newsfirstkannada.com

‘ಮುಂದಿನ ವರ್ಷ ಮನೆಯಲ್ಲಿ ಮೋದಿ ಧ್ವಜಾರೋಹಣ ಮಾಡ್ತಾರೆ’- ಮೊದಲ ಬಾರಿ ಕೆಂಪುಕೋಟೆಗೆ ಗೈರಾದ ಖರ್ಗೆ ಹೇಳಿದ್ದೇನು?

Share :

15-08-2023

    ಖರ್ಗೆ ಕೆಂಪುಕೋಟೆ ಧ್ವಜಾರೋಹಣಕ್ಕೆ ಗೈರು ಹಾಜರಾಗಿದ್ದು ಯಾಕೆ?

    ಈ ಹಿಂದೆ AICC ಅಧ್ಯಕ್ಷರಾಗಿದ್ದ ಸೋನಿಯಾಗಾಂಧಿ ಭಾಗಿಯಾಗಿದ್ದರು

    ಮುಂದಿನ ವರ್ಷ ಧ್ವಜಾರೋಹಣ ಮಾಡುವ ಪ್ರಧಾನಮಂತ್ರಿ ಯಾರು?

ನವದೆಹಲಿ: 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕೆಂಪುಕೋಟೆ ಮೇಲೆ ಸತತ 10ನೇ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಧ್ವಜಾರೋಹಣ ಮಾಡಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಪ್ರತಿ ವರ್ಷ ಕಾಂಗ್ರೆಸ್ ಅಧ್ಯಕ್ಷರು ತಪ್ಪದೇ ಭಾಗಿಯಾಗುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಎಐಸಿಸಿ ಅಧ್ಯಕ್ಷರು ಗೈರಾಗುವ ಮೂಲಕ ಸಂಪ್ರದಾಯಕ್ಕೆ ಬ್ರೇಕ್ ಹಾಕಿದ್ದಾರೆ. ಪ್ರಧಾನಮಂತ್ರಿ ಅವರ ಧ್ವಜಾರೋಹಣ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಅಧ್ಯಕ್ಷರ ಗೈರು ಹಾಜರಿ ರಾಷ್ಟ್ರ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ದೆಹಲಿ ಕೆಂಪುಕೋಟೆಯಲ್ಲಿ ಇಂದು ನಡೆದ 77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಿಂದ ಕಾಂಗ್ರೆಸ್ ಸಂಪೂರ್ಣವಾಗಿ ದೂರ ಉಳಿದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗಾಗಿ ಮೀಸಲಿದ್ದ ಕುರ್ಚಿ ಖಾಲಿಯಿದ್ದು ಹೊಸ ಸಂದೇಶವನ್ನು ರವಾನಿಸಿದೆ. ಈ ಹಿಂದೆ ಎಐಸಿಸಿ ಅಧ್ಯಕ್ಷರಾಗಿದ್ದ ಸೋನಿಯಾಗಾಂಧಿ ಅವರು ಕೆಂಪುಕೋಟೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೇ ಮೊದಲ ಬಾರಿಗೆ ಕಾಂಗ್ರೆಸ್ ಅಧ್ಯಕ್ಷರು ಕೆಂಪುಕೋಟೆ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ.

ಇದನ್ನೂ ಓದಿ: Independence Day 2023: ದೇಶ ಮಣಿಪುರದ ಜನತೆಯ ಜೊತೆಗಿದೆ, ಶಾಂತಿಯಿಂದಲೇ ಇದಕ್ಕೆ ಪರಿಹಾರ ಸಿಗಲಿದೆ: ಕೆಂಪುಕೋಟೆ ಮೇಲೆ ಮೋದಿ ಭಾಷಣ

