ಮಗುವನ್ನು ಸ್ವಾಗತಿಸಲು ಸಿದ್ಧರಾದ ಯುವಿಕಾ, ಪ್ರಿನ್ಸ್ ನರುಲಾ ದಂಪತಿ
ಆಗಸ್ಟ್‌ನಲ್ಲಿ ಬೇಬಿ ಶವರ್ ಕಾರ್ಯಕ್ರಮದಲ್ಲಿ ಮಿರ ಮಿರ ಮಿಂಚಿದ್ದ ನಟಿ
2018 ಅಕ್ಟೋಬರ್ನಲ್ಲಿ ಪ್ರಿನ್ಸ್ ನರುಲಾ ಜೊತೆ ಮದುವೆಯಾಗಿದ್ದ ಯುವಿಕಾ
ಕನ್ನಡದ ‘ಮಳೆಯಲಿ ಜೊತೆಯಲಿ’ ಸಿನಿಮಾದಲ್ಲಿ ಅಭಿನಯಿಸಿದ ನಟಿ ಯುವಿಕಾ ಚೌಧರಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸ್ಯಾಂಡಲ್ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮಳೆಯಲಿ ಜೊತೆಯಲಿ ಸಿನಿಮಾದಲ್ಲಿ ನಟಿಸುವ ಮೂಲಕ ಯುವಿಕಾ ಚೌಧರಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.
ಇದನ್ನೂ ಓದಿ: ದರ್ಶನ್ ಕೇಸ್ಗೆ ಟ್ವಿಸ್ಟ್ ಕೊಡಲು ಪೊಲೀಸರು ನಿರ್ಧಾರ; ಆರೋಪಿಗಳಿಗೆ ಮತ್ತೆ ಢವಢವ..!
ಯುವಿಕಾ ಚೌಧರಿ ಮತ್ತು ಪ್ರಿನ್ಸ್ ನರುಲಾ ದಂಪತಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ. ಜೂನ್ 25ರಂದು ಪ್ರಿನ್ಸ್ ನರುಲಾ ಅವರು ತಮ್ಮ ಸ್ವಂತ ಕೆಂಪು ಕಾರಿನ ಪಕ್ಕದಲ್ಲಿ ಆಟಿಕೆ ವಾಹನವನ್ನು ಒಳಗೊಂಡಿರುವ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟಿದ್ದರು. ಆಗಸ್ಟ್‌ನಲ್ಲಿ ಬೇಬಿ ಶವರ್ ಕಾರ್ಯಕ್ರಮದಲ್ಲಿ ಸಖತ್ ಮಿಂಚಿದ್ದರು. ನಟಿ ಎರಡು ವಿಭಿನ್ನ ಥೀಮ್ನಲ್ಲಿ ಫೋಟೋ ಶೂಟ್ ಮಾಡಿಕೊಂಡಿಕೊಂಡಿದ್ದಾರೆ.
View this post on Instagram
ಬಿಳಿ ಬಣ್ಣದ ಗೌನ್ನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಮತ್ತೊಂದು ವಜ್ರದಂತಿರೋ ಗೌನ್ನಲ್ಲಿ ಬೇಬಿ ಬಂಪ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಫೋಟೋಗಳನ್ನು ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫೋಟೋಸ್ ನೋಡಿದ ಅಭಿಮಾನಿಗಳು ಹಾಗೂ ಸಿನಿಮಾ ತೆರೆಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಗ್ಬಾಸ್ ಸೀಸನ್ 9ರ ಸೆಟ್‌ನಲ್ಲಿ ಪ್ರಿನ್ಸ್ ನರುಲಾ ಮತ್ತು ಯುವಿಕಾ ಚೌಧರಿ ಭೇಟಿಯಾದರು. ಬಳಿಕ ಅಕ್ಟೋಬರ್ 12, 2018ರಂದು ಮುಂಬೈನಲ್ಲಿ ವಿವಾಹ ಆದರು ಮತ್ತು ಈಗ ತಮ್ಮ ಮೊದಲ ಮಗುವನ್ನು ಒಟ್ಟಿಗೆ ನಿರೀಕ್ಷಿಸುತ್ತಿದ್ದಾರೆ.
ಜೊತೆಗೆ ತಾಯಿ ಹಾಗೂ ಹುಟ್ಟುವ ಮಗುವಿಗೆ ಶುಭ ಹಾರೈಸುತ್ತಿದ್ದಾರೆ. ನಟಿ ಯುವಿಕಾ ಚೌಧರಿ ಕನ್ನಡದ ಮಳೆಯಲಿ ಜೊತೆಯಲಿ, ಹಿಂದಿಯ ಓಂ ಶಾಂತಿ ಓಂ, ಎನಿಮಿ, ವೀರೇ ಕಿ ವೆಡ್ಡಿಂಗ್ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದ ಅವರು ಬಿಗ್ ಬಾಸ್ ಹಿಂದಿ ಶೋನಲ್ಲಿಯೂ ಭಾಗವಹಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