ಕಡು ಬಡತನದಲ್ಲಿ ಬೆಂದಿದ್ದವನಿಗೆ ಐಷಾರಾಮಿ ಜೀವನದ ಆಸೆ..!
ಬರೋಬ್ಬರಿ 22 ಲಕ್ಷ ಮೌಲ್ಯದ ಚಿನ್ನವನ್ನು ಕದ್ದಿದ್ದ ಖತರ್ನಾಕ್ ಕಳ್ಳ
ಸೀನಿಯರ್ ಮೋಸ್ಟ್ ಕಳ್ಳ ಪೊಲೀಸರ ಬಲೆಗೆ ಸಿಕ್ಕಿದ್ದೇ ರೋಚಕ
ಬೆಂಗಳೂರು: ಕೆಲವು ದಿನಗಳ ಹಿಂದೆಯಷ್ಟೇ ರಾಜಾಜಿನಗರ ವ್ಯಾಪ್ತಿಯಲ್ಲಿ ಅಂಗಡಿ ಕಳ್ಳತನವೊಂದು ನಡೆದಿತ್ತು. ಈ ಪ್ರಕರಣವನ್ನ ಕೈಗೆತ್ತಿಕೊಂಡು ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಸಿಸಿಟಿವಿ ದೃಶ್ಯಾವಳಿ ಸಿಗುತ್ತೆ. ಇದನ್ನೇ ಆಧರಿಸಿ ಕಾರ್ಯಾಚರಣೆಗೆ ಇಳಿದ ಪೊಲೀಸರು ಕೊನೆಗೂ ಈ ಸೀನಿಯರ್ ಮೋಸ್ಟ್ ಕಳ್ಳನನ್ನ ಬಂಧಿಸಿದ್ದಾರೆ.
ಬಂಧಿತ ಆರೋಪಿ ರಫೀಕ್. ರಫೀಕ್ ಮೂಲತಃ ತುಮಕೂರಿನ ನಿವಾಸಿಯಾಗಿದ್ದು, ವಿದ್ಯೆ ನೈವೇದ್ಯೆ ಮಾಡ್ಕೊಂಡು ಈ ಕಾಯಕ ಶುರು ಮಾಡ್ಕೊಂಡಿದ್ದ. ಕಡು ಬಡತನದಲ್ಲಿ ಬೆಂದಿದ್ದವನಿಗೆ ಐಷಾರಾಮಿ ಜೀವನ ಸಾಗಿಸೋ ಆಸೆಯಿಂದ ಹೀಗೆ ಕಳ್ಳತನಕ್ಕೆ ಇಳಿದಿದ್ದ ಎನ್ನಲಾಗ್ತಿದೆ. ಈಗಾಗಲೇ ಹೇಳಿದಂತೆ 20 ಬಾರಿ ಜೈಲುವಾಸ ಅನುಭವಿಸಿರೋ ಈತ ಕಳೆದ ತಿಂಗಳಷ್ಟೇ ಜೈಲಿನಿಂದ ಹೊರಬಂದಿದ್ದ. ಬಂದವನು ಮತ್ತೆ ಅದೇ ಚಾಳಿಯನ್ನೇ ಮುಂದುವರೆಸಿದ್ದ. ಇದೀಗ ನೆಲಮಂಗಲ ಹಾಗೂ ರಾಜಾಜಿನಗರದಲ್ಲಿ ಕಳ್ಳತನ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದಿದ್ದಾನೆ.
ಸದ್ಯ ಬಂಧಿತ ಆರೋಪಿ ರಫೀಕ್ನಿಂದ ಎರಡು ಪ್ರಕರಣ ಸಂಬಂಧ 22 ಲಕ್ಷ ಮೌಲ್ಯದ 409 ಗ್ರಾಂ ಚಿನ್ನ, 425 ಗ್ರಾಂ ಬೆಳ್ಳಿ, 189 ಗ್ರಾಂ ನಕಲಿ ಚಿನ್ನವನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ. ಜೊತೆಗೆ ಮತ್ತೊಮ್ಮೆ ಜೈಲಿಗೆ ಕಳುಹಿಸಲಾಗಿದ್ದು, ಇನ್ಯಾವ ಮನೆಗೆ ಕನ್ನ ಹಾಕಿದ್ದ ಎಂದು ತನಿಖೆ ನಡೆಸಲಾಗುತ್ತಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