/newsfirstlive-kannada/media/post_attachments/wp-content/uploads/2024/11/MAAYA-MUDRER-MISTRY-5.jpg)
ಆರೋಪಿಗಳು ಒಂದು ಹೆಜ್ಜೆ ಮುಂದಿಟ್ಟರೆ ಪೊಲೀಸರು ಅವರಿಗಿಂತ ಹತ್ತು ಹೆಜ್ಜೆ ಹೆಚ್ಚಿಗೆನೇ ಇಟ್ಟಿರುತ್ತಾರೆ. ಕ್ರೈಂ ಲೋಕದಲ್ಲಿ ಕೋಲಾಹಲ ಎಬ್ಬಿಸಿ ನಾನು ಎಲ್ಲವನ್ನೂ ನೀಗಿಸಿಕೊಳ್ಳುತ್ತೇನೆ ಎನ್ನುವರನ್ನು ಇಂದಿನವರೆಗೂ ಪೊಲೀಸರು ಬಿಟ್ಟಿಲ್ಲ. ಈಗ ಇಂದಿರಾನಗರದ ಮಾಯಾ ಗೊಗಾಯ್ ಕೊಲೆ ಪ್ರಕರಣದಲ್ಲಿಯೂ ಕೂಡ ಹಾಗೆ ಆಗಿದ್ದು. ಅಪಾರ್ಟ್​​ಮೆಂಟ್​ನಲ್ಲಿ ತನ್ನ ಪ್ರೇಯಸಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಆರವ್ ಹನೋಯ್​ನನ್ನು ಬೆಂಗಳೂರು ಪೊಲೀಸರು ಉತ್ತರ ಭಾರತದಲ್ಲಿ ಬಂಧಿಸಿದ್ದಾರೆ.
ಅಸ್ಸಾಂ ಚೆಲುವೆಯನ್ನು ಪ್ರೀತಿಸಿದ ಆರವ್ ಹನೋಯ್​ ಬೆಂಗಳೂರಿನ ಇಂದಿರಾನಗರದ ಅಪಾರ್ಟ್​ಮೆಂಟ್​ನಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದ. ನವೆಂಬರ್ 27 ರಂದು ಈ ಒಂದು ಘಟನೆ ನಡೆದಿತ್ತು. ಒಂದು ದಿನದ ಹಿಂದಷ್ಟೇ ಒಟ್ಟಿಗೆ ಕಾಣಿಸಿಕೊಂಡಿದ್ದ ಪ್ರೇಮಿಗಳ ಮಧ್ಯೆ ಅದೇನಾಗಿತ್ತೋ ಅಪಾರ್ಟ್​ಮೆಂಟ್ ಒಳಗೆ ಇಬ್ಬರು ಜೊತೆಗೆ ಹೋಗಿದ್ದರು. ವಾಪಸ್ ಆರವ್ ಒಬ್ಬನೇ ಆಚೆ ಬಂದ ಸಿಸಿಟಿವಿ ದೃಶ್ಯಾವಳಿಗಳು ಸಿಕ್ಕಿದ್ದವು ಅಪಾರ್ಟ್​ಮೆಂಟ್​ನಿಂದ ವಾಸನೆ ಬಂದ ಮೇಲೆ ಕೋಣೆಯ ಬಾಗಿಲು ತೆಗೆದು ನೋಡಿದಾಗ ಮಾಯಾ ಗೊಗಾಯ್ ಕೊಲೆಯಾಗಿದ್ದು ಬೆಳಕಿಗೆ ಬಂದಿತ್ತು
ಅಂದು ತಲೆ ಮರೆಸಿಕೊಂಡು ಹೋಗಿದ್ದ ಮಾಯಾಳ ಪ್ರೇಮಿ ಆರವ್​ನನ್ನು ಉತ್ತರ ಭಾರತದಲ್ಲಿ ಪತ್ತೆ ಹಚ್ಚಿದ ಇಂದಿರಾನಗರ ಪೊಲೀಸರು ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಕೊಲೆಯಾದ ದಿನದಿಂದ ಆರೋಪಿ ಪತ್ತೆಗಾಗಿ ಪೊಲೀಸರು ಎರಡು ತಂಡಗಳನ್ನು ರಚಿಸಿದ್ದರು. ಸದ್ಯ ಉತ್ತರ ಭಾರತದಲ್ಲಿ ಆರವ್​ನನ್ನು ವಶಕ್ಕೆ ಪಡೆದಿರುವ ಪೊಲೀಸರು ಬೆಂಗಳೂರಿಗೆ ಕರೆತರುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us