ರೈತರಿಗೆ ಬರಗಾಲ, ರಾಜಕೀಯವಾಗಿ ಕಗ್ಗಂಟು ಸೃಷ್ಟಿ
ಅಚ್ಚರಿಯ ಭವಿಷ್ಯ ನುಡಿದ ಬಿಲ್ಲನ್ನೇರಿದ ಗೊರವಪ್ಪ
ನೂರಾರು ವರ್ಷದ ಇತಿಹಾಸವಿರುವ ಮಾಲತೇಶ ದೇವಸ್ಥಾನ
ಮಾಲತೇಶ ದೇವರ ಕಾರ್ಣಿಕ ಅಂದ್ರೆ ವರ್ಷದ ಭವಿಷ್ಯವಾಣಿ. ದಸರಾ ಹಬ್ಬದ ವೇಳೆ ನುಡಿಯೋ ಕಾರ್ಣಿಕವಾಣಿಯ ಆಧಾರದ ಮೇಲೆ ರೈತರ ಮಳೆ ಬೆಳೆ ನಿರ್ಧರಿಸ್ತಾರೆ. ರಾಜಕೀಯವಾಗಿಯೂ ಕಾರ್ಣಿಕವನ್ನ ವಿಶ್ಲೇಷಿಸಲಾಗುತ್ತೆ. ಈ ವರ್ಷದ ಭವಿಷ್ಯವಾಣಿ ಕೇಳಿದ ಜನ, ರಾಜಕೀಯ ಅಸ್ಥಿರತೆಯ ಆತಂಕದಲ್ಲೇ ಮನೆಯತ್ತ ಹೆಜ್ಜೆ ಹಾಕಿದ್ದಾರೆ.
ಕಿಕ್ಕಿರಿದು ಸೇರಿರೋ ಜನ ಸಾಗರ. ಮೊಳಗಿರೋ ಢಮರುಗದ ಸದ್ದು. ಮೆರವಣಿಗೆಯಲ್ಲಿ ಬರ್ತಿರೋ ಗೊರವಪ್ಪ. ಎಲ್ಲೆಲ್ಲೂ ಭಯ-ಭಕ್ತಿ. ಬಿಲ್ಲನ್ನೇರಿ ಸದ್ದಲೆ ಅನ್ನುತ್ತಲೆ ಎಲ್ಲವೂ ಮೌನ. ಇದು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದ ದೃಶ್ಯಗಳು. ದಸರಾ ಪ್ರಯುಕ್ತ ದೇವರಗುಡ್ಡ ಕರಿಯಾಲ ಪ್ರದೇಶದಲ್ಲಿ ಮಳೆ-ಬೆಳೆ, ರಾಜಕೀಯದ ಕುರಿತು ಗೊರವಯ್ಯ ಭವಿಷ್ಯ ನುಡಿದಿದ್ದಾನೆ.
‘ಮುಕ್ಕೊಟ್ಟಿ ಚೆಲ್ಲಿತಲೇ ಕಲ್ಯಾಣ ಕಟ್ಟಿತಲೇ ಪರಾಕ್’
ಮುಕ್ಕೊಟ್ಟಿ ಚೆಲ್ಲಿತಲೇ ಕಲ್ಯಾಣ ಕಟ್ಟಿತಲೇ ಪರಾಕ್. ಇದು ದೇವಗುಡ್ಡ ಕಾರ್ಣಿಕ. ಬಿಲ್ಲನ್ನೇರಿದ ಗೊರವಪ್ಪ ಹೀಗೆ ಅಚ್ಚರಿ ಭವಿಷ್ಯ ನುಡಿದಿದ್ದಾನೆ. ಈ ಕಾರ್ಣಿಕದ ಅರ್ಥ ಎಲ್ಲೆಲ್ಲೂ ಭಾರೀ ಸದ್ದು ಮಾಡ್ತಿದೆ. ಆ ಅರ್ಥ ವಿಶ್ಲೇಷಣೆ ನೋಡುವ ಮುನ್ನ ಇಲ್ಲಿನ ಸಂಪ್ರದಾಯ ಬಗ್ಗೆ ಹೇಳ್ತಿವಿ ನೋಡಿ.
