newsfirstkannada.com

ಇದು ದಕ್ಷಿಣ ಭಾರತದ ಏಕೈಕ ದುರ್ಯೋಧನನ ದೇವಸ್ಥಾನ! ಇಲ್ಲಿಯ ಜನರು ಆತನ ಹೆಸರಲ್ಲೇ ತೆರಿಗೆ ಕಟ್ಟುತ್ತಾರೆ

Share :

23-05-2023

    ದಕ್ಷಿಣ ಭಾರತದ ಏಕೈಕ ದುರ್ಯೋಧನನ ದೇವಸ್ಥಾನವಿದು

    ಇಲ್ಲಿಯ ಜನರು ದುರ್ಯೋಧನನ ಹೆಸರಲ್ಲೇ ತೆರಿಗೆ ಕಟ್ಟುತ್ತಾರೆ

    ಬೆಟ್ಟದ ಮೇಲಿದೆ ಈ ದುರ್ಯೋಧನನ ದೇವಸ್ಥಾನ

ಮಹಾಭಾರತದ ವಿಲನ್​ ದುರ್ಯೋಧನ ಬಗ್ಗೆ ಬಹುತೇಕರಿಗೆ ಗೊತ್ತೇ ಇದೆ. ಆದರೆ ಈತನಿಗಾಗಿ ದಕ್ಷಿಣ ಭಾರತದಲ್ಲೊಂದು ದೇವಸ್ಥಾನವಿದೆ ಎಂದರೆ ನಂಬುತ್ತೀರಾ?. ನಂಬಲೇಬೇಕು. ಮಹಾಭಾರತದಲ್ಲಿ ಬರುವ ಕೆಲವು ಪಾತ್ರಗಳನ್ನು ದೇವಸ್ವರೂಪವಾಗಿ ನಂಬುತ್ತಾ, ಪೂಜಿಸುತ್ತಾ ಬಂದಿರುವ ದೇಶ ನಮ್ಮದು. ಆದರೆ ದುರ್ಯೋಧನನ ಬಗ್ಗೆ ನಿರ್ಮಾಣವಾಗಿರುವ ದೇವಸ್ಥಾನ ತೀರಾ ವಿರಳ. ಆದರೆ ದಕ್ಷಿಣ ಭಾರತದಲ್ಲಿ ದರ್ಯೋಧನನ್ನು ಪೂಜಿಸುವ ದೇವಾಲಯವಿದೆ.

ಹೌದು. ಪಾಂಡವರಿಗೆ ಪರ-ವಿರೋಧಿಗಳಿದ್ದಾರೆ. ಕೌರವರಿಗೂ ಪರ-ವಿರೋಧಿಗಳಿದ್ದಾರೆ. ಆದರೆ ದುರ್ಯೋಧನ ಮಾತ್ರ ತನ್ನ ವ್ಯಕ್ತಿತ್ವದಿಂದ ವಿಲನ್​ ಅನಿಸಿಕೊಂಡಿದ್ದಾನೆ. ಅಂದಹಾಗೆಯೇ ಈತನ ಮೂಲ ಹೆಸರು ಸುಯೋದನ. ಆತನ ಕೆಟ್ಟ ವರ್ತನೆಯಿಂದಾಗಿ ದುರ್ಯೋಧನ ಎಂದು ಹೆಸರು ಬದಲಾಗುತ್ತದೆ.

ಮಲೆನಡ ಇದುವೇ ದುರ್ಯೋಧನನಾಗಿ ನಿರ್ಮಿತವಾಗಿರುವ ದಕ್ಷಿಣ ಭಾರತದ ಏಕೈಕ ದೇವಸ್ಥಾನ. ಮಲೆ ಅಂದರೆ ಬೆಟ್ಟ. ನಡ ಎಂದರೆ ದೇವಸ್ಥಾನ. ಹಾಗಾಗಿ ಇದು ಬೆಟ್ಟದ ಮೇಲಿರುವ ದೇವಸ್ಥಾನವಿದು. ಈ ದೇವಸ್ಥಾನದಲ್ಲಿ ಗರ್ಭಗುಡಿ. ಮುಖ್ಯಪ್ರಾಣ ದೇವರು, ಮೂಲ ಗುಡಿ ಅನ್ನೋದು ಇಲ್ಲ. ಆದರೆ ಇಲ್ಲೊಂದು ಮಂಟಪವಿದೆ. ಅಲ್ಲೂ ಯಾವ ದೇವರ ಪ್ರತಿಷ್ಠಾಪನೆ ಮಾಡಿಲ್ಲ. ಆದರೆ ಅಲ್ಲೊಂದು ಶಕ್ತಿ ಇದೆ ಎಂಬುದು ಬಲವಾದ ನಂಬಿಕೆ. ಆ ಶಕ್ತಿಯೇ ದುರ್ಯೋಧನ ಎಂಬುದು ಭಕ್ತಾದಿಗಳ ನಂಬಿಕೆ.

ಮಂಟಪ

3 ಮೂರ್ತಿಗಳ ಪ್ರತಿಷ್ಠಾಪನೆ ಇದೆ.. ಆದರೆ ಅದಾವುದು ದುರ್ಯೋಧನನ ಮೂರ್ತಿಯಲ್ಲ!

