ ಕಿಂಗ್ಸ್​ ಪಾಲಿಗೆ ಇದು ಕೊನೆಯ ಹೋಮ್​ ಮ್ಯಾಚ್​​. ಇವತ್ತು ಚೆಪಾಕ್​ನಲ್ಲಿ ನೆರೆಯೋ ಬಹುತೇಕ ಅಭಿಮಾನಿಗಳ ಬಯಕೆ ನೆಚ್ಚಿನ ತಲಾ ಸಾರಥ್ಯದ ಚೆನ್ನೈ ಗೆಲ್ಲಲಿ ಅನ್ನೋದೆ ಆಗಿರುತ್ತೆ. ಅದರಲ್ಲೂ ಈ ಸೀಸನ್​ನ ಮೊದಲ ಪಂದ್ಯದಲ್ಲೇ ಗುಜರಾತ್​​ ಹೋಮ್​ಗ್ರೌಂಡ್​ನಲ್ಲಾದ ಸೋಲಿನ ಅವಮಾನಕ್ಕೆ ನಮ್ಮ ತವರಿನಲ್ಲಿ ತಿರುಗೇಟು ಕೊಡಲಿ ಅನ್ನೋ ಆಸೆಯೂ ಇದ್ದೇ ಇರುತ್ತೆ. ಅಭಿಮಾನಿಗಳ ಈ ಆಸೆಯನ್ನ ಈಡೆರಿಸಬೇಕಾದ ಸವಾಲು ಧೋನಿ ಮುಂದಿದೆ.

ಪಕ್ಕಾ ವಾರ್​, ಫ್ರೆಂಡ್​​ಶಿಪ್​, ಫನ್​ಗೂ ಕೊರತೆಯಿಲ್ಲ.!

ಸಿಎಸ್​ಕೆ -ಗುಜರಾತ್​ ಮೊದಲ ಕ್ವಾಲಿಫೈಯರ್​​ನಲ್ಲಿ ಸೆಣೆಸುತ್ತವೆ ಅಂದ ಬೆನ್ನಲ್ಲೆ ವೈರಲ್​ ಆಗಿರೋ ವಿಡಿಯೋಯಿದು. ಈ ವಿಡಿಯೋ ಹಳೆಯದಾದ್ರೂ, ಈ ಫ್ರೆಂಡ್​ಶಿಪ್​ ಮಾತ್ರ ಹಾಗೇ ಇದೆ. ಹಾರ್ದಿಕ್​ ಮನದಲ್ಲಿ ಧೋನಿಗೆ ವಿಶೇಷ ಸ್ಥಾನವಿದೆ. ಅತ್ಯಂತ ಹೆಚ್ಚು ಗೌರವವಿದೆ. ಇದನ್ನ ಬಹಳ ಸಲ ಬಹಿರಂಗವಾಗೇ ಪಾಂಡ್ಯ ಹೇಳಿದ್ದಾರೆ. ಧೋನಿ ಕೂಡ ಹಾರ್ದಿಕ್​ರನ್ನ ವಿಶೇಷವಾಗಿ ಟ್ರೀಟ್​ ಮಾಡ್ತಾರೆ. ಪರಸ್ಪರ ಗೌರವ, ಪ್ರೀತಿ ಎಲ್ಲವನ್ನೂ ಹೊಂದಿರುವ ಇವರಿಬ್ಬರು ಎದುರಾಗ್ತಿರೋ ಪಂದ್ಯದ ಮೇಲಿನ ಕುತೂಹಲವನ್ನ ಡಬಲ್​ ಮಾಡಿದೆ.

ಈ ಸೀಸನ್​ನಲ್ಲಿ ಗುಜರಾತ್​ – ಚೆನ್ನೈ ಮುಖಾಮುಖಿಯಾದ ಮೊದಲ ಪಂದ್ಯವನ್ನ ಆನ್​ಲೈನ್​ ಫ್ಲಾಟ್​ಫಾರ್ಮ್​ನಲ್ಲಿ  ಬರೋಬ್ಬರಿ 2.2 ಕೋಟಿ ಜನ ವೀಕ್ಷಿಸಿದ್ರು. ಧೋನಿ ಹಾಗೂ ಹಾರ್ದಿಕ್​ ಮುಖಾಮುಖಿಯನ್ನ ನೋಡಲು ಫ್ಯಾನ್ಸ್​ ಎಷ್ಟು ಕುತೂಹಲದಿಂದ ಕಾಯ್ತಿದ್ದಾರೆ ಅನ್ನೋದಕ್ಕೆ ಇದೇ ಬೆಸ್ಟ್​ ಎಕ್ಸಾಂಪಲ್​.! ಲೀಗ್​ ಹಂತದ ಪಂದ್ಯಕ್ಕೆ ಅಷ್ಟು ಕ್ರೇಜ್​ ಇತ್ತು. ಈಗ ಕ್ವಾಲಿಫೈಯರ್​ ಪಂದ್ಯ. ಹೀಗಾಗಿ ಅಭಿಮಾನಿಗಳ ಕುತೂಹಲ ಇನ್ನಷ್ಟು ಹೆಚ್ಚಾಗಿರೋದ್ರಲ್ಲಿ ಅನುಮಾನವೇ ಇಲ್ಲ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಿಷ್ಯ ಹಾರ್ದಿಕ್​ ಪಾಂಡ್ಯ ಎದುರು ನಡೆದಿಲ್ಲ ಮಾಹಿ ಮಾಯೆ! ಇಂದು ಚೆಪಾಕ್​ನಲ್ಲಿ ಧೋನಿಗೆ ಪಕ್ಕಾ ಅಗ್ನಿ ಪರೀಕ್ಷೆ

https://newsfirstlive.com/wp-content/uploads/2023/05/GT-vs-CSK.jpg

Load More