ದೇವಿ ಮುಂದೆಯೇ ನಡೆಯಿತು ರಕ್ತದೋಕುಳಿ!
ಹಲ್ಲೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಮೂಳೆ ಮುರಿಯೋ ಹಾಗೆ ಹಲ್ಲೆ ಮಾಡಿದ ಗ್ಯಾಂಗ್
ಬೆಂಗಳೂರು: ಕುಡುಕರ ದೇವಸ್ಥಾನ ಯಾವುದು ಅಂದ್ರೆ ಎಲ್ಲರಿಗೂ ಗೊತ್ತು ಬಾರ್ ಅಂತ. ಜನರು ಇಲ್ಲಿ ಒಂದೇ ಬಾಟೆಲ್ನಲ್ಲಿ ಥರ್ಟಿ.. ಸಿಕ್ಸ್ಟೀ ಹಾಕೊಂಡು ಕುಡಿದು ಎದ್ದು ಹೋದ್ರೆ ಯಾವುದೇ ಪ್ರಾಬ್ಲಂ ಇಲ್ಲ. ಆದ್ರೆ ಇಲ್ಲಿ ಬರೋ ಕೆಲವ್ರು ನೋವು ಸಂಕಟ ಹೊರಗೆ ಹಾಕಿ ಹೋದ್ರೆ. ಇನ್ನು ಕೆಲವ್ರು ಕಿರಿಕ್ ಮಾಡ್ಕೊಂಡು ಹೋಗ್ತಾರೆ. ಹಾಗೆ ಆದ ಕಿರಿಕ್ ಎಫೆಕ್ಟ್ ಯಾವ ಹಂತ ತಲುಪಿದೆ ಗೊತ್ತಾ..?
ಒಂದು ಬೈಕ್. ರಾಕ್ಷಸರ ಅವತಾರವೆತ್ತಿ ಬಂದ ಮೂವರು. ಗುಂಪಲ್ಲಿ ಮಾತಾಡುತ್ತಿವರ ಮೇಲೆ ನೋಡ ನೋಡ್ತಿದ್ದಂತೆ ಅಟ್ಯಾಕ್. ಈ ಘಟನೆ ಜಸ್ಟ್ ಮೂರು ದಿನದ ಹಿಂದೆ ವಿಜಯನಗರದ ಕಾಮಾಕ್ಷಿಪಾಳ್ಯದ ಅಮ್ಮ ಮಹೇಶ್ವರಿ ದೇವಾಲಯದ ಮುಂದೆ ನಡೆದಿದೆ. ಸುಡು ಬಿಸಿಲ ನಡುವೆ ಅಂಗಡಿಯೊಂದರ ಚಾವಣಿ ಕೆಳಗೆ ನಿಂತಿದ್ದವರ ಮೇಲೆ ಕೈನಲ್ಲಿ ಲಾಂಗ್ ಹಿಡ್ಕೊಂಡ್ ಬಂದ ಗ್ಯಾಂಗ್ ದಾಳಿಗೆ ಮುಂದಾಗಿತ್ತು. ಒಬ್ಬ ಸಿಕ್ಕಾಕೊಂಡ್ರೆ ಮತ್ತಿಬ್ಬರು ಕೂದಲೆಳೆ ಅಂತರದಲ್ಲಿ ಎಸ್ಕೇಪ್ ಆಗಿದ್ದಾರೆ. ಇಲ್ಲಿ ಅಟ್ಯಾಕ್ ಮಾಡ್ತಿರೋದು ರಾಜು ಟೀಂ ಆದ್ರೆ. ದಾಳಿಗೊಳಗಾಗಿದ್ದು ರೋಹಿತ್ ಅಂಡ್ ಟೀಂ.
ಬಾರ್ ಗಲಾಟೆ
ರೋಹಿತ್ ಹಾಗೂ ರಾಜು ಟೀಂ ಮೊದಲಿನಿಂದಲೂ ಪರಿಚಯ್ಥರಾಗಿದ್ದು, ಬಾರ್ನಲ್ಲಿ ಕ್ಷುಲ್ಲಕ ಕಾರಣಕ್ಕೆ ರಾಜು ಆ್ಯಂಡ್ ಟೀಂಗೆ ರೋಹಿತ್ ಅವಾಜ್ ಹಾಕಿದ್ದ. ರಾಹುಲ್ ಏರಿಯಾ ಪೂರ್ತಿ ಹವಾ ಮೇಂಟೇನ್ ಮಾಡ್ತಿದ್ದ. ಹೀಗಾಗಿ ಅವಾಜ್ ಹಾಕಿದ್ದ ರೋಹಿತ್ನ ಮೇಲೆ ಅಟ್ಯಾಕ್ ಮಾಡಲು ನಿರ್ಧರಿಸ್ತಾನೆ. ಬಳಿಕ ರಾಜು ಆ್ಯಂಡ್ ಟೀಂ ರೋಹಿತ್ ಗೆಳೆಯರ ಜೊತೆ ಇದ್ದಾಗ ಚೇಸ್ ಮಾಡಿ ರೋಹಿತ್ನ ಬೆನ್ನು ಮೂಳೆ ಮುರಿಯುವಂತೆ ಲಾಂಗ್ನಿಂದ ಹಲ್ಲೆ ನಡೆಸಿದ್ದಾರೆ. ಗಾಯಾಳು ರೋಹಿತ್ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸದ್ಯ ಘಟನೆ ಸಂಬಂಧ ಆರು ಆರೋಪಿಗಳನ್ನ ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ಅದೇನೆ ಇರ್ಲಿ ಬಾರ್ನಲ್ಲಿ ಶುರುವಾದ ಗಲಾಟೆ ರಸ್ತೇಲಿ ಹಲ್ಲೆ ಮೂಲಕ ಅಂತ್ಯ ಆಗಿರೋದು ನಿಜಕ್ಕೂ ವಿಪರ್ಯಾಸ. ಪೊಲೀಸರು ಇಂತಹ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಮುಂದೆ ಇಂತಹ ಅಪರಾಧಗಳು ನಡೆಯದಂತೆ ಕಟ್ಟು ನಿಟ್ಟಿನ ಕ್ರಮ ವಹಿಸಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