newsfirstkannada.com

ರಣಭೀಕರ ಮಳೆ, ಪ್ರವಾಹಕ್ಕೆ ಮೆಕ್ಸಿಕೋ ತತ್ತರ; ಹೊಳೆಯಂತಾದ ರಸ್ತೆಗಳಲ್ಲಿ ಸವಾರರ ಪರದಾಟ..!

Share :

21-08-2023

    ರಸ್ತೆಗಳು ಜಲಾವೃತ, ನೀರಿನಲ್ಲಿ ತೇಲಿ ಬಂದ ವಾಹನಗಳು

    ದೊಡ್ಡ ಕಟ್ಟಡಗಳು, ಶಾಪಿಂಗ್ ಮಾಲ್​ಗಳು ಜಲಾವೃತ

    ಹೊಳೆಯಂತೆ ನುಗ್ಗಿದ ನೀರು.. ಮುಳುಗಿದ ನಗರಗಳು!

ಅರ್ಜೆಂಟೀನಾ ಬಳಿಕ ಮಳೆ ಹಾಗೂ ಭೀಕರ ಪ್ರವಾಹಕ್ಕೆ ಅಮೆರಿಕ ತತ್ತರಿಸಿದೆ. ಮೆಕ್ಸಿಕೋ, ಕ್ಯಾಲಿಫೋರ್ನಿಯಾ ಕರಾವಳಿ ತೀರದಲ್ಲಿ ಚಂಡಮಾರುತ ರಕ್ಕಸ ರೂಪ ತಾಳಿದೆ. ಎಲ್ಲೆಲ್ಲೂ ಮಳೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಪ್ರವಾಹ ಪ್ರತಾಪ ಎಲ್ಲವನ್ನೂ ಮುಳುಗಿಸಿದೆ. ವರುಣನ ಚೆಲ್ಲಾಟಕ್ಕೆ ಜನ ತತ್ತರಿಸಿದ್ದಾರೆ.

ರಣಭೀಕರ ಮಳೆ, ಪ್ರವಾಹಕ್ಕೆ ಮೆಕ್ಸಿಕೋ ತತ್ತರ!
ಹಿಲರಿ ಚಂಡಮಾರುತ ಎಫೆಕ್ಟ್​.. ಪ್ರವಾಹ ಪ್ರತಾಪ!

ಅರ್ಜೆಂಟೀನಾ ಬಳಿಕ ಅಮೆರಿಕದ ಮೆಕ್ಸಿಕೋ ರಣಮಳೆ, ಪ್ರವಾಹಕ್ಕೆ ತತ್ತರಿಸಿದೆ. ಫೆಸಿಫಿಕ್ ಸಾಗರದಲ್ಲಿ 2 ದಿನಗಳ ಹಿಂದೆ ಉದ್ಭವಿಸಿದ್ದ ಹಿಲರಿ ಚಂಡಮಾರುತ ಇಂದು ರಾಕ್ಷಸನ ರೂಪ ತಾಳಿದೆ. ಕ್ಯಾಲಿಫೋರ್ನಿಯಾದ ದಕ್ಷಿಣ ತುದಿಯಲ್ಲಿ ಕ್ಯಾಬೊ ಸ್ಯಾನ್ ಲ್ಯೂಕಾಸ್‌ನ ನೈಋತ್ಯಕ್ಕೆ 285 ಮೈಲುಗಳಷ್ಟು ದೂರದಲ್ಲಿ ಚಂಡಮಾರುತ ಚಲಿಸುತ್ತಿದೆ. 230 ಕಿ.ಮೀ ವೇಗದಲ್ಲಿ ಬೀಸುತ್ತಿರುವ ಮಾರುತಗಳು, ಹಠಾತ್ ಪ್ರವಾಹಗಳು ಮೆಕ್ಸಿಕೋ ಜನರನ್ನು ಕಂಗೆಡಿಸಿವೆ. ಪ್ರವಾಹ ಪ್ರತಾಪ ತೋರುತ್ತಿದೆ. ಪರಿಸ್ಥಿತಿ ಅಯೋಮಯ ಆಗಿದೆ.

ಹೊಳೆಯಂತೆ ನುಗ್ಗಿದ ನೀರು.. ಮುಳುಗಿದ ನಗರಗಳು!

