newsfirstkannada.com

ಬೈಕ್​​, ಆಟೋ, ಟೆಂಪೋ ಮಾಲೀಕರೇ ಹುಷಾರ್​​.. ನೀವು ಓದಲೇಬೇಕಾದ ಸ್ಟೋರಿ ಇದು!

Share :

Published June 28, 2024 at 4:10pm

    ಬರೋಬ್ಬರಿ 18 ಲಕ್ಷ ಮೌಲ್ಯದ ವಾಹನಗಳನ್ನು ಕಳವು ಮಾಡಿದ್ದ ಕಳ್ಳ!

    ವಿವಿ ಪುರಂ ಪೊಲೀಸರಿಂದ ಅರೆಸ್ಟ್​ ಆದ ಖತರ್ನಾಕ್​​ ಕಳ್ಳ ಅಭಿಷೇಕ್

    ಕದ್ದ ವಾಹನಗಳನ್ನು ಮೆಟ್ರೋ ಸ್ಟೇಷನ್​ ಬಳಿ ನಿಲ್ಲಿಸಿ ಮಾರಾಟ ಮಾಡುತ್ತಿದ್ದ

ಬೆಂಗಳೂರು: ಬರೋಬ್ಬರಿ 18 ಲಕ್ಷ ರೂ. ಮೌಲ್ಯದ ವಾಹನಗಳನ್ನು ಕಳವು ಮಾಡಿದ್ದ ಖತರ್ನಾಕ್​ ಕಳ್ಳನನ್ನು ಪೊಲೀಸ್ರು ಅರೆಸ್ಟ್​​ ಮಾಡಿದ್ದಾರೆ. ವಿವಿ ಪುರಂ ಪೊಲೀಸರಿಂದ ಅರೆಸ್ಟ್​ ಆದ ಖತರ್ನಾಕ್​​ ಕಳ್ಳ ಅಭಿಷೇಕ್​​.

ಟೆಂಪೋ, ಆಟೋಗಳು ಮತ್ತು ಬೈಕ್​ಗಳೇ ಈ ಖತರ್ನಾಕ್​ ಕಳ್ಳನ ಟಾರ್ಗೆಟ್​​. ಕದ್ದ ವಾಹನಗಳನ್ನು ಮೆಟ್ರೋ ಸ್ಟೇಷನ್​ ಬಳಿ ನಿಲ್ಲಿಸುತ್ತಿದ್ದ. ಮೆಟ್ರೋ ಸ್ಟೇಷನ್​ ಸರ್ವೀಸ್​​ ರೋಡ್​ನಲ್ಲಿ ನಿಲ್ಲಿಸಿ ವಾಹನಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ.

ಇನ್ನು, ಈತ ಈಗಾಗಲೇ ಬೈಕ್​​ ಕದ್ದು ಕಳ್ಳತನ ಕೇಸ್​ನಲ್ಲಿ ಜೈಲಿಗೆ ಹೋಗಿ ಬಂದಿದ್ದ. ಜೈಲಿಗೆ ಹೋಗಿ ಬಂದ ಮೇಲೆ ಕಳ್ಳತನ ಮುಂದುವರಿಸಿದ್ದ. ಸದ್ಯ ಅಭಿಷೇಕ್​​ ಪೊಲೀಸ್ರಿಗೆ ಸಿಕ್ಕಿಬಿದ್ದಿದ್ದು, ವಿಚಾರಣೆ ವೇಳೆ ತನ್ನ ಕಳ್ಳತನದ ಬಗ್ಗೆ ಬಾಯ್ಬಿಟ್ಟಿದ್ದಾನೆ.

ಪೊಲೀಸ್ರು ಆರೋಪಿಯಿಂದ ಜಯನಗರ, ವಿಜಯನಗರ, ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. 18 ಲಕ್ಷ ರೂ. ಮೌಲ್ಯದ 1 ಟೆಂಪೋ, 3 ಆಟೋ, 3 ಬೈಕ್​ಗಳನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: 13 ಸಾವು.. ತಿಂಗಳ ಹಿಂದಷ್ಟೇ ಟಿಟಿ ವಾಹನ ಖರೀದಿ.. ಅಪ್ಪ-ಅಮ್ಮನ ಜೊತೆ ಪೂಜೆಗೆ ಹೋಗಿದ್ದರು..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೈಕ್​​, ಆಟೋ, ಟೆಂಪೋ ಮಾಲೀಕರೇ ಹುಷಾರ್​​.. ನೀವು ಓದಲೇಬೇಕಾದ ಸ್ಟೋರಿ ಇದು!

https://newsfirstlive.com/wp-content/uploads/2023/12/Auto_Uber.jpg

Load More