newsfirstkannada.com

ಸತ್ತು ಹೋಗಿದ್ದೇನೆ ಎಂದು 2 ವರ್ಷ ತಲೆಮರೆಸಿಕೊಂಡಿದ್ದ ರೌಡಿಶೀಟರ್ ಮಲ್ಲಿ; ಖತರ್ನಾಕ್ ಐಡಿಯಾ ಮಾಡಿದ್ರು ತಗ್ಲಾಕೊಂಡಿದ್ದು ಹೇಗೆ?

Share :

21-11-2023

    ಎರಡು ವರ್ಷಗಳಿಂದ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ ಆಸಾಮಿ

    ಸತ್ತು ಹೋಗಿದ್ದಾನೆ ಎನ್ನುತ್ತಿದ್ದ ಕುಟುಂಬಸ್ಥರು, ಗೆಳೆಯರು, ಪರಿಚಿತರು

    ಊರೂರು ಸುತ್ತುತ್ತಾ ತಲೆಮರೆಸಿಕೊಂಡಿದ್ದ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ

ಬೆಂಗಳೂರು: ಕಳ್ಳರು ಚಾಪೆ ಕೆಳಗೆ ತೂರಿದರೆ ಪೊಲೀಸರು ರಂಗೋಲಿ ಕೆಳಗೆ ನುಸುಳುತ್ತಾರೆ ಅನ್ನೋ ಮಾತು ಸುಮ್ಮನೆ ಹೇಳಲ್ಲ. ಖದೀಮರು ಎಷ್ಟೇ ಕಿಲಾಡಿ ಐಡಿಯಾ ಮಾಡಿದ್ರೆ ಒಂದಲ್ಲ ಒಂದು ಖಾಕಿ ಪಡೆ ಕೈಯಲ್ಲಿ ಸಿಕ್ಕಿ ಬೀಳಲೇ ಬೇಕು. ಇಂತಹದೇ ಒಂದು ಇಂಟ್ರೆಸ್ಟಿಂಗ್ ಕೇಸ್ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಸತ್ತು ಹೋಗಿದ್ದೇನೆ ಎಂದು ತಲೆಮರೆಸಿಕೊಂಡಿದ್ದ ರೌಡಿಶೀಟರ್ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರೌಡಿಶೀಟರ್‌ ಮಲ್ಲಿಯ ಮಳ್ಳಾಟ ಹಾಗೂ ನಾಟಕಗಳಿಗೆಲ್ಲಾ ಪೊಲೀಸರು ಬ್ರೇಕ್ ಹಾಕಿರೋದೇ ರೋಚಕವಾಗಿದೆ.

ಡೆತ್ ಸರ್ಟಿಫಿಕೇಟ್ ರೆಡಿ ಮಾಡಿದ್ದ ‘ಮಲ್ಲಿ’ ಮನೆಯವರು!  

ಕಾಡುಬೀಸನಹಳ್ಳಿ ಸೋಮನ ಡ್ರೈವರ್ ಕೊಲೆ ಪ್ರಕರಣದ ಮಲ್ಲಿ ಅಲಿಯಾಸ್ ಮಲ್ಲಿಕಾರ್ಜುನ ಆರೋಪಿಯಾಗಿದ್ದ. ಬಳಿಕ ರಾಜಾನುಕುಂಟೆಯಲ್ಲಿ ಒಂದು ಕೊಲೆ ಕೇಸ್ ಕೂಡ ಈತನ ಮೇಲಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಆಸಾಮಿ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ. ಮಲ್ಲಿ ಮನೆಗೆ ಹೋಗಿ ಪೊಲೀಸರು ವಿಚಾರಿಸಿದಾಗ ಸತ್ತು ಹೋಗಿದ್ದಾನೆ ಎಂದು ಕುಟುಂಬಸ್ಥರು, ಮಲ್ಲಿಯ ಗೆಳೆಯರು, ಪರಿಚಿತರು ಹೇಳುತ್ತಿದ್ದಾರೆ.

ರೌಡಿಶೀಟರ್ ಮನೆಯವರು ಮಲ್ಲಿಕಾರ್ಜುನ ಸತ್ತಿದ್ದಾನೆ ಅನ್ನೋದಕ್ಕೆ ಡೆತ್ ಸರ್ಟಿಫಿಕೇಟ್ ಸೇರಿದಂತೆ ಬೇಕಾದ ದಾಖಲೆ ಪತ್ರಗಳನ್ನು ರೆಡಿ ಮಾಡಿದ್ದರು. ಇಷ್ಟಾದರೂ ಸಿಸಿಬಿ ಪೊಲೀಸರಿಗೆ ಅನುಮಾನವಿತ್ತು. ಕೊನೆಗೆ ತಲಾಶ್ ಮಾಡಿ ನೋಡಿದಾಗ ಮಲ್ಲಿ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿದೆ. ಊರೂರು ಸುತ್ತುತ್ತಾ ತಲೆಮರೆಸಿಕೊಂಡಿದ್ದ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿಯನ್ನ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸತ್ತು ಹೋಗಿದ್ದೇನೆ ಎಂದು 2 ವರ್ಷ ತಲೆಮರೆಸಿಕೊಂಡಿದ್ದ ರೌಡಿಶೀಟರ್ ಮಲ್ಲಿ; ಖತರ್ನಾಕ್ ಐಡಿಯಾ ಮಾಡಿದ್ರು ತಗ್ಲಾಕೊಂಡಿದ್ದು ಹೇಗೆ?

https://newsfirstlive.com/wp-content/uploads/2023/11/Bangalore-Rowdi-Sheeter.jpg

Load More