/newsfirstlive-kannada/media/post_attachments/wp-content/uploads/2024/11/AROV-Hanoy.jpg)
ನಾಲ್ಕು ದಿನಗಳ ಹಿಂದೆ ಇಂದಿರಾನಗರದ ಸರ್ವಿಸ್ ಅಪಾರ್ಟ್​ಮೆಂಟ್​ನಲ್ಲಿ ಮಹಿಳೆಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಆರವ್ ಹನೋಯ್​ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಹನೋಯ್ ಕೇರಳಾ ಮೂಲದವನು ಎಂದು ತಿಳಿದು ಬಂದಿದ್ದು. ಸಿಸಿಟಿವಿಯಲ್ಲಿ ಅಪಾರ್ಟ್​ಮೆಂಟ್​ನಿಂದ ಹೊರಗೊಡೆ ಹೋದ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯ ಬೆನ್ನು ಬಿದ್ದ ಪೊಲೀಸರು ಕೊನೆಗೂ ಆತನನ್ನು ದೇವನಹಳ್ಳಿ ಬಳಿ ಸೆರೆ ಹಿಡಿದಿದ್ದಾರೆ.
ಆರೋಪಿಯ ಬಂಧನಕ್ಕೆ ಒಟ್ಟು ಮೂರು ಟೀಂ ರೆಡಿ ಮಾಡಿತ್ತು ಎಂದು ಪೂರ್ವ ವಿಭಾಗದ ಡಿಸಿಪಿ ದೇವರಾಜ್ ಹೇಳಿದ್ದಾರೆ. ಕೇರಳ ಹಾಗೂ ಉತ್ತರ ಭಾರತಕ್ಕೆ ಟೀಂಗಳನ್ನು ಕಳುಹಿಸಿ ಕೊಡಲಾಗಿತ್ತು. ಕೊಲೆ ಮಾಡಿದ ಬಳಿಕ ಆರೋಪಿ ರೇಲ್ವೆ ಸ್ಟೇಷನ್ ಮೂಲಕ ಉತ್ತರ ಪ್ರದೇಶ, ವಾರಣಸಿ ಸೇರಿ ಹಲವು ಕಡೆಗಳಲ್ಲಿ ಹೋಗಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಅಪರಾಧ ಪ್ರಕರಣಗಳಿಂದ ಬೇಸತ್ತು ಹೋದ ಪೊಲೀಸರು; ಠಾಣೆಯಲ್ಲಿ ಹೋಮ, ಹವನ
/newsfirstlive-kannada/media/post_attachments/wp-content/uploads/2024/11/MAAYA-MUDRER-MISTRY.jpg)
ವೈಯಕ್ತಿಕ ವಿಚರವಾಗಿ ಕೊಲೆ ಮಾಡಿದ್ದಾಗಿ, ಕೊಲೆ ಮಾಡುವ ಉದ್ದೇಶದಿಂದಲೇ ಮಾಯಾಳನ್ನು ಅಪಾರ್ಟ್​ಮೆಂಟ್​ಗೆ ಕರೆದುಕೊಂಡು ಬಂದಿದ್ದಾಗಿ ಆರೋಪಿ ಹೇಳಿದ್ದಾನೆ. ಹಗ್ಗ ಮತ್ತು ಚಾಕುವನ್ನು ಬಳಸಿ ಕೊಲೆ ಮಾಡಿದ್ದಾನಂತೆ. ಹಗ್ಗ ಮತ್ತು ಚಾಕುವನ್ನು ಜಿಪ್ಟೋ ಆ್ಯಪ್ ಮೂಲಕ ಖರೀದಿ ಮಾಡಿದ್ದಾಗಿ ಆರವ್ ಹನೋಯ್ ಹೇಳಿದ್ದಾನೆ. ಬೊಂಬಲ್ ಅನ್ನೋ ಡೇಟಿಂಗ್ ಆ್ಯಪ್ ಮೂಲಕ ಇಬ್ಬರು ಪರಿಚಯವಾಗಿದ್ದಂತೆ, ಕೊಲೆಯಾದ ಮಹಿಳೆ ಹೆಚ್​​ಎಸ್​ಆರ್ ಲೇಔಟ್​ನ್ಲಿ ಕೌನ್ಸಲಿಂಗ್ ಸೆಂಟರ್​ನಲ್ಲಿ ಕೆಲಸ ಮಾಡುತ್ತಿದ್ದಳು ಎಂಬುದು ತಿಳಿದು ಬಂದಿದೆ.
ಉತ್ತರ ಭಾರತದ ಹಲವು ನಗರಗಳನ್ನು ಸುತ್ತಿದ ಆರೋಪಿ ಕೊನೆಗೆ ದೇವನಹಳ್ಳಿ ಬಳಿ ಬಂದಿದ್ದಾನೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಯನ್ನು ಮುಂದುವರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us