newsfirstkannada.com

ಬೈಕ್​ ಮತ್ತು ಥಾರ್​ ವಾಹನ ಡಿಕ್ಕಿ; ಇಬ್ಬರು ಪೇದೆಗಳು ಸ್ಥಳದಲ್ಲೇ ಸಾವು; ಪರಾರಿಯಾಗಲು ಯತ್ನಿಸಿದ ಕಾರು ಚಾಲಕ

Share :

14-08-2023

    ಪಲ್ಸರ್ ಮತ್ತು ಮಹೀಂದ್ರಾ ಥಾರ್ ನಡುವೆ ಭೀಕರ ಅಪಘಾತ

    ರಾಜ್ಯ ಮೀಸಲು ಪಡೆಯ 5ನೇ ಬಟಾಲಿಯನ್ ಪೇದೆಗಳು ಸಾವು

    ಡಿಕ್ಕಿ ಹೊಡೆದು ಎಸ್ಕೇಪ್​ ಆಗಲು ಯತ್ನಿಸಿದ ಥಾರ್​ ಚಾಲಕ

ಮೈಸೂರು: ಪಲ್ಸರ್ ಮತ್ತು ಮಹೀಂದ್ರಾ ಥಾರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಪೊಲೀಸ್ ಪೇದೆಗಳಿಬ್ಬರ ದುರ್ಮರಣ ಹೊಂದಿದ್ದಾರೆ. ಮೃತರನ್ನು ಕುಂಬಾರಕೊಪ್ಪಲು ಬಡಾವಣೆ ಪಿ.ಮಹೇಶ್(23), ಬಿಜಾಪುರ ಜಿಲ್ಲೆ ಜಮಖಂಡಿ ತಾಲೂಕಿನ ಅಮರನಾಥ ತಾಳಿಕೋಟೆ (24) ಎಂದು ಗುರುತಿಸಲಾಗಿದೆ.

ರಾಜ್ಯ ಮೀಸಲು ಪಡೆಯ 5ನೇ ಬಟಾಲಿಯನ್ ಪೇದೆಗಳಿಬ್ಬರು ತಡರಾತ್ರಿ ಲಲಿತಮಹಲ್ ಹೋಟೆಲ್ ಸಮೀಪ ಚಲಿಸುತ್ತಿದ್ದ ವೇಳೆ ಅಪಘಾತ‌ ಸಂಭವಿಸಿದೆ. ಅಲ್ಲೇ ಪಕ್ಕದಲ್ಲಿದ್ದ ಫುಡ್ ಸ್ಟ್ರೀಟ್​​​ನಲ್ಲಿ ಊಟದ ಮಾಡಿದ ಪೇದೆಗಳು ಬಳಿಕ ತಮ್ಮ ಪಲ್ಸರ್ ಬೈಕ್​ನಲ್ಲಿ ಕೆಎಸ್ಆರ್​​​ಪಿ ಬಟಾಲಿಯನ್ ಕಡೆ ಹೋಗುವಾಗ ಅಪಘಾತ ನಡೆದಿದೆ.

ಎದುರಿಗೆ ಬಂದ ಮಹೀಂದ್ರಾ ಥಾರ್ ಕಾರು ಬೈಕ್​ನಲ್ಲಿ ಚಲಿಸುತ್ತಿದ್ದ ಪಿ.ಮಹೇಶ್, ಅಮರನಾಥ ತಾಳಿಕೋಟಿ ಬೈಕ್​ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಸ್ಥಳದಲ್ಲಿಯೇ ಇಬ್ಬರು ಪೇದೆಗಳ ಸಾವನ್ನಪ್ಪಿದ್ದಾರೆ. ಡಿಕ್ಕಿ ಮಾಡಿ ಎಸ್ಕೇಪ್ ಆಗ್ತಿದ್ದ ಚಾಲಕನನ್ನ ಸಾರ್ವಜನಿಕರು ಹಿಡಿದಿದ್ದಾರೆ. ‌ಸಿದ್ಧಾರ್ಥ ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೈಕ್​ ಮತ್ತು ಥಾರ್​ ವಾಹನ ಡಿಕ್ಕಿ; ಇಬ್ಬರು ಪೇದೆಗಳು ಸ್ಥಳದಲ್ಲೇ ಸಾವು; ಪರಾರಿಯಾಗಲು ಯತ್ನಿಸಿದ ಕಾರು ಚಾಲಕ

https://newsfirstlive.com/wp-content/uploads/2023/08/police.jpg

Load More