ಝೊಮ್ಯಾಟೊ ಡೆಲಿವರಿ ಬಾಯ್ ಟ್ಯಾಲೆಂಟ್ಗೆ ಮನಸೋತ ನೆಟ್ಟಿಗರು
ಒಂದೇ ವಿಡಿಯೋದಲ್ಲಿ ಝೊಮ್ಯಾಟೊ ಡೆಲಿವರಿ ಬಾಯ್ಸ್ ಕಷ್ಟ ಬೆಳಕಿಗೆ
ಯುವ ಪ್ರತಿಭೆಯಿಂದ ರೆಡಿಯಾದ ಮಾನವ ನಿರ್ಮಿತ ಡ್ರೋನ್ ಡೆಲಿವರಿ
ಇತ್ತೀಚಿನ ದಿನಗಳಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸರಿಯಾದ ಸಮಯಕ್ಕೆ ಹೋಗುವುದು ಬಹಳ ಕಷ್ಟ. ಇದಕ್ಕೆ ಮುಖ್ಯ ಕಾರಣವೇ ಟ್ರಾಫಿಕ್ ಸಮಸ್ಯೆ. ಅದರಲ್ಲೂ ಫುಡ್ ಡೆಲಿವರಿ ಬಾಯ್ಗಳಿಗೆ ತುಂಬಾನೇ ಕಷ್ಟಕರ ಸಂಗತಿ. ಇಂತಹ ಕಾಲದಲ್ಲಿ ಫುಡ್ ಡೆಲಿವರಿ ಬಾಯ್ಗಳು ಮಳೆ, ಗಾಳಿ, ಚಳಿಯನ್ನು ಲೆಕ್ಕಿಸದೇ ಸರಿಯಾದ ಸಮಯಕ್ಕೆ ಹೋಗಿ ಒಂದೊಂದು ಮನೆಗೆ ಪಿಜ್ಜಾವನ್ನು ತಲುಪಿಸುತ್ತಾರೆ. ಸರಿಯಾದ ವಿಳಾಸ ಸಿಗದೆ ಗಲ್ಲಿ ಗಲ್ಲಿಗಳಲ್ಲಿ ಸುತ್ತುತ್ತಾರೆ. ಕೆಲವೊಂದು ಬಾರಿ ಸ್ಪಲ್ಪ ತಡವಾಗಿ ಆರ್ಡರ್ ಡೆಲಿವರಿ ಮಾಡಿದ್ದಕ್ಕೆ ಅದೆಷ್ಟೋ ಜನರ ಬಾಯಿಗೆ ಆಹಾರವಾಗಿ ಬಿಡುತ್ತಾರೆ. ಹೀಗೆ ಇದರಿಂದ ಬೇಸತ್ತ ಝೊಮ್ಯಾಟೊ ಡೆಲಿವರಿ ಬಾಯ್ ಓರ್ವ ಉಪಾಯ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಡೆಲಿವರಿ ಬಾಯ್ ಬೊಂಬಾಟ್ ಐಡಿಯಾ ಏನು..?
ಝೊಮ್ಯಾಟೊ ಡೆಲಿವರಿ ಬಾಯ್ಸ್ ಜೀವನ ಹೇಗೆ ಇರುತ್ತದೆ ಎಂದು ಎಲ್ಲರಿಗೂ ಗೊತ್ತೆ ಇದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಸಖತ್ ವೈರಲ್ ಆಗಿವೆ. ಸೋಹನ್ ರೈ ಎಂಬವವರು ಫುಡ್ ಅನ್ನು ಮನೆ ಮನೆಗೆ ತಲುಪಿಸಲು ಡ್ರೋನ್ ಅನ್ನು ಕಂಡು ಹಿಡಿದಿದ್ದಾರೆ. ಇನ್ನು ಸೋಹನ್ ರೈ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫುಡ್ ಡೆಲಿವರಿ ಮಾಡಲು ಅದೆಷ್ಟು ಸರ್ಕಸ್ ಮಾಡಬೇಕಪ್ಪಾ ಅಂದುಕೊಂಡು, ಅದರಿಂದ ಹೇಗೆ ಹೊರಗಡೆ ಬರಬಹುದು ಎಂಬ ವಿಡಿಯೋವನ್ನು ಮಾಡುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ.
