newsfirstkannada.com

ಜನ ಉಪವಾಸದಿಂದ ಸಾಯಲಿ ಎಂದು ಅಕ್ಕಿ ಕೊಡದ ಮೋದಿ ಸರ್ಕಾರ- ಮಲ್ಲಿಕಾರ್ಜುನ್​​ ಖರ್ಗೆ

Share :

24-06-2023

    ಸಿಎಂ ಸಿದ್ದರಾಮಯ್ಯ ಕನಸಿನ ಅನ್ನಭಾಗ್ಯ ಯೋಜನೆಗೆ ಎಳ್ಳುನೀರು ಬಿಟ್ಟ ಕೇಂದ್ರ

    ಕೇಂದ್ರ ಸಚಿವ ಅಮಿತ್​ ಶಾ, ಪಿಯೂಷ್ ಗೋಯಲ್ ಭೇಟಿಯಾದ್ರೂ ಸಿಗದ ಅಕ್ಕಿ

    ಪ್ರಧಾನಿ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​​ ಖರ್ಗೆ ಕೆಂಡಾಮಂಡಲ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​​ ಸರ್ಕಾರ ಜಾರಿಗೆ ಮುಂದಾದ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡದ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​​ ಖರ್ಗೆ ಕೆಂಡಮಂಡಲ ಆಗಿದ್ದಾರೆ. ಜನ ಉಪವಾಸದಿಂದ ಸಾಯಲಿ ಎಂದು ಮೋದಿ ಸರ್ಕಾರ ಅಕ್ಕಿ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಈ ಕುರಿತು ಮಾತಾಡಿದ ಮಲ್ಲಿಕಾರ್ಜುನ್​ ಖರ್ಗೆ, ಬಡವರಿಗೆ 10 ಕೆಜಿ ಅಕ್ಕಿ ನೀಡುವುದು ಮೋದಿ ಸರ್ಕಾರಕ್ಕೆ ಇಷ್ಟವಿಲ್ಲ. ಜನ ಉಪವಾಸದಿಂದ ಸಾಯಲಿ ಎಂದು ಅಕ್ಕಿ ನೀಡುತ್ತಿಲ್ಲ. ನಮ್ಮ ಗ್ಯಾರಂಟಿ ಯೋಜನೆಗೆ ಕೇಂದ್ರ ಸರ್ಕಾರ ಕೊಡಲೇಬೇಕು ಎಂದು ಒತ್ತಾಯಿಸಿದರು.

ನಾವು ದಾನ ಮಾಡಿ ಎನ್ನುತ್ತಿಲ್ಲ, ಬದಲಿಗೆ ದುಡ್ಡಿಗೆ ಕೇಳಿದ್ದೇವೆ. ಸ್ಟಾಕ್​​ ಇದೆ ಎಂದಿದ್ದಕ್ಕೆ ಅಕ್ಕಿ ಕೊಡಿ ಎಂದಿದ್ದೇವೆ. ಕಾಂಗ್ರೆಸ್ಸಿಗೆ ಲಾಭವಾಗಲಿದೆ ಎಂದು ರಾಜಕೀಯ ಮಾಡಲಾಗುತ್ತಿದೆ. ಬಡವರಿಗೆ ಅಕ್ಕಿ ಕೊಡಲು ಹಿಂದೇಟು ಹಾಕಬಾರದು. ಕೋವಿಡ್​ ಸಂದರ್ಭದಲ್ಲಿ ಅಕ್ಕಿ ತೆಗೆದುಕೊಳ್ಳಿ ಎಂದಿದ್ದ ಪ್ರಧಾನಿ ಮೋದಿ ಈಗ್ಯಾಕೆ ಸಂಕಷ್ಟದಲ್ಲಿರೋ ಜನರಿಗೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು.

ಬರಿಗೈಲಿ ವಾಪಸ್ಸಾದ ಸಿಎಂ ಸಿದ್ದರಾಮಯ್ಯ

ಅಕ್ಕಿಗಾಗಿ ದೆಹಲಿಗೆ ಹೋಗಿದ್ದ ಸಿಎಂ ಸಿದ್ದರಾಮಯ್ಯ, ಆಹಾರ ಸಚಿವ ಕೆ.ಎಚ್​​ ಮುನಿಯಪ್ಪ ಬಂದ ದಾರಿಗೆ ಸುಂಕ ಇಲ್ಲ ಎನ್ನುವ ರೀತಿಯಲ್ಲಿ ವಾಪಸ್ಸಾಗಿದ್ದಾರೆ. ಸೆಂಟ್ರಲ್​​ ಹೋಮ್​ ಮಿನಿಸ್ಟರ್​ ಅಮಿತ್​ ಶಾ, ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನೆ ಆಗಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜನ ಉಪವಾಸದಿಂದ ಸಾಯಲಿ ಎಂದು ಅಕ್ಕಿ ಕೊಡದ ಮೋದಿ ಸರ್ಕಾರ- ಮಲ್ಲಿಕಾರ್ಜುನ್​​ ಖರ್ಗೆ

https://newsfirstlive.com/wp-content/uploads/2023/06/Kharge.jpg

Load More