newsfirstkannada.com

Lok Sabha Election: ಉತ್ತರ ಪ್ರದೇಶದಿಂದ ಸ್ಪರ್ಧೆ ಮಾಡ್ತಾರಾ ಕಾಂಗ್ರೆಸ್​ ಅಧ್ಯಕ್ಷ ಖರ್ಗೆ; ಯಾವ ಕ್ಷೇತವಂತೆ ಗೊತ್ತಾ..?

Share :

14-09-2023

  ಖರ್ಗೆ ಸ್ಪರ್ಧೆಗೆ ಅಖಿಲೇಶ್ ಯಾದವ್​ರಿಂದ ಬೇಕಿದೆ ಗ್ರೀನ್ ಸಿಗ್ನಲ್

  ಉ.ಪ್ರದಿಂದ ಖರ್ಗೆ ಕಣಕ್ಕೆ ಇಳಿಯುತ್ತಿರುವ ಹಿಂದಿದೆ ಒಂದು ಕಾರಣ

  ಎನ್​ಡಿಎ ಒಕ್ಕೂಟದ ವಿರುದ್ಧ INDIA ಗೆಲುವಿಗೆ ಮಾಸ್ಟರ್ ಪ್ಲಾನ್

ಬೆಂಗಳೂರು: ರಾಷ್ಟ್ರ ರಾಜಕಾರಣದಲ್ಲಿ ಲೋಕಸಭೆ ಚುನಾವಣೆ ಕುರಿತ ಚರ್ಚೆಗಳು ಮತ್ತು ತಂತ್ರಗಳು ಜೋರಾಗಿದೆ. ವಿಶೇಷ ಏನಂದರೆ 2024ರ ಲೋಕಸಭಾ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉತ್ತರ ಪ್ರದೇಶದಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಯಾಕೆ ಉತ್ತರ ಪ್ರದೇಶ ಆಯ್ಕೆ..?
ಉತ್ತರ ಪ್ರದೇಶದಿಂದ ಖರ್ಗೆ ಸ್ಪರ್ಧೆ ಮಾಡುವ ಬಗ್ಗೆ ಕಾಂಗ್ರೆಸ್​ ಚಿಂತನೆ ನಡೆಸಿದ್ಯಂತೆ. ಕಾರಣ ಇಷ್ಟೇ, ಉತ್ತರ ಪ್ರದೇಶದಲ್ಲಿ ಮಾಯಾವತಿ ಅವರ ಬಿಎಸ್ಪಿ ಪಕ್ಷ ಈಗ ದುರ್ಬಲವಾಗಿದೆ. ದಲಿತ ಮತಗಳು ಬಿಎಸ್ಪಿ ಪಕ್ಷಕ್ಕೆ ಹೋಗಲ್ಲ. ದಲಿತ ಮತಗಳನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯಲು ಈ ಪ್ಲಾನ್ ಮಾಡಿದ್ಯಂತೆ.

ಒಂದು ವೇಳೆ ಖರ್ಗೆ ಅವರು ಉತ್ತರ ಪ್ರದೇಶದಿಂದ ಸ್ಪರ್ಧಿಸಿದರೆ ದಲಿತ ಮತಗಳು ಕಾಂಗ್ರೆಸ್​ನತ್ತ ಸರಾಗವಾಗಿ ವಾಲಲಿವೆ ಎಂಬುವುದು ಹಸ್ತಪಡೆಯ ಲೆಕ್ಕಾಚಾರವಾಗಿದೆ. ಜೊತೆಗೆ ಮೋದಿ ನೇತೃತ್ವದ ಎನ್​ಡಿಎ ಒಕ್ಕೂಟದ ವಿರುದ್ಧ INDIA ಗೆಲುವು ಸಾಧಿಸಬೇಕು ಅಂದರೆ ದಲಿತ ಮತಗಳನ್ನು ಸೆಳೆಯೋದು ಕಾಂಗ್ರೆಸ್​ಗೆ ಅನಿವಾರ್ಯವಾಗಿದೆ.

ಯಾವ ಕ್ಷೇತ್ರದಿಂದ ಸ್ಪರ್ಧೆ..?

ವರದಿಗಳ ಪ್ರಕಾರ, ಖರ್ಗೆ ಉತ್ತರ ಪ್ರದೇಶದ ಇಟವಾ ಅಥವಾ ಬಾರಬಂಕಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಈ ಎರಡು ಕ್ಷೇತ್ರದಲ್ಲೂ ದಲಿತ, ಒಬಿಸಿ ಹಾಗೂ ಮುಸ್ಲಿಂ ಸಮುದಾಯದ ಮತಗಳಿವೆ. ಈ ಮೂರು‌ ಸಮುದಾಯದ ಮತ ಕ್ರೋಢೀಕರಿಸಿದರೆ ಖರ್ಗೆ ಗೆಲುವು ನಿಶ್ಚಿತ ಅನ್ನೋದು ಕಾಂಗ್ರೆಸ್​ನ ಲೆಕ್ಕಾಚಾರ.

ಆದರೆ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆಗೆ ಸಮಾಜವಾದಿ ಪಕ್ಷದ ಸಹಕಾರ, ಬೆಂಬಲ ಬೇಕಿದೆ. ಎಸ್ಪಿ ಪಕ್ಷದ ಬೆಂಬಲ ಇಲ್ಲದೇ ಖರ್ಗೆ ಗೆಲುವು ಅಸಾಧ್ಯ. 2024 ರಲ್ಲಿ ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸುವ ಸಂದರ್ಭ ಬಂದರೆ ಖರ್ಗೆ ಪ್ರಧಾನಿ ಅಭ್ಯರ್ಥಿ ಆಗುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Lok Sabha Election: ಉತ್ತರ ಪ್ರದೇಶದಿಂದ ಸ್ಪರ್ಧೆ ಮಾಡ್ತಾರಾ ಕಾಂಗ್ರೆಸ್​ ಅಧ್ಯಕ್ಷ ಖರ್ಗೆ; ಯಾವ ಕ್ಷೇತವಂತೆ ಗೊತ್ತಾ..?

https://newsfirstlive.com/wp-content/uploads/2023/09/MALLIKARJUN.jpg

Load More