newsfirstkannada.com

×

81ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ; ಆರೋಗ್ಯಕರವಾಗಿರಿ ಎಂದ ಪ್ರಧಾನಿ ನರೇಂದ್ರ ಮೋದಿ 

Share :

Published July 21, 2023 at 9:53am

Update July 21, 2023 at 12:26pm

    ಇಂದು ಮಾಪಣ್ಣ ಮಲ್ಲಿಕಾರ್ಜುನ ಖರ್ಗೆ ಹುಟ್ಟಿದ ದಿನ

    ಖರ್ಗೆಗೆ ಶುಭಾಶಯ ಕೋರಿದ ಬಿ ಎಸ್​ ಯಡಿಯೂರಪ್ಪ

    ಮೋದಿ ಶುಭಾಶಯಕ್ಕೆ ಖರ್ಗೆ ರಿಪ್ಲೈ; ಏನಂದ್ರು ಗೊತ್ತಾ?

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗಿಂದು ಹುಟ್ಟು ಹಬ್ಬದ ಸಂಭ್ರಮ. 81ನೇ ಬರ್ತ್​ಡೇಯನ್ನು ಇಂದು ಆಚರಿಸುತ್ತಿದ್ದಾರೆ. ಇವರ ಹುಟ್ಟು ಹಬ್ಬದ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಶುಭಾಶಯ ಕೋರಿದ್ದಾರೆ.

ಟ್ವಿಟ್ಟರ್​ನಲ್ಲಿ ಟ್ವೀಟ್​ ಮಾಡಿರುವ ಮೋದಿ ‘ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜನ್ಮದಿನದ ಶುಭಾಶಯಗಳು. ಅವರು ಧೀರ್ಘ ಮತ್ತು ಆರೋಗ್ಯಕರವಾಗಿ ಜೀವನ ಮುನ್ನಡೆಸಲಿ’ ಎಂದು ಬರೆದುಕೊಂಡಿದ್ದಾರೆ. ಇವರ ಟ್ವೀಟ್​​ 1 ಗಂಟೆಯ ಒಳಗೆ 8,111 ಲೈಕ್​ ಬಂದಿದ್ದು, 976ಬಾರಿ ರೀಟ್ವೀಟ್​ ಆಗಿದೆ. ಅನೇಕರು ಕಾಮೆಂಟ್​ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ.

ಮೋದಿ ಶುಭಾಶಯ ಕಂಡು ಖರ್ಗೆ ಅವರು ಮರು ಉತ್ತರಿಸಿದ್ದಾರೆ. ‘ಧನ್ಯವಾದ ಮೋದಿ ಜಿ’ ಎಂದು ರಿಪ್ಲೈ ಮಾಡಿದ್ದಾರೆ.

ಇನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಸೇರಿದಂತೆ ಅನೇಕ ನಾಯಕರು ಖರ್ಗೆ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

ಮಾಪಣ್ಣ ಮಲ್ಲಿಕಾರ್ಜುನ ಖರ್ಗೆ

ಖರ್ಗೆ ಅವರ ಪೂರ್ಣ ಹೆಸರು ಮಾಪಣ್ಣ ಮಲ್ಲಿಕಾರ್ಜುನ ಖರ್ಗೆ. ಇವರು 21 ಜುಲೈ 1942ರಲ್ಲಿ ಬೀದರ್​ ಜಿಲ್ಲೆಯ ಭಾಲ್ಕಿ ತಾಲೂಕಿನ ಮರವಟ್ಟಿಯಲ್ಲಿ ಜನಿಸಿದರು. ದಲಿತ ಕುಟುಂಬದಲ್ಲಿ ಜನಿಸಿದ ಇವರು ಗುಲ್ಬರ್ಗಾದ ಸರ್ಕಾರಿ ಕಾಲೇಜಿನಲ್ಲಿ ಕಲಾ ಪದವಿಯನ್ನು ಪಡೆದರು. ಬಳಿಕ ಸೇಠ್​ ಶಂಕರಲಾಲ್​ ಲಾಹೋಟಿ ಕಾನೂನು ಕಾಲೇಜಿನಲ್ಲೂ ಪದವಿ ಪಡೆದರು. ಬಳಿಕ ಜಸ್ವೀಸ್​​ ಶಿವರಾಜ್​ ಪಾಟೀಲ್​​ ಅವರ ಕಛೇರಿಯಲ್ಲಿ ಕಿರಿಯರಾಗಿ ತಮ್ಮ ಕಾನೂನು ಅಭ್ಯಾಸವನ್ನು ಪ್ರಾರಂಭಿಸಿದರು.

ಟೌನ್​ ಕಾಂಗ್ರೆಸ್​ ಸಮಿತಿಯ ಅಧ್ಯಕ್ಷ

ಕಾಲೇಜು ಜೀವನದಲ್ಲಿದ್ದಾಗಲೇ ಖರ್ಗೆ ವಿದ್ಯಾರ್ಥಿ ಸಂಘದ ನಾಯಕರಾಗಿ ರಾಜಕೀಯ ಜೀವನ ಆರಂಭಿಸಿದರು. 1969ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​​ ಸೇರಿದರು. ಕಲಬುರಗಿಯ ಟೌನ್​ ಕಾಂಗ್ರೆಸ್​ ಸಮಿತಿಯ ಅಧ್ಯಕ್ಷರಾದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

81ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ; ಆರೋಗ್ಯಕರವಾಗಿರಿ ಎಂದ ಪ್ರಧಾನಿ ನರೇಂದ್ರ ಮೋದಿ 

https://newsfirstlive.com/wp-content/uploads/2023/07/Kharge.jpg

Load More