newsfirstkannada.com

ಯುವ ಡಿವೋರ್ಸ್‌ ಕೇಸ್‌ಗೆ ಮೇಜರ್ ಟ್ವಿಸ್ಟ್‌; ಕೊನೆಗೂ ವಿದೇಶದಿಂದ ಬಂದ ಶ್ರೀದೇವಿ ಭೈರಪ್ಪ

Share :

Published July 3, 2024 at 5:37pm

Update July 3, 2024 at 5:41pm

    ಯುವರಾಜ್ ಕುಮಾರ್, ಶ್ರೀದೇವಿ ವಿಚ್ಛೇದನ ಅರ್ಜಿಯ ವಿಚಾರಣೆ

    ನಾಳೆ ಫ್ಯಾಮಿಲಿ ಕೋರ್ಟ್‌ನಲ್ಲಿ ಮುಂದಿನ ವಿಚಾರಣೆಯ ಸಮಯ ಫಿಕ್ಸ್!

    ನೋಟಿಸ್ ಕೊಟ್ಟ ಬಳಿಕ ಅಮೆರಿಕಾದಿಂದ ಶ್ರೀದೇವಿ ಬೆಂಗಳೂರಿಗೆ ವಾಪಸ್?

ಬೆಂಗಳೂರು: ದೊಡ್ಮನೆ ಮಗ, ನಟ ಯುವರಾಜ್‌ ಕುಮಾರ್ ಅವರ ಡಿವೋರ್ಸ್‌ ಕೇಸ್‌ಗೆ ಹೊಸ ತಿರುವು ಸಿಕ್ಕಿದೆ. ನಾಳೆ ಯುವರಾಜ್‌ ಕುಮಾರ್ ವಿಚ್ಛೇದನ ಕೇಸ್‌ಗೆ ನಿರ್ಣಾಯಕ ದಿನವಾಗಿದೆ. ಫ್ಯಾಮಿಲಿ ಕೋರ್ಟ್‌ನಲ್ಲಿ ನಾಳೆ ವಿಚಾರಣೆ ನಡೆಯಲಿದ್ದು ಯುವ ಪತ್ನಿ ಶ್ರೀದೇವಿ ಭೈರಪ್ಪ ಅವರು ಹಾಜರಾಗುವ ಸಾಧ್ಯತೆ ಇದೆ.

ಕಳೆದ ಜೂನ್ 6ನೇ ತಾರೀಖು ಯುವರಾಜ್‌ ಕುಮಾರ್ ಅವರು ಶ್ರೀದೇವಿ ಭೈರಪ್ಪ ಅವರಿಂದ ವಿಚ್ಛೇದನ ಕೋರಿ ಅರ್ಜಿ ಹಾಕಿದ್ದರು. ವಿಚಾರಣೆ ನಡೆಸಿದ ಫ್ಯಾಮಿಲಿ ಕೋರ್ಟ್‌ ಮುಂದಿನ‌ ವಿಚಾರಣೆಯನ್ನು ಜುಲೈ 4ಕ್ಕೆ ನಿಗದಿ ಮಾಡಿತ್ತು. ಹೀಗಾಗಿ ನಾಳೆ ಯುವರಾಜ್ ಕುಮಾರ್, ಶ್ರೀದೇವಿ ಭೈರಪ್ಪ ವಿಚ್ಛೇದನ ಅರ್ಜಿಯ ವಿಚಾರಣೆ ಫ್ಯಾಮಿಲಿ ಕೋರ್ಟ್‌ನಲ್ಲಿ ನಿಗದಿಯಾಗಿದೆ.

ಇದನ್ನೂ ಓದಿ: VIDEO: ಯುವ ಡಿವೋರ್ಸ್​​ ಬಗ್ಗೆ ಬೇಸರ ಹೊರಹಾಕಿದ ಶಿವಣ್ಣ.. ಈ ಬಗ್ಗೆ ಹೇಳಿದ್ದೇನು? 

