newsfirstkannada.com

ಬಾಡಿಗಾರ್ಡ್​, ಬಿಗ್​ ಬ್ರದರ್ ಸಿನಿಮಾ ನಿರ್ದೇಶಕನಿಗೆ ಹೃದಯಾಘಾತ; ಸಿದ್ದಿಕ್ ಆರೋಗ್ಯ ಸ್ಥಿತಿ ಈಗ ಹೇಗಿದೆ?

Share :

08-08-2023

  19ರ ದಶಕದಲ್ಲಿ ಹೊಸ ಅಲೆ ಸೃಷ್ಟಿಸಿದ್ದ ಸ್ಟಾರ್ ಡೈರೆಕ್ಟರ್

  ಅನಾರೋಗ್ಯದಿಂದ ಬಳಲುತ್ತಿದ್ದ ಡೈರೆಕ್ಟರ್​ಗೆ ಹೃದಯಾಘಾತ

  ಬಾಲಿವುಡ್​ನಲ್ಲೂ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ರು

ಕೊಚ್ಚಿ: ಮಲಯಾಳಂನ ಖ್ಯಾತ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಸಿದ್ದಿಕ್ ಇಸ್ಮಾಯಿಲ್ (63) ಅವರು ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಅವರನ್ನು ಕೊಚ್ಚಿಯ ಅಮೃತಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಿದ್ದಿಕ್ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಸದ್ಯ ಅಮೃತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಿರ್ದೇಶಕ ಸಿದ್ದಿಕ್ ಅವರು ಮೊದಲೇ ನ್ಯುಮೋನಿಯಾ, ಲೀವರ್​ ಸಮಸ್ಯೆಯಿಂದ ಬಳಲುತ್ತಿದ್ದರು. ಇದರ ನಡುವೆ ಸಿದ್ದಿಕ್ ಅವರಿಗೆ ನಿನ್ನೆ ಹೃದಯಾಘಾತ ಆಗಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಕೃತಕ ಆಕ್ಸಿಜನೇಷನ್ (ECMO) ಯಂತ್ರದ ಮೂಲಕ ಉಸಿರಾಟ ನಡೆಸುತ್ತಿದ್ದಾರೆ ಎಂದು ವರದಿ ಮಾಡಲಾಗಿದೆ.

1989ರಲ್ಲಿ ರಾಮಜೀ ರಾವ್ ಮಾತನಾಡಿದರು ಎನ್ನುವ ಸಿನಿಮಾಕ್ಕೆ ಕ್ಲಾಪ್​ ಮಾಡುವ ಮೂಲಕ ಮಲಯಾಳಂ ಸಿನಿಮಾ ರಂಗಕ್ಕೆ ಸಿದ್ದಿಕ್ ಇಸ್ಮಾಯಿಲ್ ಎಂಟ್ರಿಕೊಟ್ಟರು. ಅಲ್ಲಿಂದ ತಿರುಗಿ ನೋಡಿದ್ದೇ ಇಲ್ಲ. ಸಿನಿಮಾ ರಂಗದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿದರು. 1986ರಲ್ಲಿ ಮೊದಲ ಬಾರಿಗೆ ಪಪ್ಪನ್ ಪ್ರಿಯಪ್ಪೆಟ್ಟ ಪಪ್ಪನ್ ಎನ್ನುವ ಕಥೆ ಬರೆದು ಮೂವಿ ಮಾಡಿ ಹಿಟ್​ ಪಡೆದುಕೊಂಡರು. 1992ರಲ್ಲಿ ವಿಯೆಟ್ನಾಂ ಕಾಲೋನಿ ಸಿನಿಮಾ ಮಾಡಿದರು. 2011ರಲ್ಲಿ ಬಾಲಿವುಡ್ ಸ್ಟಾರ್​ ಸಲ್ಮಾನ್​ ಖಾನ್​ ಜೊತೆ ಬಾಡಿಗಾರ್ಡ್​ ಮೂವಿ ಮಾಡಿ ಸಕ್ಸಸ್​ ಪಡೆದುಕೊಂಡರು. ಇಷ್ಟೇ ಅಲ್ಲದೇ, ಸಿನಿಮಾಗಳಲ್ಲೂ ಇವರು ಆ್ಯಕ್ಟ್ ಮಾಡಿದ್ದರು. ಇವರ ಕೊನೆ ಸಿನಿಮಾ ಬಿಗ್​ ಬ್ರದರ್​ ಕೂಡ ಬಿಗ್​ ಹಿಟ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಡಿಗಾರ್ಡ್​, ಬಿಗ್​ ಬ್ರದರ್ ಸಿನಿಮಾ ನಿರ್ದೇಶಕನಿಗೆ ಹೃದಯಾಘಾತ; ಸಿದ್ದಿಕ್ ಆರೋಗ್ಯ ಸ್ಥಿತಿ ಈಗ ಹೇಗಿದೆ?

https://newsfirstlive.com/wp-content/uploads/2023/08/director_Siddique_SALMAN_KHAN.jpg

Load More