ಮಣಿಪುರ ಹಿಂಸಾಚಾರ ಬಗ್ಗೆ PM ಮೋದಿ ಮೌನ ಮುರಿಬೇಕು.!
ಗಲಾಟೆ, ಗದ್ದಲದಲ್ಲೇ ಮುಗಿದ ಸಂಸತ್ ಅಧಿವೇಶನ
ಮೋದಿ ಮೌನಕ್ಕೆ ಕಾರಣವೇನು? ವಿಪಕ್ಷಗಳು ಹೇಳುವುದೇನು?
ಸಂಸತ್ ಅಧಿವೇಶನದಲ್ಲಿ ಮಣಿಪುರ ಹಿಂಸಾಚಾರ ಪ್ರತಿಧ್ವನಿಸಿದೆ. ಪ್ರಧಾನಿ ಮೋದಿ ಮೌನ ಮುರಿಯುವಂತೆ ವಿಪಕ್ಷಗಳು ಒತ್ತಾಯಿಸಿ ಗಲಾಟೆ, ಗದ್ದಲ ನಡೆಸಿವೆ. ರಾಜ್ಯಸಭೆಯಲ್ಲೂ ಮಣಿಪುರ ವಿಚಾರ ಕಿಚ್ಚು ಹೊತ್ತಿಸಿದೆ. ವಿಪಕ್ಷಗಳ ಮೈತ್ರಿಕೂಟ ಇಂಡಿಯಾಗೆ ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ.
ಸಂಸತ್ ಅಧಿವೇಶನದಲ್ಲಿ ಗಲಾಟೆ.. ಗದ್ದಲ.. ಆಡಳಿತ ಪಕ್ಷದ ವಿರುದ್ಧ ವಿಪಕ್ಷಗಳ ಸಂಸದರ ಆಕ್ರೋಶ ಮುಂದುವರೆದಿದೆ. ಮೋದಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಪ್ರಧಾನಿ ಮೌನಕ್ಕೆ ವಿಪಕ್ಷಗಳು ಗದ್ದಲ ಮಾಡಿ ಮೇಜು ಕುಟ್ಟಿ ಆಕ್ರೋಶ ವ್ಯಕ್ತಪಡಿಸಿವೆ.
ಸಂಸತ್ ಅಧಿವೇಶನದಲ್ಲಿ ಮಣಿಪುರ ಹಿಂಸಾಚಾರ ಪ್ರತಿಧ್ವನಿ!
ಸಂಸತ್ನ ಮುಂಗಾರು ಅಧಿವೇಶನದಲ್ಲಿ ಮಣಿಪುರ ಹಿಂಸಾಚಾರ ವಿಚಾರ ಪ್ರತಿಧ್ವನಿಸಿದೆ. ಇವತ್ತು ಬೆಳಗ್ಗೆ ಲೋಕಸಭೆ ಕಲಾಪ ಆರಂಭ ಆಗ್ತಿದ್ದಂತೆ ವಿಪಕ್ಷಗಳು ಗಲಾಟೆ ಶುರು ಮಾಡಿದ್ವು. ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ಮೋದಿ ನಡೆ ಬಗ್ಗೆ ವಿಪಕ್ಷಗಳ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ರು. ಪ್ರಧಾನಿ ಮೋದಿ ಈ ಬಗ್ಗೆ ಹೇಳಿಕೆ ನೀಡಬೇಕೆಂದು ಆಗ್ರಹಿಸಿರುವ ಇಂಡಿಯಾ ಟೀಂನ ನಾಯಕರು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಬಗ್ಗೆ ಚರ್ಚೆ ನಡೆಸಿದರು.
ರಾಜ್ಯಸಭೆ ಕಲಾಪದಲ್ಲೂ ‘ಮಣಿಪುರ’ ಕಿಚ್ಚು!
ಅತ್ತ ರಾಜ್ಯಸಭೆಯಲ್ಲು ಮಣಿಪುರ ವಿಚಾರ ಕಿಚ್ಚು ಹೊತ್ತಿಸಿದೆ. ಮಣಿಪುರ ಉರಿಯುತ್ತಿದೆ. ಆದ್ರೆ ಪ್ರಧಾನಿ ಈಸ್ಟ್ ಇಂಡಿಯಾ ಬಗ್ಗೆ ಮಾತನಾಡ್ತಿದ್ದಾರೆ ಅಂತ ಕಲಾಪದಲ್ಲಿ ಮಲ್ಲಿಕಾರ್ಜುನ ಖರ್ಗೆ ಆಕ್ರೋಶವ್ಯಕ್ತಪಡಿಸಿದರು. ಸದನದಲ್ಲಿ ಪ್ರಧಾನಿ ಮೋದಿ ಏಕೆ ಈ ಬಗ್ಗೆ ಮಾತನಾಡುತ್ತಿಲ್ಲ ಅಂತ ಹೇಳಿದ್ದಾರೆ.
