newsfirstkannada.com

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ.. ಮಲೆನಾಡ ಮಳೆಗೆ ಮೈದುಂಬಿದ ಮಲಪ್ರಭಾ

Share :

Published July 10, 2023 at 8:07am

    ಮಹಾಮಳೆಗೆ ಮಳೆನಾಡಾಗಿ ಬದಲಾದ ಮಲೆನಾಡು

    ಉಕ್ಕಡಗಾತ್ರಿ ದೇವಸ್ಥಾನದ ಸ್ನಾನಘಟ್ಟ ಮುಳುಗಡೆ

    ಮಲೆನಾಡಿಗರ ಜೀವನಾಡಿ ತುಂಗಭದ್ರೆಗೆ ಹೊಸ ಕಳೆ

ಕರುನಾಡನ್ನ ಹಸಿರು ಬೀಡಾಗಿ ಮಾಡುವ ಕೆಲಸಕ್ಕೆ ಮಳೆರಾಯ ಕೈ ಹಾಕಿದ್ದಾನೆ. ಈ ಮಧ್ಯೆ ಕರಾವಳಿಯಲ್ಲಿ ಕೆಲ ಅವಾಂತಗಳನ್ನ ಸೃಷ್ಟಿಸಿ ಆತಂಕವನ್ನೂ ತಂದೊಂಡಿದ್ದಾನೆ. ಅಲ್ಲದೇ ವರುಣನ ಮಾಸ್​ ಎಂಟ್ರಿಗೆ ಮಲೆನಾಡು ಮಳೆನಾಡಾಗಿದೆ.. ಜಲಪಾತಗಳ ಸೊಬಗು ಕಣ್ಣು ಕೋರೈಸುವಂತಿದೆ.. ಪ್ರವಾಸಿಗರ ದಂಡು ಮಲೆನಾಡಿಗೆ ಹರಿದು ಬರ್ತಿದೆ.

ಉತ್ತರ ಭಾರತದಲ್ಲಿ ಉಗ್ರಸ್ವರೂಪ ತಾಳಿರೋ ವರುಣ ಕರ್ನಾಟಕದಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾನೆ. 24\7 ಆನ್ ಡ್ಯೂಟಿ ಅಂತ ರೆಸ್ಟ್​ ತೆಗೆದುಕೊಳ್ಳದೇ ಸುರಿಯುತ್ತಿದ್ದಾನೆ. ಹಳ್ಳ-ಕೊಳ್ಳಗಳಿಗೆ ಕಳೆ ನೀಡಿದ್ದಾನೆ. ಕೃಷಿ ಭೂಮಿಗಳಿಗೆ ಜೀವ ತುಂಬಿದ್ದಾನೆ. ಸಕಲ ಜೀವರಾಶಿಗಳಿಗೆ ಜೀವಜಲವನ್ನ ಧಾರೆ ಎರೆದಿದ್ದಾನೆ. ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರೋ ಧಾರಾಕಾರ ಮಳೆ ಬೆಳಗಾವಿ ಭಾಗಕ್ಕೆ ಹೊಸ ರೂಪವನ್ನ ನೀಡಿದೆ. ಜೊತೆಗೆ ಪ್ರವಾಹವನ್ನೂ ತಂದೊಡ್ಡಿದೆ. ಭಾರೀ ಮಳೆಯಿಂದ ಮಲಪ್ರಭಾ ನದಿ ಮೈದುಂಬಿ ಹರಿಯುತ್ತಿದೆ. ಖಾನಾಪೂರ ತಾಲೂಕಿನ ಹೆಬ್ಬಾನಟ್ಟಿ ಗ್ರಾಮದ ನದಿ ತೀರದಲ್ಲಿರೋ ಐತಿಹಾಸಿಕ ಮಾರುತಿ ದೇವಸ್ಥಾನ ಜಲಾವೃತಗೊಂಡಿದೆ. ಮಾರುತಿ ದೇವರ ಉದ್ಬವ ಮೂರ್ತಿ ನೀರಿನಲ್ಲಿ ಬಹುತೇಕ ಮುಳುಗಡೆಯಾಗಿದೆ.

