ಮಹಿಳೆಯರ ವಿವಸ್ತ್ರಗೊಳಿಸಿ ಮೆರವಣಿಗೆ ಬಳಿಕ ಮತ್ತೊಂದು ಶಾಕ್
ಮಿಜೋರಾಂನಿಂದ ಮಣಿಪುರದತ್ತ ಮೈತೇಯಿ ಸಮುದಾಯದ ವಲಸೆ
ನಿಮ್ಮ ತವರು ರಾಜ್ಯಕ್ಕೆ ಹೋಗುವಂತೆ ಮಾಜಿ ಬಂಡುಕೋರರ ಎಚ್ಚರಿಕೆ
ಮಹಿಳೆಯರ ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ವಿಡಿಯೋ ವೈರಲ್ ಆದ ಬಳಿಕ ಮಣಿಪುರದಲ್ಲಿ ಮತ್ತೆ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಮೈತೇಯಿ ಸಮುದಾಯದ ಭಾರೀ ಸಂಖ್ಯೆಯ ಜನರು ಪಕ್ಕದ ಮಿಜೋರಾಂನಿಂದ ಮಣಿಪುರಕ್ಕೆ ವಲಸೆ ಬರುತ್ತಿದ್ದಾರೆ. ಮಣಿಪುರದಲ್ಲಿ ಈಗಾಗಲೇ ಮೈತೇಯಿ ಹಾಗೂ ಕುಕ್ಸಿ ಸಮುದಾಯದ ಮಧ್ಯೆ ಮೀಸಲಾತಿ ಸಂಬಂಧ ಮಹಾಯುದ್ಧವೇ ನಡೀತಿದೆ. ಸಮುದಾಯ, ಸಮುದಾಯಗಳು ಹೊಡೆದಾಡುತ್ತಿರುವ ಮಧ್ಯೆ ಮೈತೇಯಿ ಸಮುದಾಯದ ಮತ್ತಷ್ಟು ಜನರು ಮಣಿಪುರಕ್ಕೆ ವಲಸೆ ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಮಿಜೋರಾಂನ ಮಾಜಿ ಬಂಡುಕೋರರ ಸಂಘಟನೆಯೊಂದು ಮೈತೇಯಿ ಸಮುದಾಯಕ್ಕೆ ಎಚ್ಚರಿಕೆಯೊಂದನ್ನ ನೀಡಿದೆ. ಅದರಲ್ಲಿ ಮೈತೇಯಿ ಸಮುದಾಯದ ಜನರಿಗೆ ಇಲ್ಲಿ ರಕ್ಷಣೆಯಿಲ್ಲ. ನೀವು ನಿಮ್ಮ ರಕ್ಷಣೆಗಾಗಿ ಈ ರಾಜ್ಯ ಬಿಟ್ಟು ನಿಮ್ಮ ತವರು ರಾಜ್ಯಕ್ಕೆ ಹೋಗುವಂತೆ ಎಚ್ಚರಿಸಲಾಗಿದೆ. ಈ ಎಚ್ಚರಿಕೆಯ ಸಂದೇಶ ವೈರಲ್ ಆಗುತ್ತಿದ್ದಂತೆ ಮೈತೇಯಿ ಸಮುದಾಯದ ಪಲಾಯನ ಶುರುವಾಗಿದೆ. ಮೈತೀಯಿ ಸಮುದಾಯ ರಕ್ಷಣೆಗೆ ಧಾವಿಸಿರೋ ಮಣಿಪುರ ಸರ್ಕಾರ ಮಿಜೋರಾಂನಿಂದ ಏರ್‌ಲಿಫ್ಟ್ ಮಾಡುತ್ತಿದೆ.
ಇದನ್ನೂ ಓದಿ: ಮಣಿಪುರ: ಸ್ವಾತಂತ್ರ್ಯ ಹೋರಾಟಗಾರನ ಪತ್ನಿಯನ್ನು ಬಿಡಿದ ಪಾಪಿಗಳು.. ಬೆಂಕಿ ಹಚ್ಚಿ ಕೊಂದೇ ಬಿಟ್ಟರು
ಮಣಿಪುರದಲ್ಲಿ ಮೈತೇಯಿ ಮತ್ತು ಕುಕ್ಸಿ ಸಮುದಾಯದ ಮಧ್ಯೆ ಮೀಸಲಾತಿ ವಿಚಾರದಲ್ಲಿ ಹಿಂಸಾಚಾರ ನಡೆದಿತ್ತು. ಎರಡು ಸಮುದಾಯದ ಜನರ ಗಲಾಟೆಯಿಂದ ಹಲವರು ಸಾವನ್ನಪ್ಪಿದ್ದರು. ಕಳೆದ ಮೇ 4ರಂದು ಯುವಕರ ಗುಂಪು ಮಹಿಳೆಯರ ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿತ್ತು. ಈ ವಿಡಿಯೋ ವೈರಲ್ ಆದ ಬಳಿಕ ಎರಡೂ ಸಮುದಾಯದ ರಕ್ಷಣೆಗೆ ರಾಜ್ಯ ಸರ್ಕಾರ ಹರಸಾಹಸ ಪಡುತ್ತಿದೆ. ಈ ಮಧ್ಯೆ ಮಣಿಪುರ ಸರ್ಕಾರ ಮಿಜೋರಾಂನಿಂದ ಮೈತೇಯಿ ಸಮುದಾಯದವರನ್ನು ಮಿಜೋರಾಂನಿಂದ ರಕ್ಷಿಸೋ ಸಾಹಸಕ್ಕೆ ಮುಂದಾಗಿದೆ. ಮಿಜೋರಾಂ ಪೊಲೀಸರ ಭದ್ರತೆಯಲ್ಲಿ ಮೈತೇಯಿ ಸಮುದಾಯದವರನ್ನು ಸ್ಥಳಾಂತರ ಮಾಡುವ ಕಾರ್ಯ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