ಮೆಕ್ಸಿಕೊದ ಬಾಜಾ ಹಾಗೂ ಕ್ಯಾಲಿಫೋರ್ನಿಯಾದ ಸಾಂಟಾ ರೊಸಾಲಿಯಾದಲ್ಲಿ ಧಾರಾಕಾರ ಮಳೆಯಾಗ್ತಿದ್ದು ರಣಪ್ರವಾಹ ಕಂಡು ಬಂದಿದೆ. ನದಿಯಂತೆ ನೀರು ಭೋರ್ಗರೆಯುತ್ತಿದ್ದು ನಗರದ ಬಡಾವಣೆಗಳು ಮುಳುಗಿವೆ. ಭೋರ್ಗರೆಯುತ್ತಿರುವ ಪ್ರವಾಹದ ನೀರು ಸಿಕ್ಕಸಿಕ್ಕ ವಸ್ತುಗಳನ್ನೆಲ್ಲಾ ಕೊಚ್ಚಿಕೊಂಡು ಹೋಗಿವೆ. ಪ್ರವಾಹಕ್ಕೆ ಸಿಲುಕಿದ ವಾಹನಗಳು ಆಟಿಕೆಗಳಂತೆ ತೇಲಿ ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ನದಿಗಳಂತಾದ ರಸ್ತೆಗಳು.. ವಾಹನ ಸವಾರರ ಪರದಾಟ!

ಇನ್ನು ಮೆಕ್ಸಿಕೋದ ಮೊರಾಲಿಯಾ ಸಿಟಿ ಮುಳುಗಿದೆ. ಇಡೀ ಮೊರಾಲಿಯಾ ನಗರ ಜಲಾವೃತವಾಗಿದೆ. ಮುಳುಗಿದ ರಸ್ತೆಗಳಲ್ಲಿ ಸಂಚರಿಸಲು ವಾಹನ ಸವಾರರು ಪರದಾಡಿದ್ದಾರೆ. ಲಾಸ್​ ವೆಗಾಸ್​​ನಲ್ಲಿ ಪ್ರವಾಹದ ನೀರು ದೊಡ್ಡ ದೊಡ್ಡ ಕಟ್ಟಡಗಳಿಗೆ ನುಗ್ಗಿದೆ. ಶಾಪಿಂಗ್​ ಮಾಲ್​ಗಳು ಜಲಾವೃತಗೊಂಡಿವೆ. ವಾಯುದೇವನ ಪ್ರತಾಪ ಸಿಕ್ಕಸಿಕ್ಕ ವಸ್ತುಗಳನ್ನು ಹಾರಿಸಿಕೊಂಡು ಹೋಗ್ತಿದೆ. ಮೆಕ್ಸಿಕೋದ ಕೆಲವೆಡೆ ಭಾರಿ ಮಳೆಯಿಂದ ಸಾವು-ನೋವು ಸಂಭವಿಸಿರುವ ಮಾಹಿತಿ ಇದೆ. ಕೊಕಾಲ್ಕೋದಲ್ಲಿ ಮಹಿಳೆಯೊಬ್ಬರು ಕೊಚ್ಚಿ ಹೋಗಿರುವ ಮಾಹಿತಿ ಇದೆ. ಸದ್ಯ ಹಿಲರಿ ಚಂಡಮಾರುತ ಬಾಜಾ ಕ್ಯಾಲಿಫೋರ್ನಿಯಾ ಪರ್ಯಾಯ ದ್ವೀಪದ ಪಶ್ಚಿಮ ಕರಾವಳಿಯತ್ತ ಚಲಿಸುತ್ತಿದೆ. ಇಂದು ರಾತ್ರಿ ದಕ್ಷಿಣ ಕ್ಯಾಲಿಫೋರ್ನಿಯಾ ತಲುಪುತ್ತೆ ಅಂತ ಹವಾಮಾನ ಇಲಾಖೆ ತಿಳಿಸಿದೆ. ಸಮುದ್ರತೀರಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಅಮೆರಿಕದ ಪ್ರಮುಖ ಕ್ರೀಡೆ ಬೇಸ್​ಬಾಲ್ ಸೇರಿ ಹಲವು ಕ್ರೀಡಾಕೂಟಗಳನ್ನು ಮುಂದೂಡಲಾಗಿದೆ. ಭೀಕರ ಮಳೆ, ಪ್ರವಾಹ ಹೀಗೆ ಮುಂದುವರಿದ್ರೆ ಮತ್ತಷ್ಟು ಅನಾಹುತಗಳು ಸಂಭವಿಸಲಿದ್ದು ಮೆಕ್ಸಿಕೋ ಜನ ಆತಂಕದಲ್ಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಣಭೀಕರ ಮಳೆ, ಪ್ರವಾಹಕ್ಕೆ ಮೆಕ್ಸಿಕೋ ತತ್ತರ; ಹೊಳೆಯಂತಾದ ರಸ್ತೆಗಳಲ್ಲಿ ಸವಾರರ ಪರದಾಟ..!

https://newsfirstlive.com/wp-content/uploads/2023/08/flood-2.jpg

Load More