ದೇವರಗುಡ್ಡದ ಮಾಲತೇಶ ದೇವಸ್ಥಾನಕ್ಕೆ ನೂರಾರು ವರ್ಷದ ಇತಿಹಾಸ ಇದೆ. ದಸರಾ ಹಬ್ಬದ ವೇಳೆ ನಡೆಯೋ ದೇವರ ಕಾರ್ಣಿಕ ಕೇಳಲು ಸಾವಿರಾರು ಜನರ ದಂಡೆ ನೆರೆಯುತ್ತೆ. ಒಂಬತ್ತು ದಿನಗಳ ಕಠಿಣ ಉಪವಾಸ ವ್ರತದ ಬಳಿಕ ಗೊರವಪ್ಪ ನಾಗಪ್ಪ ಉರ್ಮಿ ಕಾರ್ಣಿಕ ನುಡಿಯುತ್ತಾನೆ. ಕರಿಯಾಲ ಪ್ರದೇಶಕ್ಕೆ ಢಮರುಗ, ಚಾಟಿ ಏಟಿನ ಸದ್ದಿನ ಮೂಲಕ ಗೊರವಪ್ಪನನ್ನ ಮೆರವಣಿಗೆಯಲ್ಲಿ ಕರೆ ತರ್ತಾರೆ. ಸಂಜೆ ಆಗ್ತಿದ್ದಂತೆ 21 ಅಡಿ ಎತ್ತರದ ಬಿಲ್ಲನ್ನೇರಿ ಸದ್ದಲೆ ಅನ್ನುತ್ತಲೆ ಕಿಕ್ಕಿರಿದು ಸೇರಿದ ಜನರ ನಡುವೆ ಕಾರ್ಣಿಕದ ಭವಿಷ್ಯ ಕೇಳಿ ಬರುತ್ತದೆ.
ಅಂದ್ಹಾಗೆ ಈ ಬಾರಿ ಮುಕ್ಕೊಟ್ಟಿ ಚೆಲ್ಲಿತಲೇ ಕಲ್ಯಾಣ ಕಟ್ಟಿತಲೇ ಪರಾಕ್ ಅಂತ ಗೊರವಯ್ಯ ಭವಿಷ್ಯ ಹೇಳಿದ್ದಾನೆ. ಈ ವರ್ಷ ಮುಕ್ಕೋಟಿ ಜನ ಅನ್ನದಾತರು ಸಾವಿರಾರು ರುಪಾಯಿ ಖರ್ಚು ಮಾಡಿದರೂ ಬೆಳೆಗಳು ಬರಲಿಲ್ಲ. ಮಳೆರಾಯನ ಅವಕೃಪೆಯಿಂದ ಬರಗಾಲ ಬಂದಿದೆ. ಮಳೆ ಇಲ್ಲದೆ ಅನ್ನದಾತರು ಕೈಸುಟ್ಟುಕೊಂಡಿದ್ದಾರೆ ಅಂತ ಮಳೆ-ಬೆಳೆ ಬಗ್ಗೆ ವಿಶ್ಲೇಷಣೆ ಮಾಡಲಾಗಿದೆ. ಆದರೆ, ಇದನ್ನೇ ರಾಜಕೀಯಕ್ಕೆ ವಿಶ್ಲೇಷಣೆ ಮಾಡಿದಾಗ ಅಚ್ಚರಿ ಕಾದಿದೆ. ಕೋಟ್ಯಾಂತರ ಜನ ಮತಹಾಕಿ ಬಹುಮತದ ಸರ್ಕಾರ ತಂದಿದ್ದಾರೆ. ಅದ್ರೆ ಮಹಿಳೆಯ ಹಸ್ತಕ್ಷೇಪದಿಂದ ಸರ್ಕಾರ ಇಕ್ಕಟ್ಟಿಗೆ ಸಿಲುಕಲಿದೆ. ಅಂತ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್ ವಿಶ್ಲೇಷಣೆ ಮಾಡಿದ್ದಾರೆ.
ಇನ್ನು, ದೇವರಗುಡ್ಡದ ಮಾಲತೇಶ ದೇವರ ಕಾರ್ಣಿಕ ಕೇಳಿಯೇ ಇಲ್ಲಿನ ರೈತರು ಮಳೆ ಬೆಳೆ ನಿರ್ಧರಿಸ್ತಾರೆ. ಅಲ್ಲದೆ, ರಾಜಕೀಯವಾಗಿಯೂ ಈ ಕಾರ್ಣಿಕ ಮಹತ್ವ ಪಡೆದುಕೊಂಡಿದೆ.
ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರೋ ಮಾಲತೇಶ ದೇವರ ಕಾರ್ಣಿಕ ವರ್ಷದ ಭವಿಷ್ಯವಾಣಿ ಅಂತಾನೆ ಜನಜನಿತ.. ಸಾಕ್ಷಾತ್ ಮಾಲತೇಶ ದೇವರೆ ಗೊರವಪ್ಪನ ಮೈಮೇಲೆ ಅವತರಿಸಿ ವರ್ಷದ ಭವಿಷ್ಯವಾಣಿ ನುಡಿಸ್ತಾನೆ ಅನ್ನೋ ನಂಬಿಕೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