ಮೋದಿ ಧ್ವಜಾರೋಹಣಕ್ಕೆ ಗೈರು ಹಾಜರಾಗಿದ್ದಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ನನಗೆ ಕಣ್ಣಿನ ಸಮಸ್ಯೆ ಇತ್ತು. ಮನೆಯಲ್ಲಿ ಬೆಳಗ್ಗೆ 9.20ಕ್ಕೆ ಧ್ವಜಾರೋಹಣ ಮಾಡಬೇಕಿತ್ತು. ಬಳಿಕ ಕಾಂಗ್ರೆಸ್ ಕಚೇರಿಗೆ ಬಂದು ಧ್ವಜಾರೋಹಣ ಮಾಡಬೇಕಿತ್ತು. ಅದಕ್ಕಿಂತಲೂ ಮುಖ್ಯವಾಗಿ ಕೆಂಪುಕೋಟೆಯಲ್ಲಿ ಭಾರೀ ಭದ್ರತೆ ಇದೆ. ಅಲ್ಲಿ ಪ್ರಧಾನಿ, ಕೇಂದ್ರ ಸಚಿವರು ಹೊರಟ ಬಳಿಕವೇ ಬೇರೆಯವರು ಹೊರಡಬೇಕು. ಹೀಗಾಗಿ ಅಲ್ಲಿಗೆ ಹೋದರೆ, ಕಾಂಗ್ರೆಸ್ ಕಚೇರಿಗೆ ಸರಿಯಾದ ಸಮಯಕ್ಕೆ ಬರಲಾಗಲ್ಲ ಅನ್ನಿಸಿತು. ಹೀಗಾಗಿ ಭದ್ರತೆ ಕಾರಣ, ಸಮಯದ ಅಭಾವದಿಂದ ಅಲ್ಲಿಗೆ ಹೋಗದೇ ಇರೋದೇ ಉತ್ತಮ ಅನ್ನಿಸಿತು ಎಂದು ಎಐಸಿಸಿ ಕಚೇರಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಎಐಸಿಸಿ ಕಚೇರಿಯಲ್ಲಿ ಧ್ವಜಾರೋಹಣ ಮಾಡಿದ ಖರ್ಗೆ

ಕೆಂಪುಕೋಟೆಗೆ ಹೋಗದ ಮಲ್ಲಿಕಾರ್ಜುನ ಖರ್ಗೆಯವರು ದೆಹಲಿಯ ಎಐಸಿಸಿ ಕಚೇರಿಯ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಖರ್ಗೆಯವರು ಅಲ್ಲಿಯೂ ಕೂಡ ಸಂಪ್ರದಾಯವನ್ನು ಬದಿಗೊತ್ತಿ ಸ್ವಾತಂತ್ರ್ಯ ದಿನಾಚರಣೆಯಂದು ಕೇಂದ್ರ ಸರ್ಕಾರದ ವಾಗ್ದಾಳಿ ನಡೆಸಿದ್ದಾರೆ. ಈ ಹಿಂದಿನ ಪ್ರಧಾನಿಗಳು ದೇಶದ ಅಭಿವೃದ್ಧಿಗೆ ದುಡಿದಿದ್ದಾರೆ. ಆದ್ರೀಗ ದೇಶದಲ್ಲಿ ವಿರೋಧ ಪಕ್ಷಗಳನ್ನೇ ಹತ್ತಿಕ್ಕಲಾಗುತ್ತಿದೆ. ವಿಪಕ್ಷ ಸಂಸದರನ್ನು ಪಾರ್ಲಿಮೆಂಟ್‌ನಿಂದ ಸಸ್ಪೆಂಡ್ ಮಾಡಲಾಗುತ್ತಿದೆ. ರಾಜ್ಯಸಭೆಯಲ್ಲಿ ನನ್ನ ಮೈಕ್ ಅನ್ನೇ ಆಫ್ ಮಾಡಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ.

ಮುಂದಿನ ವರ್ಷ ಧ್ವಜಾರೋಹಣ ಮಾಡ ಪ್ರಧಾನಿ ಯಾರು?

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಲ್ಲಿ ಭಾಷಣ ಮಾಡುವಾಗ ದೇಶದ ಜನತೆಗೆ ಒಂದು ಭರವಸೆ ಕೊಟ್ಟಿದ್ದರು. ಮುಂದಿನ ವರ್ಷವೂ ಇದೇ ಕೆಂಪುಕೋಟೆಯಿಂದ ಧ್ವಜಾರೋಹಣ ನೆರವೇರಿಸಿ ಸಾಧನೆ ಪಟ್ಟಿ ನೀಡುವೆ ಎಂದಿದ್ದರು. ಪ್ರಧಾನಿ ಮೋದಿ ಅವರ ಈ ಹೇಳಿಕೆಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಿರುಗೇಟು ನೀಡಿದ್ದಾರೆ. ಮುಂದಿನ ವರ್ಷ ಮತ್ತೊಮ್ಮೆ ನರೇಂದ್ರ ಮೋದಿ ಧ್ವಜಾರೋಹಣ ಮಾಡ್ತಾರೆ. ಅಂದ್ರೆ ತಮ್ಮ ಮನೆಯಲ್ಲಿ ಧ್ವಜಾರೋಹಣ ಮಾಡ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಭವಿಷ್ಯ ನುಡಿದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಮುಂದಿನ ವರ್ಷ ಮನೆಯಲ್ಲಿ ಮೋದಿ ಧ್ವಜಾರೋಹಣ ಮಾಡ್ತಾರೆ’- ಮೊದಲ ಬಾರಿ ಕೆಂಪುಕೋಟೆಗೆ ಗೈರಾದ ಖರ್ಗೆ ಹೇಳಿದ್ದೇನು?

https://newsfirstlive.com/wp-content/uploads/2023/08/narendra-Modi-Kharge.jpg

Load More