ಮಣಿಪುರ ಹೊತ್ತಿ ಉರಿಯುತ್ತಿದ್ದು ಅತ್ಯಾಚಾರಗಳು ನಡೆಯುತ್ತಿವೆ. ನಾವೆಲ್ಲರು ಇಲ್ಲಿ ಮಣಿಪುರದ ಬಗ್ಗೆ ಅತೀವ ಕಳವಳದಿಂದ ಮಾತನಾಡುತ್ತಿದ್ದೇವೆ. ಆದ್ರೆ ಪ್ರಧಾನಿ ಮೋದಿ ಮಾತ್ರ ಈಸ್ಟ್ ಇಂಡಿಯಾ ಕಂಪನಿ ಬಗ್ಗೆ ಮಾತನಾಡ್ತಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆ ಸಂಸದ
ವಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ತೀವ್ರ ವಾಗ್ದಾಳಿ!
ಮಣಿಪುರ ವಿಚಾರ ಹಿಡಿದು ಮುಗಿಬಿದ್ದಿರುವ ವಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿರೋಧ ಪಕ್ಷಗಳಿಗೆ ಯಾವುದೇ ದಿಕ್ಕು, ದೆಸೆ ಇಲ್ಲ, ಆದ್ರೂ ಇಂಡಿಯಾ ಅಂತ ಹೆಸರಿಟ್ಟುಕೊಂಡಿದ್ದಾರೆ. ಲೇವಡಿ ಮಾಡಿದ್ದಾರೆ ಅಂತ ಕೇಂದ್ರದ ಮಾಜಿ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ನೀವು ಏನೇ ಹೇಳಿದ್ರೂ ನಾವು ಇಂಡಿಯಾ ಎಂದ ರಾಹುಲ್ ಗಾಂಧಿ
ಇನ್ನು ಇಂಡಿಯಾ ಮೈತ್ರಿಕೂಟವನ್ನು ಟೀಕಿಸಿದ ಪ್ರಧಾನಿ ಮೋದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ. ಮಿಸ್ಟರ್ ಮೋದಿ, ನೀವು ನಮ್ಮನ್ನು ಏನು ಬೇಕಾದರೂ ಕರೆಯಿರಿ ನಾವು ಮಾತ್ರ ಇಂಡಿಯಾ. ನಾವು ಮಣಿಪುರದಲ್ಲಿ ಶಾಂತಿ ತರಲು ಸಹಾಯ ಮಾಡುತ್ತೇವೆ ಎಂದಿದ್ದಾರೆ.
‘ಚರ್ಚೆ ಮಾಡೋದು ಬಿಟ್ಟು ಪಲಾಯನ ಏಕೆ?’
ಇನ್ನು ಮಣಿಪುರ ವಿಚಾರದ ರಚನಾತ್ಮಕ ಚರ್ಚೆಗೆ ವಿಪಕ್ಷಗಳು ಭಾಗವಹಿಸಬೇಕು. ಅವರೇಕೆ ಚರ್ಚೆಯಿಂದ ದೂರ ಓಡ್ತಿದ್ದಾರೆ ಅಂತ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದ್ದಾರೆ. ಈ ಬಾರಿ ಆಗಸ್ಟ್ 15 ರಂದು ಹರ್ ಘರ್ ತಿರಂಗಾ ಅಭಿಯಾನ ನಡೆಸಲು ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ ಅಂತ ಬಿಜೆಪಿ ಸಂಸದೀಯ ಸಭೆ ಬಳಿಕ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ಮಣಿಪುರ ವಿಚಾರಕ್ಕೆ ವಿಪಕ್ಷಗಳು ಎನ್ಡಿಎ ಪಕ್ಷಗಳ ವಿರುದ್ಧ ಮುಗಿಬಿದ್ದಿವೆ. ಈ ಬಗ್ಗೆ ಪ್ರಧಾನಿ ಮೋದಿ ಮೌನ ಮುರಿಯುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