ಯುವರಾಜ್ ಕುಮಾರ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವುದಕ್ಕೂ ಮುಂಚೆಯೇ ಶ್ರೀದೇವಿ ಅವರು ವಿದೇಶ ಪ್ರವಾಸ ಕೈಗೊಂಡಿದ್ದರು. ಯುವರಾಜ್ ಕುಮಾರ್ ಅವರ ಡಿವೋರ್ಸ್ ಅರ್ಜಿಯ ವಿಚಾರ ತಿಳಿದು ವಿದೇಶದಿಂದಲೇ ಪ್ರತಿಕ್ರಿಯೆ ಕೂಡ ನೀಡಿದ್ದರು. ಇದೀಗ ಶ್ರೀದೇವಿ ಅವರು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ನಾಳೆ ಶ್ರೀದೇವಿ ಭೈರಪ್ಪ ಅವರು ಫ್ಯಾಮಿಲಿ ಕೋರ್ಟ್‌ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

ಕೋರ್ಟ್​ನಲ್ಲಿ ಅರ್ಜಿ.. ಮುಂದೇನು?

ಈ ಡಿವೋರ್ಸ್ ಪ್ರಕರಣದಲ್ಲಿ  ಯುವ ರಾಜ್‌ ಕುಮಾರ್ ಅವರು ಶ್ರೀದೇವಿ ಅವರಿಗೆ ಡಿವೋರ್ಸ್ ಕೊಡಲು ಒಪ್ಪಿದ್ದಾರೆ. ಆದರೆ ಶ್ರೀದೇವಿ ಅವರು ಇನ್ನೂ ಕೋರ್ಟ್‌ಗೆ ಉತ್ತರಿಸಿಲ್ಲ. ನೋಟಿಸ್ ಕೊಟ್ಟ ಬಳಿಕ ಶ್ರೀದೇವಿ ಅವರಿಗೆ ಕೋರ್ಟ್ ಪ್ರಶ್ನೆ ಮಾಡಲಿದೆ. ಯುವ ರಾಜ್‌ಕುಮಾರ್ ಅವರಿಗೆ ಡಿವೋರ್ಸ್ ನೀಡುವುದಕ್ಕೆ ನಿಮಗೆ ಒಪ್ಪಿಗೆ ಇದೆಯಾ? ಇಲ್ಲವಾ? ಡಿವೋರ್ಸ್ ನೀಡಲ್ಲ ಅಂದ್ರೆ, ಆಕ್ಷೇಪಣೆ ಇರೋದು ಏನು? ಹೀಗೆ ಅವರ ಪ್ರತಿಕ್ರಿಯೆ ಕೇಳಿ ನ್ಯಾಯಾಲಯ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೆ.

ಇದನ್ನೂ ಓದಿ: ‘ನನ್ನ ಗಂಡನಿಗೆ ನಾನೊಬ್ಬಳೇ ಹೆಂಡ್ತಿ’- ಡಿವೋರ್ಸ್‌ ರಿಜೆಕ್ಟ್ ಬೆನ್ನಲ್ಲೇ ದುನಿಯಾ ವಿಜಯ್ ಪತ್ನಿ ಖಡಕ್ ಮಾತು 

ಯುವರಾಜ್‌ಕುಮಾರ್ ಅವರ ಡಿವೋರ್ಸ್‌ ಕೇಸ್‌ನಲ್ಲಿ ಎರಡೂ ಕಡೆಯ ವಾದಗಳನ್ನು ಕೋರ್ಟ್ ಕೇಳಬೇಕಾಗುತ್ತದೆ. ಇದರ ಜೊತೆಯಲ್ಲೇ ವೇಟಿಂಗ್ ಪಿರಿಯಡ್ ಸಹ ನೋಡಬೇಕು. ನಂತರ ಕೋರ್ಟ್ ಈ ಪ್ರಕರಣದಲ್ಲಿ ತನ್ನ ಆದೇಶವನ್ನು ನೀಡುತ್ತೆ. ಈ ಎಲ್ಲಾ ಕಾನೂನು ಪ್ರಕ್ರಿಯೆಗಳ ಮುಗಿಯಬೇಕಿರೋದ್ರಿಂದ ತಕ್ಷಣಕ್ಕೆ ಡಿವೋರ್ಸ್ ನೀಡೋದು ಕಷ್ಟ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯುವ ಡಿವೋರ್ಸ್‌ ಕೇಸ್‌ಗೆ ಮೇಜರ್ ಟ್ವಿಸ್ಟ್‌; ಕೊನೆಗೂ ವಿದೇಶದಿಂದ ಬಂದ ಶ್ರೀದೇವಿ ಭೈರಪ್ಪ

https://newsfirstlive.com/wp-content/uploads/2024/06/Yuva-Rajkumar-Divorce-12.jpg

Load More