ಕೇರಳದ ಇಡಕ್ಕಾಡ್​ನಲ್ಲಿರುವ​ ಮಲೆನಡ ದೇವಸ್ಥಾನದಲ್ಲಿ ದುರ್ಯೋಧನನ್ನು ಬಿಟ್ಟರೆ, ಮೂರು ಮೂರ್ತಿಗಳ ಸ್ಥಾಪನೆಯಾಗಿದೆ. ಅದರಲ್ಲಿ ಒಂದು ದುರ್ಯೋಧನನ ತಾಯಿ ಗಾಂಧಾರಿ, ಪತ್ನಿ ಭಾನುಮತಿ, ಪ್ರಾಣ ಸ್ನೇಹಿತ ಕರ್ಣ.

ದೇವಸ್ಥಾನದ ಇತಿಹಾಸ

ಪಾಂಡವರ ವನವಾಸದ ಸಮಯದಲ್ಲಿ ಪಾಂಡವರನ್ನು ಹುಡಕುತ್ತಾ ದುರ್ಯೋಧನ ಈ ಹಾದಿಯಲ್ಲಿ ಬರುತ್ತಾನೆ. ಆಗ ಆತನಿಗೆ ಬಾಯಾರಿಕೆ ಆಗುತ್ತದೆ. ಈ ವೇಳೆ ಅಲ್ಲೇ ಇದ್ದ ಮುದುಕಿ ಬಳಿ ನೀರು ಕೇಳುತ್ತಾನೆ. ಮುದುಕಿ ಸಣ್ಣ ಮಡಕೆಯಲ್ಲಿದ್ದ ನೀರನ್ನು ಆತನಿಗೆ ನೀಡುತ್ತಾಳೆ. ದುರ್ಯೋಧನ ನೀರನ್ನು ಕುಡಿಯುವ ಸಂದರ್ಭದಲ್ಲಿ ಆ ಮುದುಕಿಗೆ ಆತ ಕ್ಷತ್ರೀಯ ಎಂದು ಗೊತ್ತಾಗುತ್ತದೆ. ಕುರುವ ಜಾತಿಯ ಅಜ್ಜಿಗೆ ಈ ವಿಚಾರದಿಂದ ತಿಳಿದು ಭಯದ ಜೊತೆಗೆ ಇದೊಂದು ದೊಡ್ಡ ಅಪರಾಧ ಎಂದು ಗೊತ್ತಾಗುತ್ತದೆ. ಈ ವಿಚಾರ ಒಂದು ವೇಳೆ ದುರ್ಯೋಧನನಿಗೆ ತಿಳಿದರೆ ನನಗೆ ಎಂಥಾ ಶಿಕ್ಷೆ ಬೇಕಾದರೂ ಸಿಗಬಹುದು ಅನ್ನುವ ಭಯ ಆಕೆಯನ್ನು ಆವರಿಸುತ್ತದೆ. ಕೊನೆಗೆ ಮನಸ್ಸು ಮಾಡಿ ತಾನು ಮಾಡಿದ ತಪ್ಪಿನ ಬಗ್ಗೆ ಆತನ ಬಳಿಕ ಹೇಳುತ್ತಾಳೆ.

ಈ ವಿಚಾರ ಕೇಳಿದ್ದೇ ತಡ ದದುರ್ಯೋಧನನು ಹಸಿವು, ಬಾಯಾರಿಕೆಗೆ ಜಾತಿ-ಮತ ಇಲ್ಲ ಎಂದು ಹೇಳುತ್ತಾನೆ. ನಂತರ ಸುತ್ತಮುತ್ತಲಿನ 100 ಎಕರೆ ಜಾಗವು ನಿಮ್ಮ ಜಾತಿಯವರಿಗೆ ಕೊಡುತ್ತೇನೆ. ಜೊತೆಗೆ ದೇವಸ್ಥಾನವನ್ನು ಕಟ್ಟಿಸಿಕೊಡುತ್ತೇನೆ. ಆದರೆ ಆ ದೇವಸ್ಥಾನದಲ್ಲಿ ಪೂಜೆ ನೀವೇ ಮಾಡಬೇಕು, ನಿಮ್ಮ ಮನೆತನದವರೇ ಮಾಡಬೇಕು ಎಂದು ಹೇಳುತ್ತಾನೆ.

ಅಚ್ಚರಿಯ ಸಂಗತಿ ಎಂದರೆ ಇಲ್ಲಿಯವರೆಗೂ ಮಲೆನಡ ದೇವಸ್ಥಾನದಲ್ಲಿ ಕುರುವ ಜಾತಿಯವರೇ ಪೂಜೆ ಮಾಡುತ್ತಾರೆ. ಮಾತ್ರವಲ್ಲದೆ ದುರ್ಯೋಧನನ ಹೆಸರಲ್ಲೇ ಅವರು ತೆರಿಗೆ ಕಟ್ಟುತ್ತಾರೆ.

ವಿಶೇಷ ವರದಿ: ಹರ್ಷಿತ್​ ಅಚ್ರಪ್ಪಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇದು ದಕ್ಷಿಣ ಭಾರತದ ಏಕೈಕ ದುರ್ಯೋಧನನ ದೇವಸ್ಥಾನ! ಇಲ್ಲಿಯ ಜನರು ಆತನ ಹೆಸರಲ್ಲೇ ತೆರಿಗೆ ಕಟ್ಟುತ್ತಾರೆ

https://newsfirstlive.com/wp-content/uploads/2023/05/New-Project-67.jpg

Load More