ಕಿಡ್ನ್ಯಾಪ್, ಬೆಂಕಿ ಹಚ್ಚಿದ ಪ್ರಕರಣ ಈಗ ಉಲ್ಟಾ-ಪಲ್ಟಾ
ಆ ಒಂದು ಸೇಡಿಗಾಗಿ ಜೀವವನ್ನೇ ಕಳ್ಕೊಂಡ ಯುವಕ
ಪೊಲೀಸ್ ತನಿಖೆ ವೇಳೆ ಬಯಲಾಯ್ತು ರೋಚಕ ಸತ್ಯ
ದೊಡ್ಡಪ್ಪನ ಮಗಳನ್ನು ಪ್ರೀತಿಸಿದ ಕಾರಣಕ್ಕೆ ಯುವಕನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ತನಿಖೆ ನಡೆಸಿದ್ದ ಪೊಲೀಸ್ ಅಧಿಕಾರಿಗಳಿಗೆ ಸ್ಫೋಟಕ ಸತ್ಯ ಗೊತ್ತಾಗಿದೆ ಎನ್ನಲಾಗಿದ್ದು, ಮೃತ ಯುವಕನಿಗೆ ಯಾರೂ ಬೆಂಕಿ ಇಟ್ಟಿಲ್ಲ. ಬದಲಾಗಿ ಆತನೇ ಪೆಟ್ರೋಲ್ ಸುರಿದುಕೊಂಡು ಬೆಂಕಿಹಚ್ಚಿಕೊಂಡಿದ್ದಾನಂತೆ.
ಪ್ರಕರಣದ ಹಿನ್ನೆಲೆ ಏನು..?
ಜುಲೈ 16 ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಕಾಲೇಜಿಗೆ ಹೊರಟಿದ್ದ ವಿದ್ಯಾರ್ಥಿ ಶಶಾಂಕ್ ಎಂಬಾತನ ಕಿಡ್ನ್ಯಾಪ್ ಆಗಿತ್ತು. ಕಿಡ್ನಾಪ್ ಮಾಡಿದ ಕಿರಾತಕರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು ಎನ್ನಲಾಗಿತ್ತು.
ಇಷ್ಟಕ್ಕೆಲ್ಲ ಕಾರಣ, ಪ್ರೀತಿ-ಪ್ರೇಮ!
ಈ ಶಶಾಂಕ್ ಬೆಂಗಳೂರಿನ ಆರ್ಆರ್ ನಗರದ ರಂಗನಾಥ್ ಮತ್ತು ಸತ್ಯಪ್ರೇಮಾ ದಂಪತಿಯ ಮಗನಾಗಿದ್ದ. ಈತ, ಮೈಸೂರು ಮೂಲದ ಮನೋಹರ್ ಎಂಬಾತನ ಮಗಳನ್ನು ಪ್ರೀತಿ ಮಾಡ್ತಿದ್ದ. ಮಗಳು ಶಶಾಂಕ್ನನ್ನ ಪ್ರೀತಿ ಮಾಡ್ತಿರೋದಕ್ಕೆ ಮನೋಹರ್ ವಿರೋಧ ವ್ಯಕ್ತಪಡಿಸಿದ್ದ. ಮಗಳಿಗೆ ಬುದ್ಧಿ ಹೇಳಿ ಶಶಾಂಕ್ನಿಂದ ದೂರ ಇರುವಂತೆ ಎಚ್ಚರಿಕೆ ನೀಡಿದ್ದ. ಇನ್ನೊಂದು ವಿಚಾರ ಏನೆಂದರೆ ಸಂಬಂಧದಲ್ಲಿ ಮನೋಹರ್ ಶಶಾಂಕ್‌ಗೆ ದೊಡ್ಡಪ್ಪ ಆಗಬೇಕಾಗಿತ್ತು. ದೊಡ್ಡಪ್ಪನ ಮಗಳನ್ನೇ ಶಶಾಂಕ್ ಮನಸಾರೆ ಇಷ್ಟಪಟ್ಟಿದ್ದ.
ಕಳೆದ ಸೋಮವಾರ ಮೈಸೂರಿನಿಂದ ಮನೋಹರ್ ಪುತ್ರಿ ಬೆಂಗಳೂರಿಗೆ ಬಂದಿದ್ದಳು. ಆಕೆಯನ್ನ ಶಶಾಂಕ್ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ವಿಷಯ ತಿಳಿದ ಮನೋಹರ್ ಬೆಂಗಳೂರಿನ ಆರ್ಆರ್ ನಗರದಲ್ಲಿರುವ ಶಶಾಂಕ್ ಮನೆಗೆ ನುಗ್ಗಿದ್ದ. ಶಶಾಂಕ್ ಮೇಲೆ ಹಲ್ಲೆ ನಡೆಸಿ ಯುವತಿಯನ್ನು ವಾಪಸ್ ಕರೆದುಕೊಂಡು ಹೋಗಿದ್ದ. ಈ ಸಂದರ್ಭದಲ್ಲಿ ಯುವತಿ ಸಹವಾಸಕ್ಕೆ ಹೋಗಲ್ಲ ಎಂದು ಶಶಾಂಕ್ ಹೇಳಿದ್ದ ಎನ್ನಲಾಗಿದೆ.
ಜುಲೈ 16 ರಂದು ಬಂದ ಮಾಹಿತಿ ಏನಾಗಿತ್ತು..?
