newsfirstkannada.com

ಮಿತಿ ಮೀರಿದ ರೌಡಿಸಂ; ಮನೆಗೆ ನುಗ್ಗಿ ತಾಯಿ, ಮಗನ ಮೇಲೆ ತೀವ್ರವಾಗಿ ಹಲ್ಲೆ!

Share :

11-09-2023

    ನಡುರಸ್ತೆಯಲ್ಲೇ ಯುವಕನ ಮೇಲೆ ಹಲ್ಲೆಗೈದ ಪುಂಡರು

    ಮನೆಗೆ ನುಗ್ಗಿ ಯುವಕನ ತಾಯಿಗೂ ತೀವ್ರವಾಗಿ ಹಲ್ಲೆ..!

    ಸಮಾಜದಲ್ಲಿ ಮಿತಿ ಮೀರಿದ ರೌಡಿಸಂ, ಸಾಕಷ್ಟು ಕ್ರೈಮ್​

ಲಕ್ನೋ: ಭಾರತದಲ್ಲಿ ಕ್ರೈಮ್​​ ಪ್ರಕರಣಗಳ ಸಂಖ್ಯೆ ಮಿತಿ ಮೀರಿ ಹೆಚ್ಚಾಗತೊಡಗಿದೆ. ಅದರಲ್ಲೂ ಕೊಲೆ, ವಂಚನೆ, ದರೋಡೆ, ಹಲ್ಲೆ ಕೇಸುಗಳಂತೂ ಸಾಕಷ್ಟು ಪ್ರಮಾಣದಲ್ಲಿ ವರದಿಯಾಗುತ್ತಿವೆ. ಏನೇ ದ್ವೇಷ ಇದ್ರೂ ಈ ರೀತಿಯಲ್ಲಿ ಒಬ್ಬ ವ್ಯಕ್ತಿಯನ್ನ ಥಳಿಸೋದು ಅಂದ್ರೆ ನಿಜಕ್ಕೂ ಮಾನವೀಯತೆ ಸತ್ತೋಗಿದೆಯಾ ಅನ್ನೋ ಪ್ರಶ್ನೆ ಮೂಡದೇ ಇರಲ್ಲ.

ಒಂದು, ಎರಡು ಅಂತ ಲೆಕ್ಕ ಹಾಕಿದ್ರೆ ಎಂಟಕ್ಕೂ ಹೆಚ್ಚು ಜನರಿದ್ದಾರೆ. ಎಲ್ಲರೂ ಸೇರ್ಕೊಂಡು ಒಬ್ಬನನ್ನ ನೆಲಕ್ಕೆ ಕೆಡವಿ ಹಿಗ್ಗಾಮುಗ್ಗಾ ಚಚ್ಚಿದ್ದಾರೆ. ಉತ್ತರಪ್ರದೇಶದ ನೋಯ್ಡಾ ಬಳಿಯ ಬಿಶನ್​ಪುರದಲ್ಲಿ ಈ ಘಟನೆ ನಡೆದಿದೆ.

ನಡು ರಸ್ತೆಯಲ್ಲಿ ಯುವಕನ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ಅಕ್ಕ ಪಕ್ಕದಲ್ಲಿ ಒಂದಷ್ಟು ಜನರಿದ್ರು, ವಾಹನಗಳಲ್ಲಿ ಜನ ಸಂಚಾರವೂ ಇತ್ತು. ಆದ್ರೆ ಯಾರೊಬ್ಬರೂ ಹಲ್ಲೆ ಯಾಕಾಗ್ತಿದೆ, ಇದನ್ನ ತಡೆಯಬೇಕು ಅಂತ ಯೋಚನೆಯೇ ಮಾಡಲಿಲ್ಲ.

ಯುವಕನ ಮೇಲೆ ಹಲ್ಲೆ ಬಳಿಕ ಮನೆಗೂ ನುಗ್ಗಿದ್ದು, ಆತನ ತಾಯಿಯ ಮೇಲೂ ಹಲ್ಲೆ ಮಾಡಿದ್ದಾರೆ. ಜೊತೆಗೆ ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಧ್ವಂಸ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಿತಿ ಮೀರಿದ ರೌಡಿಸಂ; ಮನೆಗೆ ನುಗ್ಗಿ ತಾಯಿ, ಮಗನ ಮೇಲೆ ತೀವ್ರವಾಗಿ ಹಲ್ಲೆ!

https://newsfirstlive.com/wp-content/uploads/2023/09/Crime_Rowdysm.jpg

Load More