newsfirstkannada.com

ಜೈ ಶ್ರೀರಾಮ್​​ ಎಂದಿದ್ದ ಮುಸ್ಲಿಂ ಯುವಕ ಯುವತಿಗೆ ಬೆದರಿಕೆ.. ಆರೋಪಿ ಅರೆಸ್ಟ್​

Share :

Published September 1, 2023 at 6:14pm

Update September 1, 2023 at 6:15pm

    ಜೈ ಶ್ರೀರಾಮ್​ ಎಂದು ರೀಲ್ಸ್​ ಮಾಡಿದ್ದ ಮುಸ್ಲಿಂ ಜೋಡಿ

    ಮುಸ್ಲಿಂ ಯುವಕ ಯುವತಿಗೆ ಬೆದರಿಕೆ ಹಾಕಿದ್ದ ಕಿಡಿಗೇಡಿ!

    ಕಿಡಿಗೇಡಿಯನ್ನು ಬಂಧಿಸಿ ಹೆಡೆಮುರಿ ಕಟ್ಟಿದ ಪೊಲೀಸ್ರು

ಬೆಂಗಳೂರು: ರೀಲ್ಸ್​​ನಲ್ಲಿ ಜೈ ಶ್ರೀರಾಮ್ ಎಂದಿದ್ದ ಜೋಡಿಗೆ ಬೆದರಿಕೆ ಹಾಕಿದ್ದ ಆರೋಪಿಯನ್ನು ತಲಘಟ್ಟಪುರ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಕೋಣನಕುಂಟೆ ಮೂಲದ ನಯಾಜ್ ಖಾನ್ ಅರೆಸ್ಟ್​ ಆದ ಆರೋಪಿ.

ನಯಾಜ್​​ ಆಟೋ ಚಾಲಕ. ಇತ್ತೀಚೆಗೆ ಜೈ ಶ್ರೀರಾಮ್​ ಎಂದು ರೀಲ್ಸ್​​ ಮಾಡಿದ್ದ ಮುಸ್ಲಿಂ ಯುವಕ, ಯುವತಿಗೆ ಬೆದರಿಕೆ ಹಾಕಿದ್ದ. ಜೋಡಿಗೆ ಬೆದರಿಕೆ ಹಾಕಿದ್ದ ವಿಡಿಯೋ ಫುಲ್​ ವೈರಲ್​ ಆಗಿದ್ದು, ಸೋಷಿಯಲ್​ ಮೀಡಿಯಾದಲ್ಲಿ ನಯಾಜ್​​ ವಿರುದ್ಧ ಜನ ಭಾರೀ ಆಕ್ರೋಶ ಹೊರಹಾಕಿದ್ದರು. ಈ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ಈತನನ್ನು ಅರೆಸ್ಟ್ ಮಾಡಿದ್ದಾರೆ.

ಬೆದರಿಕೆ ಹಾಕಿದ್ದ ನಯಾಜ್​​..!

ಬುರ್ಕಾ ತೆಗೆದು ಜೈ ಶ್ರೀರಾಮ್ ಎಂದು ರೀಲ್ಸ್ ಮಾಡಿ ಎಂದು ತಾಕೀತು ಮಾಡಿದ್ದ. ಜತೆಗೆ ನಿಮ್ಮನ್ನು ಸುಮ್ಮನೇ ಬಿಡಲ್ಲ ಎಂದು ಯುವಕ ಯುವತಿಗೆ ಬೆದರಿಕೆ ಹಾಕಿ ವಿಡಿಯೋ ಮಾಡಿದ್ದ. ಬೆದರಿಕೆ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ತಲಘಟ್ಟಪುರ ಪೊಲೀಸರು ಆರೋಪಿ ಅರೆಸ್ಟ್​ ಮಾಡಿ ವಿಚಾರಣೆಗೆ ಒಳಪಡಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈ ಶ್ರೀರಾಮ್​​ ಎಂದಿದ್ದ ಮುಸ್ಲಿಂ ಯುವಕ ಯುವತಿಗೆ ಬೆದರಿಕೆ.. ಆರೋಪಿ ಅರೆಸ್ಟ್​

https://newsfirstlive.com/wp-content/uploads/2023/09/Nayaj.jpg

Load More