newsfirstkannada.com

ಮಲಯಾಳಂ ಚಿತ್ರರಂಗದಲ್ಲಿ ಮತ್ತೊಂದು ದುರಂತ; ನಟಿ ಅಪರ್ಣಾ ನಾಯರ್ ಅನುಮಾನಾಸ್ಪದ ಸಾವು

Share :

01-09-2023

  ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡ ಪೊಲೀಸರು

  ಕಿರುತೆರೆ ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಅಭಿನಯ

  ನಟಿ ನಿಧನಕ್ಕೆ ಕಂಬನಿ ಮಿಡಿದ ಮಲಯಾಳಂ ಚಿತ್ರರಂಗ

ತಿರುವನಂತಪುರಂ: ಮಲಯಾಳಂ ಕಿರುತೆರೆ ನಟಿ ಅಪರ್ಣಾ ಪಿ. ನಾಯರ್ ಅವರು ತಮ್ಮ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಅಪರ್ಣಾ ಪಿ ನಾಯರ್ ತಿರುವನಂತಪುರಂನ ಕರಮಾನದಲ್ಲಿರುವ ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಕಿರುತೆರೆಯ ಖ್ಯಾತಿ ನಟಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಈ ಘಟನೆ ನಡೆದಾಗ ನಟಿ ಅಪರ್ಣಾ ಅವರ ತಾಯಿ ಮತ್ತು ಸಹೋದರಿ ಇಬ್ಬರೂ ಮನೆಯಲ್ಲಿದ್ದರು. ಅಪರ್ಣಾ ಬೆಡ್ ರೂಂಗೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಕುಟುಂಬಸ್ಥರು ಕಿಲ್ಲಿಪಾಲೆಂನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ನಟಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಬಳಿಕ ನಟಿಯ ತಾಯಿ ಮತ್ತು ಸಹೋದರಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಕರಮಣ ಠಾಣೆ ಪೊಲೀಸರು ಅಸಹಜ ಸಾವು ಎಂದು ದಾಖಲಿಸಿಕೊಂಡು ಈ ಸಾವಿಗೆ ಕಾರಣವೇನು ಎಂದು ತನಿಖೆ ನಡೆಸುತ್ತಿದ್ದಾರೆ.

ಸದ್ಯ ಮೃತ ನಟಿ ಅಪರ್ಣಾ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಮತ್ತಷ್ಟು ವಿವರಗಳನ್ನು ತಿಳಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಮೃತ ಅಪರ್ಣಾ ಪಿ ನಾಯರ್ ಅವರು ಚಂದನಮಜ, ಆತ್ಮಸಖಿ, ಮತ್ತು ದೇವಸ್ಪರ್ಸಂ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕಿರುತೆರೆ ಧಾರಾವಾಹಿಗಳಲ್ಲಿ ಮಾತ್ರವಲ್ಲದೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿ ಅಪರ್ಣಾ ನಿಧನಕ್ಕೆ ಮಲಯಾಳಂ ಚಿತ್ರರಂಗ ಕಂಬನಿ ಮಿಡಿದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಲಯಾಳಂ ಚಿತ್ರರಂಗದಲ್ಲಿ ಮತ್ತೊಂದು ದುರಂತ; ನಟಿ ಅಪರ್ಣಾ ನಾಯರ್ ಅನುಮಾನಾಸ್ಪದ ಸಾವು

https://newsfirstlive.com/wp-content/uploads/2023/09/death-25.jpg

Load More