ಜುಲೈ 16 ರಂದು ಕಾಲೇಜಿಗೆ ಹೋಗಲು ಶಶಾಂಕ್ ಮನೆಯಿಂದ ಬಸ್ ನಿಲ್ದಾಣಕ್ಕೆ ಅಪ್ಪನ ಜೊತೆ ಡ್ರಾಪ್ ಪಡೆದಿದ್ದಾನೆ. ನಿಲ್ದಾಣಕ್ಕೆ ಬಂದ ಕೆಲವೇ ಹೊತ್ತಲ್ಲಿ ಶಶಾಂಕ್ನನ್ನು ಕೆಲ ದುಷ್ಕರ್ಮಿಗಳು ಕಿಡ್ನಾಪ್ ಮಾಡಿದ್ದಾರೆ. ಆತನ ಕೈ-ಕಾಲು ಕಟ್ಟಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಸುಟ್ಟಗಾಯದಿಂದ ಒದ್ದಾಟ ನಡೆಸಿದ ಶಶಾಂಕ್, ತನ್ನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ವಿಡಿಯೋ ಕಾಲ್ ಮಾಡಿ ಯುವತಿಯ ತಾಯಿಗೆ ಮಾಹಿತಿ ನೀಡಿದ್ದಾನೆ. ಬಳಿಕ ಶಶಾಂಕ್ನನ್ನು ಪೋಷಕರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಕೊನೆಗೆ ಶಶಾಂಕ್ ಚಿಕಿತ್ಸೆ ಫಲಿಸದೇ ಜುಲೈ 18 ರಂದು ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿತ್ತು.
ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದ್ದು ಏನು..?
ಪ್ರಕರಣ ದಾಖಲಿಸಿಕೊಂಡ ಕುಂಬಳಗೋಡು ಪೊಲೀಸರು, ತೀವ್ರ ವಿಚಾರಣೆ ನಡೆಸಿದ್ದರು. ಶಶಾಂಕ್‌ಗೆ ಯಾರೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಲ್ಲ. ಬದಲಾಗಿ ಅವನೇ ಬೆಂಕಿ ಹಚ್ಚಿಕೊಂಡಿದ್ದಾನೆ ಅನ್ನೋದು ಗೊತ್ತಾಗಿದೆ. ಮನೆಗೆ ಬಂದು ವಾರ್ನಿಂಗ್ ಮಾಡಿದ್ದ ದೊಡ್ಡಪ್ಪ ಮನೋಹರ್ ವಿರುದ್ಧ ಸೇಡು ತೀರಿಸಿಕೊಳ್ಳಲು ಶಶಾಂಕ್ ಹೀಗೆ ಮಾಡಿದ್ದಾನಂತೆ.
ಅದಕ್ಕೆ ಕಿಡ್ನಾಪ್ ಮಾಡಿ ಬೆಂಕಿ ಹಚ್ಚಿದ ಕಥೆಯನ್ನು ಕಟ್ಟಿದ್ದಾನಂತೆ. ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡ ಬಳಿಕ ದೊಡ್ಡಪ್ಪನ ಪತ್ನಿಗೆ ವಿಡಿಯೋ ಕಾಲ್ ಮಾಡಿದ್ದಾನೆ. ನಿನ್ನ ಗಂಡ ನನಗೆ ಪೆಟ್ರೋಲ್ ಸುರಿದು ಬೆಂಕಿ ಹಾಕಿದ್ದಾನೆ ಎಂದು ದೂರಿದ್ದ. ಮಾತ್ರವಲ್ಲ, ಲೋಕೇಷನ್ ಶೇರ್ ಮಾಡಿ ತನ್ನನ್ನು ರಕ್ಷಿಸುವಂತೆ ಬೇಡಿಕೊಂಡಿದ್ದ. ಆಗ ನನ್ನ ಗಂಡ ಪಕ್ಕದಲ್ಲೇ ಇದ್ದಾನೆ ಎಂದು ಶಶಾಂಕ್‌ಗೆ ವಿಡಿಯೋ ಕಾಲ್‌ನಲ್ಲೇ ಮನೋಹರ್ನನ್ನು ತೋರಿಸಿದ್ದಾಳೆ. ಕೊನೆಗೆ ಮನೋಹರ್, ಮೈಸೂರಿನ ಚಾಮರಾಜನಗರ ಪೂರ್ವ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು, ಘಟನಾ ಸ್ಥಳಕ್ಕೆ ಪೊಲೀಸರು ಬಂದಾಗ ಅವರಿಗೂ ಕಿಡ್ನ್ಯಾಪ್ ಮಾಡಿ ಬೆಂಕಿ ಹಚ್ಚಿರುವ ಕಥೆಯನ್ನು ಶಶಾಂಕ್ ಕಟ್ಟಿದ್ದ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಇದನ್ನೂ ಓದಿ: ಪ್ರೀತಿಸಿದ ತಪ್ಪಿಗೆ ಯುವಕನ ಕಿಡ್ನಾಪ್; ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿಗಳು
ಇದನ್ನೂ ಓದಿ: ದೊಡ್ಡಪ್ಪನ ಮಗಳನ್ನೇ ಲವ್ ಮಾಡಿದ್ದ ಕೇಸ್ಗೆ ಟ್ವಿಸ್ಟ್; ಯುವಕನಿಗೆ ಬೆಂಕಿ ಹಚ್ಚೋ ಮುನ್ನ ಏನು ಮಾಡಿದ್ರು?
ಇದನ್ನೂ ಓದಿ: ದೊಡ್ಡಪ್ಪನ ಮಗಳನ್ನು ಪ್ರೀತಿಸಿದಕ್ಕೆ ಬೆಂಕಿ ಹಚ್ಚಿದ ಪ್ರಕರಣ; ಚಿಕಿತ್ಸೆ ಫಲಕಾರಿಯಾಗದೆ ಶಶಾಂಕ್ ಸಾವು