ಮಲೆನಾಡಿನಲ್ಲಿ ಮಳೆ ಆರ್ಭಟ ಜೋರಾಗಿರೋದ್ರಿಂದ ಮಲೆನಾಡಿಗರ ಜೀವನಾಡಿ ತುಂಗಭದ್ರಾ ನದಿಗೆ ಜೀವ ಕಳೆ ಬಂದಿದೆ. ಹೊನ್ನಾಳಿ-ಹರಿಹರ ಮಾರ್ಗವಾಗಿ ಹರಿಯುವ ತುಂಗಭದ್ರ ನದಿಯ ರಭಸ ಹೆಚ್ಚಾಗಿದೆ. ನದಿಯ ನೀರಿನಿಂದ ಹರಿಹರದ ಉಕ್ಕಡಗಾತ್ರಿ ದೇವಸ್ಥಾನದ ಸ್ನಾನಘಟ್ಟ ಮುಳುಗಡೆಯಾಗಿದೆ. ನದಿಗೆ ಅಡ್ಡಲಾಗಿ ಹಾಕಿದ್ದ ಬ್ಯಾರಿಕೇಡ್​ಗಳು ಕೂಡ ನೀರಲ್ಲಿ ಮುಳುಗಿ ಹೋಗಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಕೊಂಚ ಕಡಿಮೆಯಾಗಿದೆ. ಆದ್ರೆ ಮಳೆರಾಯ ವಿರಾಮ ತಗೊಂಡ್ರು ಸಮುದ್ರರಾಜ ಮಾತ್ರ ಅಬ್ಬರ ಮುಂದುವರೆಸಿದ್ದಾನೆ. ಮಂಗಳೂರು ಹೊರವಲಯದ ಮೀನಕಳಿಯದಲ್ಲಿ ಮತ್ತೇ ಕಡಲ್ಕೊರೆತದ ಭೀತಿ ಹೆಚ್ಚಾಗಿದೆ. ಮೀನಕಳಿಯ ಪ್ರದೇಶದ ಮೂರು ಮನೆಗಳು ಅಪಾಯಕ್ಕೆ ಸಿಲುಕಿವೆ. ಕ್ಷಣ ಕ್ಷಣಕ್ಕೂ ಭೂಮಿಯನ್ನ ಸಮುದ್ರದ ಅಲೆಗಳು ನುಂಗುತ್ತಿವೆ.

ಮೀನುಗಾರರ ಸಭಾ ಭವನ ಅಪಾಯಕ್ಕೆ ಸಿಲುಕಿದೆ. ಅಪಾಯದಲ್ಲಿರುವ ಮನೆಗಳ ರಕ್ಷಿಸಲು ಸ್ಥಳೀಯರು ಜಂಬೋ ಸ್ಯಾಂಡ್ ಬ್ಯಾಗ್​ಗಳ ಮೊರೆ ಹೋಗಿದ್ದಾರೆ. ಬೈಕಂಪಾಡಿ, ಮೀನಕಳಿ, ಪಣಂಬೂರು ಬೀಚ್​ಗಳಲ್ಲಿ ತುರ್ತು ಕಾಮಗಾರಿ ನಡೆಸಲಾಗ್ತಿದೆ. ಮಲೆನಾಡಿನ ಮಳೆ ಅಬ್ಬರಕ್ಕೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಸಿರಿಮನೆ ಜಲಪಾತದ ವೈಭವ ಹೆಚ್ಚಾಗಿದೆ. 30ಅಡಿ ಎತ್ತರದಿಂದ ಜಲಪಾತದಲ್ಲಿ ನೀರು ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿದೆ. ಜಲಪಾತದ ಸೌಂದರ್ಯ ಸವಿಯಲು ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಪಶ್ಚಿಮಘಟ್ಟದಲ್ಲಿ ಸುರಿಯುತ್ತಿರೋ ವರ್ಷಧಾರೆ ಹಲವು ಜಿಲ್ಲೆಗಳ ದಾಹವನ್ನ ಇಂಗಿಸುತ್ತಿದೆ. ಮಲೆನಾಡಿನ ಮಹಾಮಳೆಯಿಂದ ಹಳ್ಳ-ಕೊಳ್ಳಗಳಿಗೆ ಜೀವಕಳೆ ಬಂದಿದ್ದು, ಮಲೆನಾಡು ಸ್ವರ್ಗದ ಬೀಡಾಗಿ ಬದಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ.. ಮಲೆನಾಡ ಮಳೆಗೆ ಮೈದುಂಬಿದ ಮಲಪ್ರಭಾ

https://newsfirstlive.com/wp-content/uploads/2023/07/RAIN-10.jpg

Load More