ಒಂದೇ ಒಂದು ವಿಡಿಯೋದಲ್ಲಿ ಇಡೀ ಝೊಮ್ಯಾಟೊ ಡೆಲಿವರಿ ಬಾಯ್ಸ್ ಕಷ್ಟವನ್ನು ತಿಳಿಸಿದ್ದಾರೆ. ಪೋಸ್ಟ್ ಮಾಡಿರೋ ವಿಡಿಯೋ ಜೊತೆಗೆ ‘ಬಹಳ ಸಮಯದಿಂದ ಮಾಡಬೇಕು ಅಂದುಕೊಂಡಿದ್ದೆ. ಇದು ಭಾರತದಲ್ಲಿ ಪ್ರಾಯೋಗಿಕವಾಗಿ ನಡೆಯುತ್ತಿಲ್ಲ. ಡ್ರೋನ್‌ಗಳ ದೊಡ್ಡ ಇಚ್ಛೆ ಇಟ್ಟುಕೊಂಡಿರೋ ನಾನು, ನನ್ನಲ್ಲಿರುವ ಕೌಶಲ್ಯಗಳನ್ನು ಬಳಸಿ ನೇರವಾಗಿ ಪಿಜ್ಜಾವನ್ನು ಮನೆಗೆ ತಲುಪಿಸುವ ಸ್ವಾಯತ್ತ ಡ್ರೋನ್ ಅನ್ನು ನಿರ್ಮಿಸಲು ಬಯಸಿದ್ದೇನೆ. ಇಲ್ಲಿ, ನಾನು ಡ್ರೋನ್ ಅನ್ನು ಸಾಕಷ್ಟು ಕಷ್ಟ ಪಟ್ಟು ನಿರ್ಮಿಸಿದ್ದೇನೆ. ಅದು ಸರಿಯಾಗಿ ಉಪಯೋಗವಾದರೇ ತುಂಬಾ ಉತ್ತಮವಾಗಿರುತ್ತದೆ. ಜನರ ಪ್ರತಿಕ್ರಿಯೆ ಮತ್ತು ಅವರ ಸಂತೋಷವನ್ನು ನೋಡಿದಾಗ ಇದು ನಿಜವಾಗಿಯೂ ಅದ್ಭುತವಾಗಿದೆ ಅನಿಸಿತು. ಇದೊಂದು ಪ್ರಯೋಗವಾಗಿದ್ದು, ಸುರಕ್ಷತೆ ಮತ್ತು ಮುನ್ನೆಚ್ಚರಿಕೆಗಳೊಂದಿಗೆ ನಡೆಸಲಾಗಿದೆ’ ಎಂದು ಬರೆದುಕೊಂಡಿದ್ದಾರೆ.
ಸೋಹನ್ ರೈ ಅವರು ತಮ್ಮಲಿರುವ ಕೌಶಲ್ಯ ಅತ್ಯುತ್ತಮವಾಗಿ ಪ್ರದರ್ಶನ ಮಾಡಿದ್ದಾರೆ. ಡ್ರೋನ್ ಹಾರಲು ಏನೆಲ್ಲ ಉಪಕರಣಗಳು ಬೇಕಾಗುತ್ತೆ ಎಂದು ರೆಡಿ ಮಾಡಿದ್ದಾರೆ. ಅದೇಷ್ಟೋ ಬಾರಿ ಡ್ರೋನ್ ತಯಾರಿಯಲ್ಲಿ ಸಮಸ್ಯೆಗಳು ಕಂಡು ಬಂದರು ಸಹ ಛಲವನ್ನು ಬಿಡದೇ ಕಷ್ಟ ಪಟ್ಟು ನಿಖರವಾದ ವಸ್ತುಗಳನ್ನು ಜೋಡಿಸಿ ಅಂತಿಮವಾಗಿ ಡ್ರೋನ್ ಅನ್ನು ಹಾರಿಸಿದ್ದಾನೆ. ಬಳಿಕ ಆಡರ್ರ್ ಕೊಟ್ಟ ಮನೆಗೆ ಡ್ರೋನ್ ಯಾವುದೇ ಸಮಸ್ಯೆ ಇಲ್ಲದೇ ಮನೆಗೆ ಪಿಜ್ಜಾ ಬಂದು ತಲುಪಿದೆ. ಈ ವಿಡಿಯೋ 1.4 ಮಿಲಿಯನ್ ವಿವ್ಸ್ ಪಡೆದುಕೊಂಡಿದೆ.
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