newsfirstkannada.com

ಖ್ಯಾತ ನಟಿ ರೆಂಜೂಷಾ ಆತ್ಮಹತ್ಯೆ; ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ; ಅಸಲಿಗೆ ಆಗಿದ್ದೇನು..?

Share :

30-10-2023

    ಖ್ಯಾತ ಮಲಯಾಳಂ ನಟಿ ರೆಂಜೂಷಾ ಮೆನನ್ ಸೂಸೈಡ್​​

    ಅಪಾರ್ಟ್​​ಮೆಂಟ್​​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

    ನಟಿ ಆತ್ಮಹತ್ಯೆಗೆ ನಿಖರ ಕಾರಣವೇನು? ಎಂದು ತನಿಖೆ ಶುರು!

ತಿರುವನಂತಪುರಂ: ಖ್ಯಾತ ಮಲಯಾಳಂ ನಟಿ ರೆಂಜೂಷಾ ಮೆನನ್ ತಮ್ಮ ಅಪಾರ್ಟ್​​ಮೆಂಟ್​​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇನ್ನೂ, ನಟಿ ಆತ್ಮಹತ್ಯೆಗೆ ನಿಖರ ಕಾರಣವೇನು ಎಂದು ತಿಳಿದು ಬಂದಿಲ್ಲ.

ನಟಿ ರೆಂಜೂಷಾ ಮೆನನ್ ಕೇವಲ 35 ವರ್ಷ. ಸಣ್ಣ ವಯಸ್ಸಿನಲ್ಲೇ ಅಪಾರ ಸಾಧನೆ ಮಾಡಿದ್ದ ರೆಂಜೂಷಾ ತನ್ನ ಕುಟುಂಬದ ಜತೆ ಹಲವು ವರ್ಷಗಳಿಂದ ಇದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸ ಇದ್ದರು.

ಅಸಲಿಗೆ ಆಗಿದ್ದೇನು..?

ರಾತ್ರಿ ರೂಮ್​ಗೆ ಹೋಗಿ ಮಲಗಿದ್ದ ರೆಂಜೂಷಾ ಇಂದು ಎಷ್ಟೊತ್ತಾದ್ರೂ ಬಾಗಿಲು ತೆಗೆದಿರಲಿಲ್ಲ. ಕಾರಣ ತನ್ನ ಪೋಷಕರಿಗೆ ಅನುಮಾನ ಬಂದಿತ್ತು. ಬಳಿಕ ಹೇಗೋ ರೂಮಿನ ಬಾಗಿಲು ಮುರಿದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ನಟಿ ಶವ ಪತ್ತೆಯಾಗಿದೆ.

ಕೇರಳ ಪೊಲೀಸರಿಂದ ತೀವ್ರಗೊಂಡ ತನಿಖೆ

ಸದ್ಯ ಕೇರಳ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ರೆಂಜೂಷಾ ಮೆನನ್ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದರು. ಜತೆಗೆ ಮಲಯಾಳಂ ಚಿತ್ರಗಳಲ್ಲೂ ಉತ್ತಮ ಪಾತ್ರಗಳನ್ನು ಮಾಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಖ್ಯಾತ ನಟಿ ರೆಂಜೂಷಾ ಆತ್ಮಹತ್ಯೆ; ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ; ಅಸಲಿಗೆ ಆಗಿದ್ದೇನು..?

https://newsfirstlive.com/wp-content/uploads/2023/10/Renjusha-menon.png

Load More