newsfirstkannada.com

ಹಣಕಾಸಿನ ವಿಚಾರಕ್ಕೆ ಗಲಾಟೆ; ಇಬ್ಬರ ಮಧ್ಯೆ ರಾಜಿ ಮಾಡಲು ಹೋದ ಯುವಕನಿಗೆ ಮಚ್ಚಿನಿಂದ ತೀವ್ರ ಹಲ್ಲೆ!

Share :

06-06-2023

  ಇಬ್ಬರ ನಡುವೆ ಹಣಕಾಸಿನ ವಿಚಾರಕ್ಕೆ ಗಲಾಟೆ

  ರಾಜಿ ಸಂಧಾನ ಮಾಡಲು ಹೋಗಿದ್ದ ಯುವಕ

  ಯುವಕನಿಗೆ ಮಚ್ಚು ಲಾಂಗಿನಿಂದ ತೀವ್ರ ಹಲ್ಲೆ

ತುಮಕೂರು: ಇಬ್ಬರು ವ್ಯಕ್ತಿಗಳ ಮಧ್ಯೆ ರಾಜಿ ಮಾಡಿಸಲು ಹೋದ ಯುವಕನಿಗೆ ಮಾರಕಾಸ್ತ್ರಗಳಿಂದ ತೀವ್ರವಾಗಿ ಹಲ್ಲೆ ನಡೆಸಲಾಗಿದೆ. ಇದರ ಪರಿಣಾಮ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಹೀಗಾಗಿ ಹಲ್ಲೆಗೊಳಗಾದ ಯುವಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತುರುವೇಕೆರೆ ತಾಲೂಕಿನ ಕರೆಕಲ್ಲು ಗ್ರಾಮದಲ್ಲಿ ಪ್ರಕರಣ ನಡೆದಿದೆ. ಈ ಕೃತ್ಯದಲ್ಲಿ ದಿಲೀಪ್ ಎಂಬ ಯುವಕ ಗಲಾಟೆ ಬಿಡಿಸಲು ಹೋಗಿ ತೀವ್ರ ಹಲ್ಲೆಗೆ ಒಳಗಾಗಿದ್ದಾನೆ. ಸದ್ಯ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ.

ಅಸಲಿಗೆ ಆಗಿದ್ದೇನು..?

ಪ್ರಸಾದ್​​, ಕಿರಣ್​ ಕುಮಾರ್​​ ಎಂಬುವರ ಮಧ್ಯೆ ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು. ಇಬ್ಬರ ನಡುವೆ ರಾಜೀ ಸಂಧಾನ ಮಾಡಲು ದಿಲೀಪ್​​ ಎಂಟ್ರಿಯಾಗಿದ್ದ. ಮಾತಿಗೆ ಮಾತು ಬೆಳೆದು ಪ್ರಸಾದ್​ ಕಡೆಯವ್ರು ದಿಲೀಪ್​ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಎಸ್ಕೇಪ್​​ ಆಗಿದ್ದಾರೆ. ಈಗ ಗಂಭೀರವಾಗಿ ಗಾಯಗೊಂಡ ದಿಲೀಪ್​​​​​ ಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ತುರುವೇಕೆರೆ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಹಣಕಾಸಿನ ವಿಚಾರಕ್ಕೆ ಗಲಾಟೆ; ಇಬ್ಬರ ಮಧ್ಯೆ ರಾಜಿ ಮಾಡಲು ಹೋದ ಯುವಕನಿಗೆ ಮಚ್ಚಿನಿಂದ ತೀವ್ರ ಹಲ್ಲೆ!

https://newsfirstlive.com/wp-content/uploads/2023/06/Kirik.jpg

Load More